Karnataka Politics: CM ಕುರ್ಚಿಗೆ ಸಿದ್ದು ಬೆಂಬಲಕ್ಕೆ ನಿಂತ ಕುರುಬ ಸಮುದಾಯ, DK ಬೆಂಬಲಕ್ಕೆ ನಿಂತ ಒಕ್ಕಲಿಗ ಸಮುದಾಯಕ್ಕೆ ಚೇತನ್ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Karnataka Politics: ಚಂದನವನದ ನಟ ಚೇತನ್ ಕುಮಾರ್ (Chetan Kumar) ಅವರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇದೀಗ ರಾಜ್ಯದ ಸಿಎಂ ಆಯ್ಕೆ ವಿಷಯದಲ್ಲಿ ಚೇತನ್ ಕುಮಾರ್ ಅವರು ತಮ್ಮದೇ ಆದ ಅಭಿಪ್ರಾಯ ನೀಡಿದ್ದಾರೆ. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿದೆ. ಸರ್ಕಾರದ ರಚನೆ ಆಗಬೇಕಿದೆ. ಈ ವೇಳೆ ರಾಜ್ಯದ ಸಿಎಂ ಆಗುವವರು ಯಾರು ಎನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಡಿಕೆ ಶಿವಕುಮಾರ್ (D.K.Shivkumar) ಹಾಗೂ ಸಿದ್ದರಾಮಯ್ಯ (Siddaramaiah) ಅವರ ನಡುವೆ ಭಾರಿ ಪೈಪೋಟಿ ಇದೆ. ಇಬ್ಬರಲ್ಲಿ ಯಾರು ಸಿಎಂ ಆಗುತ್ತಾರೆ ಎನ್ನುವ ವಿಷಯ ಚರ್ಚೆ ಆಗುತ್ತಿದ್ದರೆ, ಇತ್ತ ಒಕ್ಕಲಿಗ ಸಮುದಾಯದವರು ಡಿಕೆ ಶಿವಕುಮಾರ್ ಅವರೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ, ಕುರುಬ ಸಮುದಾಯದವರು ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಇದರಲ್ಲಿ ಜಾತಿಯ ವಿಚಾರ ತಲೆ ಎತ್ತಿದೆ. ಇದನ್ನೂ ಓದಿ: Business news: ಹೆಚ್ಚು ಬೇಡ, ಕನ್ನಡ ಒಂದು ಬಂದ್ರೆ ಸಾಕು. – ಸರ್ಕಾರೀ ವೆಬ್ಸೈಟ್ ನಲ್ಲಿ ಮನೆ ಇಂದ ಕೆಲಸ ಮಾಡಿ 25,000 ಗಳಿಸೋದು ಹೇಗೆ ಗೊತ್ತೇ??

ಈ ಚರ್ಚೆಗಳ ನಡುವೆ ನಟ ಚೇತನ್ ಅವರು ಈ ವಿಷಯಕ್ಕೆ ಸೋಷಿಯಲ್ ಮೀಡಿಯಾ (Social Media) ದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಒಕ್ಕಲಿಗ ಮತ್ತು ಕುರುಬ ಸಮುದಾಯದ ಗುಂಪುಗಳು ತಮ್ಮ ಜಾತಿಯಲ್ಲಿ ಹುಟ್ಟಿದ ವ್ಯಕ್ತಿ ಕಾಂಗ್ರೆಸ್ ರಾಜಕಾರಣಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದಾರೆ — ಈ ಹಿಂದೆ ಲಿಂಗಾಯತ ಗುಂಪುಗಳು / ಮಠಾಧೀಶರು ಕೂಡ ಇಂತಹ ಸ್ವಾರ್ಥ ಜಾತಿ ರಾಜಕಾರಣಕ್ಕೆ ಒತ್ತಾಯಿಸಿದ್ದರು ಕರ್ನಾಟಕದಲ್ಲಿ ‘ಮಾಸ್ ಲೀಡರ್’ ಎಂದರೆ ಕೇವಲ ‘ಜಾತಿ ನಾಯಕ’ ಎಂದು ಅರ್ಥೈಸುತ್ತದೆ.

ಆದರೇ…ಜಾತಿ ವಿರೋಧಿ ನಾಯಕ/ನಾಯಕಿ ಮಾತ್ರ ನಿಜವಾದ ಮಾಸ್ ಲೀಡರ್ ಆಗಲು ಸಾಧ್ಯ.. ” ಎಂದು ನಟ ಚೇತನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಚೇತನ್ ಅವರು ಚೇತನ್ ಅವರು ರಾಜ್ಯದ ಸಿಎಂ ಯಾರಾಗಬಹುದು ಎನ್ನುವ ಪ್ರಶ್ನೆಗೆ ಸುಲಭವಾಗಿ ಪರಿಹಾರ ನೀಡಿದ್ದು. ನಿಜಕ್ಕೂ ಸಿಎಂ ಯಾರಾಗಬಹುದು, ಯಾರಿಗೆ ಅದೃಷ್ಟ ಒಲಿಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ:Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

Comments are closed.