Film News: ತನ್ನ ಮದುವೆ ಎಲ್ಲಿ ಎಂಬುದನ್ನು ಘೋಷಣೆ ಮಾಡಿದ ಪ್ರಭಾಸ್- ಎಲ್ಲಿ ಅಂತೇ ಗೊತ್ತೇ? ಇವೆಲ್ಲ ಬೇಕಿತ್ತಾ??

Film News: ಟಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ನಟ ಪ್ರಭಾಸ್ (Actor Prabhas) ಎಂದು ಹೇಳಬಹುದು. ಇವರಿಗೆ ವಯಸ್ಸು 40ದಾಟಿದ್ದರು ಇನ್ನು ಮದುವೆಯಾಗಿಲ್ಲ. ನಟ ಪ್ರಭಾಸ್ ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಲಿದ್ದಾರೆ. ಪ್ರಭಾಸ್ ಅವರು ಎಲ್ಲೇ ಹೋದರು ಮದುವೆ ಯಾವಾಗ ಎನ್ನುವ ಪ್ರಶ್ನೆ ಬರುತ್ತದೆ. ಆ ಪ್ರಶ್ನೆಗೆ ಕೊನೆಗೂ ಪ್ರಭಾಸ್ ಅವರು ಉತ್ತರ ಕೊಟ್ಟಿದ್ದು, ತಮ್ಮ ಮದುವೆ ಎಲ್ಲಿ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Technology: ಬದಲಾಗುತ್ತಿದೆ ಭಾರತ – ಐಫೋನ್ ಬೆನ್ನಲ್ಲೇ ಮತ್ತೊಂದು ಕಂಪನಿ ಇಂದ ಭಾರತದಲ್ಲಿಯೇ ಉತ್ಪಾದನೆ ಆರಂಭ- ಯಾವ ಕಂಪನಿ ಗೊತ್ತೇ? ಮೊಬೈಲ್ ಮತ್ತಷ್ಟು ಅಗ್ಗ.

JOSH 2 | Live Kannada News
Film News: ತನ್ನ ಮದುವೆ ಎಲ್ಲಿ ಎಂಬುದನ್ನು ಘೋಷಣೆ ಮಾಡಿದ ಪ್ರಭಾಸ್- ಎಲ್ಲಿ ಅಂತೇ ಗೊತ್ತೇ? ಇವೆಲ್ಲ ಬೇಕಿತ್ತಾ?? https://sihikahinews.com/2023/06/08/actor-prabhas-marriage-announced/

ಪ್ರಭಾಸ್ ಅವರ ಬಹುನಿರೀಕ್ಷಿತ ಆದಿ ಪುರುಷ್ (Adi Purush) ಸಿನಿಮಾ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಟ್ರೈಲರ್ ಮೊನ್ನೆಯಷ್ಟೇ ಬಿಡುಗಡೆ ಆಗಿದ್ದು, ಸಿನಿಮಾದ ಪ್ರೀ ರಿಲೀಸ್ ಇವೆಂಟ್ (Pre release event) ತಿರುಪತಿ (Tirupathi) ಯಲ್ಲಿ ಅದ್ಧೂರಿಯಾಗಿ ನಡೆಯಿತು. ಪ್ರಭಾಸ್ ಅವರನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ತಿರುಪತಿಗೆ ಬಂದಿದ್ದರು. ಚಿನ್ನ ಜಿಯರ್ ಸ್ವಾಮಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಪ್ರೀರಿಲಿಸ್ ಇವೆಂಟ್ ನಲ್ಲಿ ಮಾತನಾಡಿದ ಪ್ರಭಾಸ್ ಅವರು ಮದುವೆ ಬಗ್ಗೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

ನಾನು ಎಲ್ಲಿಯೇ ಹೋದರು ಮದುವೆ ಯಾವಾಗ ಎಂದು ಕೇಳುತ್ತೀರಾ.. ಇಲ್ಲೇ ಮದುವೆ ಮಾಡಿಕೊಳ್ಳುತ್ತೇನೆ, ತಿರುಪತಿಯಲ್ಲೇ ಮದುವೆ ಮಾಡಿಕೊಳ್ಳುತ್ತೇನೆ.. ಎಂದು ಹೇಳಿದ್ದಾರೆ. ಪ್ರಭಾಸ್ ಅವರ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಪ್ರಭಾಸ್ ಅವರ ಮದುವೆ ಯಾವಾಗ ಮತ್ತು ಹುಡುಗಿ ಯಾರು ಎನ್ನುವ ಕುತೂಹಲ, ಜನರಲ್ಲಿದೆ. ಇನ್ನು ಹಲವು ವಿಚಾರಗಳನ್ನು ಹಂಚಿಕೊಂಡ ಪ್ರಭಾಸ್ ಅವರು.. 21 ವರ್ಷಗಳಿಂದ ಓಂ ರಾವತ್ ಚಿತ್ರರಂಗದಲ್ಲಿದ್ದಾರೆ, ಹಿಂದಿನ ಎಲ್ಲಾ ಸಿನಿಮಾಗಿಂತ ಆದಿ ಪುರುಷ್ ಸಿನಿಮಾಗಾಗಿ ಅವರು ಎಷ್ಟು ಕಷ್ಟಪಟ್ಟಿದ್ದಾರೆ ಎನ್ನುವುದನ್ನು ನಾನು ನೋಡಿದ್ದೇನೆ.. ಇದನ್ನೂ ಓದಿ: Real Story: ಆತ ಆರು ವರ್ಷಗಳ ಕಾಲ ತಾಯಿಯ ಶವವನ್ನು ಹಾಗೆ ಇಟ್ಟುಕೊಂಡು ಅದರ ಜೊತೆಯೇ ವಾಸಿಸಿದ್ದ; ಅಸಲಿ ಕಾರಣ ತಿಳಿದ ಪೋಲಿಸರು ಬೆಚ್ಚಿಬಿದ್ದರು: ಎಂಥ ಕಠೋರ ಸತ್ಯ ಹೊರಹಾಕಿದ್ದ ಮಗ!

ಒಂದು ಸಾರಿ ಚಿರಂಜೀವಿ ಅವರನ್ನು ಭೇಟಿ ಮಾಡಿದಾಗ, ನೀವು ರಾಮಾಯಣ ಕಥೆಯ ಸಿನಿಮಾ ಮಾಡುತ್ತಿದ್ದೀರಾ ಅಂತ ಕೇಳಿದ್ರು. ನಾನು ಹೌದು ಎಂದೆ, ಆಗ ಅವರು ಇಂಥ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ, ನಿನಗೆ ಸಿಕ್ಕಿದೆ.. ಎಂದು ಚಿರಂಜೀವಿ ಅವರು ಹೇಳಿದರು ಎಂದು ಹೇಳಿದ್ದಾರೆ ನಟ ಪ್ರಭಾಸ್. ಆದಿ ಪುರುಷ್ ಸಿನಿಮಾಗೆ ಆರಂಭದಿಂದಲೂ ಸಾಕಷ್ಟು ಕಷ್ಟಗಳು ಬಂದವು ಅದೆಲ್ಲವನ್ನು ಎದುರಿಸಿ ಇಂದು ಸಿನಿಮಾ ತಯಾರಾಗಿದೆ ಎಂದಿರುವ ಪ್ರಭಾಸ್ ಅವರು ಜೂನ್ ನಲ್ಲೇ ಬಿಡುಗಡೆ ಆಗುತ್ತದೆ ಎನ್ನುವುದನ್ನು ಅಧಿಕೃತಗೊಳಿಸಿದ್ದಾರೆ. ಇದನ್ನೂ ಓದಿ: Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

Comments are closed.