Film News: ನಟಿ ಆರತಿ ಒಂದು ಸಿನಿಮಾಕ್ಕೆ ಪಡೆಯುತ್ತಿದ್ದ ಸಂಬಳ ಎಷ್ಟಾಗಿತ್ತು? ಈಗಿನ ಕಾಲದ ನಟಿಯರಾಗಿದ್ರೆ ಈ ಸಿನಿಮಾ ಮಾಡ್ತಿದ್ರಾ? ನಿರ್ದೇಶಕ ಭಾರ್ಗವ ಹೇಳಿದ ಕಹಿ ಸತ್ಯ!

Film News: ಚಂದನವನದ ಖ್ಯಾತ ಹಿರಿಯ ನಟಿಯರಲ್ಲಿ ಒಬ್ಬರು ಆರತಿ (Arati). ಈಗ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಿರುವ ಆರತಿ ಅವರು ವಿದೇಶದಲ್ಲಿ ನೆಲೆಸಿದ್ದಾರೆ. 70 ಹಾಗೂ 80ರ ದಶಕದಲ್ಲಿ ಕನ್ನಡ ಚಿತ್ರರಂಗದ ಸುವರ್ಣಯುಗ ನಡೆಯುವ ವೇಳೆ ಆರತಿ ಅವರು ಕನ್ನಡದ ಸ್ಟಾರ್ ಹೀರೋಯಿನ್ (Star Heroine) ಆಗಿದ್ದರು. ಇವರು ಮೊದಲಿಗೆ ಗೆಜ್ಜೆಪೂಜೆ ಸಿನಿಮಾದಲ್ಲಿ ಹೀರೋ ತಂಗಿ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು..

ಆರತಿ ಅವರು ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್ ಸೇರಿದಂತೆ ಕನ್ನಡದ ಎಲ್ಲಾ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದ್ದಾರೆ. ಹಾಗೆಯೇ ಕನ್ನಡದ ಖ್ಯಾತ ನಿರ್ದೇಶಕರ ಜೊತೆಗೂ ಕೆಲಸ ಮಾಡಿದ್ದಾರೆ. ಸಿಪಾಯಿ ರಾಮು, ಉಪಾಸನೆ, ಶುಭಮಂಗಳ, ನಾಗರಹಾವು ಸೇರಿದಂತೆ ನೂರಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಗಿನ ಕಾಲದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಆರತಿ ಅವರು ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಇದರ ಬಗ್ಗೆ ನಿರ್ದೇಶಕ ಭಾರ್ಗವ ಅವರು ಮಾತನಾಡಿದ್ದಾರೆ.. ಇದನ್ನೂ ಓದಿ: Wedding money: ನಿಮ್ಮ ಮದುವೆಯಲ್ಲಿ ನೀವು ಹಣ ಖರ್ಚು ಮಾಡುವುದು ಮಾತ್ರವಲ್ಲ ಈ ಒಂದು ಕೆಲಸ ಮಾಡಿದರೆ ಲಕ್ಷ ಲಕ್ಷ ಹಣ ಗಳಿಸಬಹುದು ಜೊತೆಗೆ ಗಿಫ್ಟ್ ಕೂಡ.. ಹೇಗೆ ಗೊತ್ತಾ?

ನಿರ್ದೇಶಕ ಭಾರ್ಗವ ಅವರು ಹೇಳಿರುವ ಹಾಗೆ.. ಆರತಿ ಅವರು ಪ್ರಭಾಕರ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದ ಮೊದಲ ಸಿನಿಮಾ ಮಾತೃಭಾಗ್ಯ ಹಿಟ್ ಆದ ನಂತರ ಭಾರ್ಗವ ಅವರು ಇವರಿಬ್ಬರನ್ನು ಹಾಕಿಕೊಂಡು ಮತ್ತೊಂದು ಸಿನಿಮಾ ಮಾಡಬೇಕು ಎಂದು ಪ್ಲಾನ್ ಮಾಡಿ, ಆರತಿ ಅವರು ಸಹ ಒಪ್ಪಿಗೆ ಕೊಟ್ಟರು. ಆ ವೇಳೆ ಆರತಿ ಅವರಿಗೆ 40 ಸಾವಿರ ಸಂಭಾವನೆ ಕೊಡಬಹುದು ಎಂದು ಭಾರ್ಗವ ಅವರು ಪ್ಲಾನ್ ಮಾಡಿಕೊಂಡಿದ್ದರಂತೆ. ಸಿನಿಮಾ ಬಗ್ಗೆ ಮಾತನಾಡಲು ಮತ್ತೊಬ್ಬ ಆರತಿ ಅವರನ್ನು ಭೇಟಿ ಮಾಡುವ ಸಲುವಾಗಿ ಕಳಿಸಿದಾಗ, ಅವರು ಭಾರ್ಗವ್ ಅವರನ್ನು ಬರುವುದಕ್ಕೆ ಹೇಳಿ ಕಳಿಸಿದರಂತೆ.

ಭಾರ್ಗವ ಅವರು ಹೋದಾಗ, ಆರತಿ ಅವರು 60,000 ರೂಪಾಯಿ ಹೆಚ್ಚು ಸಂಭಾವನೆ ಕೇಳಿದ್ದರಂತೆ. ಭಾರ್ಗವ ಅವರಿಗೆ ಶಾಕ್ ಆಗಿತ್ತು, ಹೇಗಾದರೂ ಸಾಲ ಆದರೂ ಮಾಡಿ ಅವರಿಗೆ ಸಂಭಾವನೆ ಪೂರ್ತಿ ಕೊಡಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಆದರೆ ಸಿನಿಮಾದಲ್ಲಿ ಎಲ್ಲರ ಕೆಲಸ, ಸಿನಿಮಾ ಮೂಡಿಬಂದ ರೀತಿ ಇದೆಲ್ಲವನ್ನು ನೋಡಿ ಆರತಿ ಅವರು 75,000 ಕೊಡಿ ಸಾಕು ಎಂದು ಹೇಳಿ 25,000 ಕಡಿಮೆ ಮಾಡಿದ್ದಕ್ಕೆ ಭಾರ್ಗವ ಅವರಿಗೆ ಬಹಳ ಸಂತೋಷ ಆಗಿತ್ತಂತೆ. ಆ ಸಿನಿಮಾ ಕೂಡ ಅಂದುಕೊಂಡ ಹಾಗೆ ಹಿಟ್ ಆಯಿತು. ಆಗಿನ ಕಾಲದಲ್ಲೇ ಆರತಿ ಅವರು 1 ಲಕ್ಷ ಸಂಭಾವನೆ ಪಡೆಯುತ್ತಿದ್ದರು ಎನ್ನುವುದು ನಿಜಕ್ಕೂ ಆಶ್ಚರ್ಯಪಡಬೇಕಾದ ವಿಚಾರ.

Comments are closed.