Film News:ಅಧ್ಬುತವಾಗಿ ವಿಲನ್ ಪಾತ್ರ ನಿಭಾಯಿಸುತ್ತಿದ್ದ ನಟ ಶೋಭರಾಜ್ ಆಕ್ಟಿಂಗ್ ಚಂದನವನಕ್ಕೆ ಬೇಡವಾಯ್ತಾ? ಏನನ್ನುತ್ತೆ ನೋಡಿ ಗಾಂಧಿ ನಗರ!

Film News: ಕನ್ನಡ ಚಿತ್ರರಂಗ ಕಂಡಿರುವ ಖ್ಯಾತ ಖಳನಟರಲ್ಲಿ ಒಬ್ಬರು ಶೋಭರಾಜ್ (Shobraj). ಕನ್ನಡದ ದೊಡ್ಡ ಸ್ಟಾರ್ ಗಳ ಎದುರು ವಿಲ್ಲನ್ ಆಗಿ ಮಿಂಚಿದವರು ನಟ ಶೋಭರಾಜ್. ಇವರ ಹೆಸರನ್ನು ಕೇಳಿದರೆ ಭಯ ಪಡುವಂಥ ಸಮಯ ಕೂಡ ಇತ್ತು, ಅಷ್ಟರ ಮಟ್ಟಿಗೆ ಇವರ ಅಭಿನಯ (Acting) ಇರುತ್ತಿತ್ತು ಎನ್ನುವುದು ಇವರು ಅಭಿನಯಿಸಿರುವ ಸಿನಿಮಾಗಳನ್ನು ನೋಡಿದರೆ ಗೊತ್ತಾಗುತ್ತದೆ. ಶೋಭರಾಜ್ ಅವರು ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಇವರ ಬ್ಯಾಗ್ರೌಂಡ್ ಏನು ಗೊತ್ತಾ ? ಇಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Free Bus Service: ಫ್ರೀ ಬಸ್ ಯೋಜನೆ ಒಂದೇ ತಿಂಗಳು ಅವಕಾಶ ಇರುವುದು ಎನ್ನುವಂತೆ ನೂಗು ನುಗ್ಗಲು ಮಾಡಿ ಇತರರಿಗೆ ತೊಂದರೆ ಮಡುವ ಮಹಿಳೆಯರಿಗೆ ಸಾರಿಗೆ ಸಚಿವರ ಸ್ಕ್ರೀಕ್ಟ್ ವಾರ್ನಿಂಗ್!

ನಟ ಶೋಭರಾಜ್ ಅವರಿಗೆ ಚಿಕ್ಕ ವಯಸ್ಸಿನಿಂದಲು ಸಿನಿಮಾಗಳು ಎಂದರೆ ಹುಚ್ಚು. ಅಪ್ಪ ಅಮ್ಮನ ಕಣ್ಣುತಪ್ಪಿಸಿಯು ಹಲವು ಬಾರಿ ಥಿಯೇಟರ್ ಗೆ ಹೋಗಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡುತ್ತಿದ್ದರಂತೆ, ಅಪ್ಪ ಅಮ್ಮನ ಹತ್ತಿರ ದುಡ್ಡು ಕೇಳುವುದು ಬೇಡ ಎಂದು ತಾವೇ ಸಣ್ಣ ಪುಟ್ಟ ಕೆಲಸ ಮಾಡಿ ಸಿನಿಮಾ ನೋಡುತ್ತಿದ್ದರಂತೆ. ತಮಗೆ ಸಿನಿಮಾ ನಟನಾಗಬೇಕು ಎಂದು ಆಸೆ ಇದ್ದರು ಸಹ, ತಮಗೆ ಅವಕಾಶ ಕೊಡೋರು ಯಾರು ಎಂದು ಸುಮ್ಮನಾಗಿದ್ದ ಶೋಭರಾಜ್ ಅವರಿಗೆ ಅವಕಾಶ ಕೊಟ್ಟಿದ್ದು ನಟ ರಘುವೀರ್.

ಶೋಭರಾಜ್ ಅವರಿಗೆ ರಘುವೀರ್ ಅವರ ಪರಿಚಯವಾಗಿ ಇಬ್ಬರ ಸ್ನೇಹ ಬೆಳೆಯಿತು. ನಂತರ ರಘುವೀರ್ ಅವರು ಚೈತ್ರದ ಪ್ರೇಮಾಂಜಲಿ ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದಾಗ, ಶೋಭರಾಜ್ ಅವರು ತಮ್ಮ ಸಿನಿಮಾದಲ್ಲಿ ನಟಿಸಬೇಕು ಎಂದು ಕೇಳಿದರಂತೆ. ಆಗ ಶೋಭರಾಜ್ ಅವರು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು, ಚೈತ್ರದ ಪ್ರೇಮಾಂಜಲಿ ಸಿನಿಮಾದಲ್ಲಿ ಉತ್ತಮವಾಗಿ ನಟಿಸಿ ಮುಂದೆ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡರು. 1990ರಲ್ಲಿ ತೆರೆಕಂಡ ಚೈತ್ರದ ಪ್ರೇಮಾಂಜಲಿ ಸಿನಿಮಾ ಸೂಪರ್ ಹಿಟ್ ಆಯಿತು.

ಮುಂದಿನ ದಿನಗಳಲ್ಲಿ ಶೋಭರಾಜ್ ಅವರು ಹಲವು ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಎದುರು ಖಡಕ್ ವಿಲ್ಲನ್ ಆಗಿ ಮಿಂಚಿದರು. ಗೋಲಿಬಾರ್, ಪೊಲೀಸ್ ಸ್ಟೋರಿ, ಶಬ್ದವೇದಿ, ಸಿಂಹಾದ್ರಿಯ ಸಿಂಹ ಸೇರಿದಂತೆ, ಹಲವು ಖಡಕ್ ವಿಲ್ಲನ್ ಗಳ ಪಾತ್ರದಲ್ಲಿ ನಟಿಸಿದರು. ಎರಡು ದಶಕಗಳ ಕಾಲ ಕನ್ನಡದ ಖ್ಯಾತ ವಿಲ್ಲನ್ ಆಗಿ ನಟಿಸಿದ್ದ ಶೋಭರಾಜ್ ಅವರು ಈಗ ಹೆಚ್ಚಿನ ಅವಕಾಶಗಳು ಸಿಗದೆ ನಟಿಸುವುದು ಕಡಿಮೆಯಾಗಿದೆ. ಅಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ: Kannada Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ’ಸೆಂಟರ್ ಆಫ್ ಅಟ್ರಾಕ್ಷನ್’ ಸ್ನೇಹಾ ನಿಜಕ್ಕೂ ಹೀಗಿದ್ದಾರಾ? ನಂಬೋದಕ್ಕೇ ಸಾಧ್ಯವಿಲ್ಲ ನೋಡಿ!

Comments are closed.