Vastu Tips: ಈ ಮೂರೇ ಮೂರು ವಸ್ತುಗಳು ನಿಮ್ಮ ಲೈಫ್ ಚೇಂಜ್ ಮಾಡಬಹುದು, ಇವುಗಳಿಂದ ಮನೆಯಲ್ಲಿ ಹಣಕ್ಕಿರುವುದಿಲ್ಲ ಕೊರತೆ; ಇಂದೇ ಕೊಂಡು ತನ್ನಿ!

Vastu Tips: ಜನರ ಬದುಕು ಆಧಾರವಾಗಿರುವುದೇ ಹಣದ ಮೇಲೆ ಎಂದರೆ ತಪ್ಪಾಗಲ್ಲ. ಹಣ ಇಲ್ಲದೆ ಯಾರಿಗೂ ಬದುಕಲು ಸಾಧ್ಯವೇ ಇಲ್ಲ. ಇಂದು ನಮ್ಮ ಪ್ರತಿಯೊಂದು ಜೀವನದ ಚಟುವಟಿಕೆಗಳು ಹಣದ ಮೇಲೆ ನಿಂತಿದೆ ಎನ್ನಬಹುದು. ಆದರೆ ಕೆಲವೊಮ್ಮೆ ಎಷ್ಟೇ ದುಡಿದರು, ಎಷ್ಟೇ ಹಣ ಸಂಪಾದನೆ ಮಾಡಿದರು ಅದು ನಮ್ಮ ಕೈಯಲ್ಲಿ ಉಳಿಯುವುದಿಲ್ಲ ಹಾಗಿರುವಾಗ ಇದಕ್ಕೆ ವಾಸ್ತು ಕೂಡ ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ವಾಸ್ತು ಪ್ರಕಾರ ನೀವು ಮನೆಯಲ್ಲಿ ಈ ಕೆಲವು ವಸ್ತುಗಳನ್ನು ಇಟ್ಟುಕೊಂಡರೆ ಹಣದ ಸಮಸ್ಯೆ ಎಂದಿಗೂ ಬರುವುದಿಲ್ಲ.

keep these 3 things in your home for money 1 | Live Kannada News
Vastu Tips: ಈ ಮೂರೇ ಮೂರು ವಸ್ತುಗಳು ನಿಮ್ಮ ಲೈಫ್ ಚೇಂಜ್ ಮಾಡಬಹುದು, ಇವುಗಳಿಂದ ಮನೆಯಲ್ಲಿ ಹಣಕ್ಕಿರುವುದಿಲ್ಲ ಕೊರತೆ; ಇಂದೇ ಕೊಂಡು ತನ್ನಿ! https://sihikahinews.com/2023/06/27/keep-these-3-things-in-your-home-for-money/

ಮೀನಿನ ವಿಗ್ರಹ
ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ಹಣ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರೆ ಮನೆಯಲ್ಲಿ ಮೀನಿನ ವಿಗ್ರಹವನ್ನು ಇಡಬೇಕು. ಇದು ಬೆಳ್ಳಿ ವಿಗ್ರಹವಾಗಿದ್ದರೆ ಇನ್ನೂ ಒಳ್ಳೆಯದು. ಮನೆಯ ಆರ್ಥಿಕ ಸಮಸ್ಯೆಯನ್ನು ನಿವಾರಿಸಲು ಈ ವಿಗ್ರಹ ಮನೆಯಲ್ಲಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು.

ಆಮೆಯ ವಿಗ್ರಹ
ಆಮೆ ನಿಧಾನ ಗತಿಯನ್ನು ತೋರಿಸಿದರೂ ಕೂಡ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಬಹಳ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ವಿಷ್ಣುವಿನ ಪ್ರಿಯವಾಗಿರುವ ಆಮೆಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಂಡರೆ ಮನೆಯಲ್ಲಿ ಸುಖ ಶಾಂತಿ ಎಲ್ಲವೂ ಲಭಿಸುತ್ತದೆ. ಅಷ್ಟೇ ಅಲ್ಲದೆ ಲೋಹದ ಆಮೆಯ ಮೂರ್ತಿ ಮನೆಯಲ್ಲಿ ಇದ್ದರೆ ಮನೆಯಲ್ಲಿ ಸಂತೋಷವೂ ಮನೆ ಮಾಡುತ್ತದೆ. ಇತ್ತೀಚಿಗೆ ಸಾಕಷ್ಟು ಜನ ಆಮೆಯ ಉಂಗುರವನ್ನು ಕೂಡ ಧರಿಸುತ್ತಾರೆ. ಆರ್ಥಿಕ ಸಮಸ್ಯೆ ದೂರಾಗಲು ಕೂಡ ಆಮೆಯ ವಿಗ್ರಹವನ್ನು ಮನೆಯಲ್ಲಿ ಇಡುವುದು ಒಳ್ಳೆಯದು.

ಆನೆಯ ವಿಗ್ರಹ
ಆನೆಯ ವಿಗ್ರಹ ಮನೆಯಲ್ಲಿ ಇದ್ದರೆ ನಿಮಗೆ ಗಜಕೇಸರಿ ಯೋಗವೇ ಬರಬಹುದು. ಮನೆಯಲ್ಲಿ ಬೆಳ್ಳಿ ಅಥವಾ ಇದ್ದಾಳೆ ಇಂದ ಮಾಡಿದ ಆನೆಯ ವಿಗ್ರಹವನ್ನು ಇಟ್ಟುಕೊಳ್ಳುವುದು ಒಳ್ಳೆಯದು ಇದರಿಂದ ಮನೆಯಲ್ಲಿ ಸಂಪತ್ತು ತುಂಬಿ ತುಳು ಕಾಡುತ್ತಿದೆ ಎಂದು ವಾಸ್ತವ ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಒಂಟಿಯಾಗಿರುವ ಆನೆಯ ವಿಗ್ರಹಕ್ಕಿಂತ ಜೋಡಿ ಆನೆಯ ವಿಗ್ರಹವನ್ನು ಇಟ್ಟುಕೊಳ್ಳುವುದು ಇನ್ನೂ ಒಳ್ಳೆಯದು.
ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಈ ಮೂರು ವಿಧದ ವಿಗ್ರಹಗಳನ್ನು ಇಟ್ಟುಕೊಂಡರೆ ಮನೆಯಲ್ಲಿ ನೆಮ್ಮದಿ ಸುಖ ಶಾಂತಿ ಲಭಿಸುವುದು ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗಳು ಕೂಡ ದೂರವಾಗುತ್ತದೆ ಎಂದು ಹೇಳಲಾಗಿದೆ.

Comments are closed.