Political News: ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ- ಪರಮೇಶ್ವರ್ ಹೇಳಿಕೆ

Political News: ರಾಜ್ಯದ ವಿಧಾನಸಭಾ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದಿದೆ. ಪ್ರಸ್ತುತ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವ ಕೆಲಸಗಳು ಸಾಗುತ್ತಿದೆ. ನಿನ್ನೆಯಷ್ಟೇ ಬಕ್ರೀದ್ ಹಬ್ಬ ನಡೆದಿದೆ, ಈ ವೇಳೆ ರಾಜ್ಯದ ಎಲ್ಲಾ ಮುಸ್ಲಿಂ ಬಾಂಧವರು ಸಹ ಹಬ್ಬದ ಆಚರಣೆ ಮಾಡಿದ್ದಾರೆ. ಬಕ್ರೀದ್ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಪಕ್ಷದ ಜಿ.ಪರಮೇಶ್ವರ್ ಅವರು ಪಕ್ಷ ಗೆಲ್ಲುವುದಕ್ಕೆ ಅಲ್ಲಾನ (Allah) ಕೃಪೆ ಕಾರಣ ಎಂದಿದ್ದಾರೆ.. ಇದನ್ನು ಓದಿ: Karnataka Govt.: ರಾಜ್ಯ ಬಿಟ್ಟಿ ಕೊಡುವ ವರೆಗೂ ಕಾಯಿರಿ- ಆದರೆ ಅದಕ್ಕೂ ಮುನ್ನ ಕೇಂದ್ರದ ಈ ಟ್ರಿಕ್ ಬಳಸಿ ವಿದ್ಯುತ್ ಬಿಲ್ ಕಡಿಮೆ ಮಾಡಿ. ಹೇಗೆ ಗೊತ್ತೇ?

ನಿನ್ನೆ ಗುರುವಾರ ಬಕ್ರೀದ್ ಹಬ್ಬದ ದಿನ, ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು, ಇದರಲ್ಲಿ ಜಿ.ಪರಮೇಶ್ವರ್ ಅವರು ಸಹ ಭಾಗವಹಿಸಿದರು. ಎಲ್ಲಾ ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬಕ್ಕೆ ವಿಶ್ ಮಾಡಿದರು, ಬಳಿಕ ಅವರಿಗೆ ಧಾರ್ಮಿಕ ಮುಖಂಡರು ಟೋಪಿ ಧಾರಣೆ ಮಾಡಿದರು.

ಇದೆಲ್ಲ ನಡೆದ ನಂತರ ಪರಮೇಶ್ವರ್ ಅವರು ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು, “ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದಕ್ಕೆ ಅಲ್ಲಾ ಕೃಪೆ ಕೂಡ ಕಾರಣ, ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಗೃಹ ಸಚಿವನಾಗಿದ್ದೇನೆ. ಒಂದು ವೇಳೆ ದೇವರ ಆಶೀರ್ವಾದ ಇಲ್ಲದೆ ಹೋಗಿದ್ದರೆ ನಾನು ಶಾಸಕನಾಗಲು ಸಾಧ್ಯವಾಗುತ್ತಿರಲಿಲ್ಲ..” ಎಂದು ಹೇಳಿದ್ದಾರೆ. “ಈ ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತ ಆಗಿದೆ. ಇದನ್ನೂ ಓದಿ: Political News: ಗೃಹ ಲಕ್ಷ್ಮಿ ನಂಬಿಕೊಂಡಿದ್ದವರಿಗೆ ಮತ್ತೊಂದು ಶಾಕ್ ಕೊಟ್ಟ ಸಿದ್ದು ಎಂಡ್ ಟೀಮ್- 2000 ಸಾವಿರದ ಕತೆ ಏನಾಗಿದೆ ಗೊತ್ತೇ?

ಅಲ್ಲಾ ಒಬ್ಬ ವ್ಯಕ್ತಿಯನ್ನು ಬಹಳಷ್ಟು ರೀತಿಯಲ್ಲಿ ಪರೀಕ್ಷೆ ಮಾಡುತ್ತಾನೆ. ತನ್ನ ಕೂಸು, ತನ್ನ ಮಗುವನ್ನೇ ಬಲಿ ಕೊಡಬೇಕು ಎನ್ನುವುದು ಬಹಳ ದೊಡ್ಡ ತ್ಯಾಗ. ರಂಜಾನ್ ಹಬ್ಬದ ವೇಳೆ ನಾನು ಇಲ್ಲಿಗೆ ಬಂದಿದ್ದೆ, ನಿಮ್ಮ ಬಳಿ ಮತ ಕೇಳಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದೆ.. ಈಗ ನೀವೆಲ್ಲರೂ ನಾನು ಗೆಲ್ಲುವ ಹಾಗೆ ಮಾಡಿದ್ದೀರಿ..ಅಂದು ತನ್ನ ಮಗನನ್ನೇ ಅಲ್ಲಾನಿಗೆ ಬಲಿ ಕೊಟ್ಟ ಮೊಹಮ್ಮದ್ ಇಬ್ರಾಹಿಂ..ಆ ರೀತಿಯ ಮಹಾನ್ ಬಲಿದಾನದ ಸಂಕೇತ ಈ ಬಿಕ್ರದ್ ಹಬ್ಬ.

ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದೇನೆ.. ನಮ್ಮ ದೇಶ ಶಾಂತಿಯಿಂದ ಇರುವ ದೇಶ..ಅದು ನಮ್ಮ ಸಂವಿಧಾನದಲ್ಲಿ ಕೂಡ ಇದೆ. ಒಂದು ಕಡೆಯಿಂದ ನೋಡಿದರೆ, ಈ ಹಿಂದೆ ಇದ್ದ ಸರ್ಕಾರದ ಬಗ್ಗೆ ಮುಸ್ಲಿಂ ಬಾಂಧವರಿಗೆ ಆತಂಕ ಮತ್ತು ಭಯ ಇತ್ತು. ಈಗ ಅದನ್ನೆಲ್ಲ ಬಿಟ್ಟು ವೋಟ್ ಮಾಡಿದ್ದೀರಾಜ. ನಮ್ಮದು ಜಾತ್ಯತೀತ ಪಕ್ಷ, ನಮ್ಮ ಜೊತೆಗೆ ನಿಂತ ಜನರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ, ಅಭಿವೃದ್ಧಿ ಮತ್ತು ಶಾಂತಿ ಎರಡನ್ನು ಕಾಪಾಡಬೇಕು. ರಾಜ್ಯದ ಗೃಹ ಸಚಿವನಾಗಿ ಶಾಂತಿಯನ್ನು ಕಾಪಾಡುತ್ತೇನೆ, ದ್ವೇಷ ಮಾಡುವುದಿಲ್ಲ…” ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲುವುದಕ್ಕೆ ಮ್ಜಸ್ಲಿಮ್ ಜನರ ವೋಟ್ ಕಾರಣ ಎನ್ನುವ ಬಗ್ಗೆ ಈ ರೀತಿ ಹೇಳಿದ್ದಾರೆ.

Comments are closed.