Tata Ev Car: Tata ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿ ಮಾಡಿದ ಟಾಟಾ ಎಲೆಕ್ಟ್ರಿಕ್ ಕಾರುಗಳು- ಮೈಲೇಜ್, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Tata Ev Car: ಈಗ ಎಲೆಕ್ಟ್ರಿಕ್ ಕಾರ್ (Electric cars) ಗಳು ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಹಾಗು ಜನರ ವಿಶ್ವಾಸವನ್ನು ಕೂಡ ಗೆಲ್ಲುತ್ತಿದೆ. ಇದರಿಂದ ಎಲೆಕ್ಟ್ರಿಕ್ ಕಾರ್ ಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಈಗ ನಮ್ಮ ದೇಶದ ಹಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ದಾರಿಯಲ್ಲಿದೆ. ಟಾಟಾ ಮೋಟಾರ್ಸ್ (Tata Motors) ಸಹ ನಮ್ಮ ದೇಶದ ದೊಡ್ಡ ಕಂಪೆನಿಗಳಲ್ಲಿ ಒಂದು. ಇವರು ಕೂಡ ಇವಿ ಕಾರ್ ಗಳನ್ನು ತಯಾರಿಸುತ್ತಿದ್ದಾರೆ. ಇದನ್ನೂ ಓದಿ: Mahindra Thar: ಹೊಸದಾಗಿ ಬರುತ್ತಿರುವ ಥಾರ್ 5 ನಲ್ಲಿ ವಿಶೇಷತೆ ನೋಡಿದರೆ ನಿಜಕ್ಕೂ ಇಷ್ಟವಾಗುತ್ತದೆ. ಸಂಪೂರ್ಣ ಡೀಟೇಲ್ಸ್.

ಇನ್ನು 5 ವರ್ಷಗಳಲ್ಲಿ ಟಾಟಾ ಕಾರ್ ಗಳು (tata Cars) 10 ಎಲೆಕ್ಟ್ರಿಕ್ ಕಾರ್ ಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಮೊದಲನೆಯದಾಗಿ ಟಾಟಾ ಪಂಚ್ ಇವಿ, ಹ್ಯಾರಿಯರ್ ಇವಿ ಹಾಗೂ ಸಫಾರಿ ಇವಿ ಕಾರ್ ಗಳು ಮಾರ್ಕೆಟ್ ಗೆ ಬರಲಿದೆ. ಮುಂದಿನ ದಿನಗಳಲ್ಲಿ ಸಿಯೇರಾ ಇವಿ, ಕರ್ವ್ EV, Altroz EV, ಅವಿನ್ಯಾ ಹಾಗೂ ಇನ್ನಿತರ ಮಾಡೆಲ್ ಗಳಿವೆ.. ಅವುಗಳ ಪೈಕಿ ಮೂರು ಪ್ರಮುಖ ಟಾಟಾ ಇವಿ ಕಾರ್ ಮಾಡೆಲ್ ಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಟಾಟಾ ಪಂಚ್ ಇವಿ :- ಟಾಟಾ ಸಂಸ್ಥೆಯ ಹುಟ್ಟುಹಬ್ಬದ ದಿನಕ್ಕೆ ಈ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಈಗ ಟಾಟಾ ಪಂಚ್ ಇವಿ (tata Panch EV) ಅನ್ನು ಟೆಸ್ಟಿಂಗ್ ಗೆ ಒಳಪಡಿಸಲಾಗುತ್ತಿದೆ. ಈ ಕಾರ್ ನ ಒಳಭಾಗ ಮತ್ತು ಹೊರಭಾಗಗಳಲ್ಲಿ ವ್ಯತ್ಯಾಸ ಇರಬಹುದು,ಆದರೆ ಮಧ್ಯ ಉರುವ ಶೈನಿಂಗ್ ಲೋಗೋ ಜೊತೆಗೆ ಎರಡು ಹೊಸ ಸ್ಪೋಕ್ ಸ್ಟೀರಿಂಗ್ ವೀಲ್ ಇದೆ, ಹಾಗೆಯೇ 360 ಡಿಗ್ರಿ ಕ್ಯಾಮೆರಾ, ರೋಟರಿ ಡ್ರೈವ್ ಸೆಲೆಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ಪಾರ್ಕಿಂಗ್ ಬ್ರೇಕ್ ಸಹ ಇದೆ. ಈ ಕಾರ್ ಅನ್ನು ಪೂರ್ತಿ ಚಾರ್ಜ್ ಮಾಡಿದರೆ 300ಕಿಮೀವರೆಗು ಪ್ರಯಾಣ ಮಾಡಬಹುದು. ಟಿಯಾಗೋ EV ಪವರ್ ಟ್ರೇನ್ ಜೊತೆಯಲ್ಲೇ ಈ ಕಾರ್ ಕೂಡ ಬರುತ್ತದೆ.. ಇದನ್ನೂ ಓದಿ:Tata Tiago ev: ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಹೊಸ ಕಾರು- ಮಾಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರು. ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಟಾಟಾ ಹ್ಯಾರಿಯರ್ ಇವಿ :-ಈ ಕಾರ್ ಡಿಸೈನ್ ಅನ್ನು ಈ ವರ್ಷದ ಶುರುವಿನಲ್ಲಿ ನಡೆದ ಎಕ್ಸ್ಪೋದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಹ್ಯಾರಿಯರ್ ಇವಿ ಕಾರ್ ಮುಂದಿನ ವರ್ಷ ಮಾರ್ಕೆಟ್ ನಲ್ಲಿ ಲಾಂಚ್ ಆಗಬಹುದು. ಟಾಟಾ ಕಂಪೆನಿಹ Gen 2 ಪ್ಲಾಟ್ ಫಾರ್ಮ್ ಹೊಂದಿರುವ ಕಾರ್ ಇದಾಗಿದೆ. ಎಲೆಕ್ಟ್ರಿಕ್ SUV ರೀತಿಯ ಆವೃತ್ತಿಯನ್ನು ಈ ಕಾರ್ ಅಳವಡಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಹೊಸದಾದ ಬ್ಲ್ಯಾಂಕ್ಡ್ ಆಫ್ ಗ್ರಿಲ್,LED ಲೈಟ್ ಬಾರ್, ಹೆಡ್ ಲ್ಯಾಂಪ್‌ ಗಳು, ಪರಿಷ್ಕೃತಗೊಂಡಿರುವ ಬಂಪರ್, ಫೆಂಡರ್ ನಲ್ಲಿ ಇವಿ ಬ್ಯಾಡ್ಜ್, ಫ್ಲಶ್ ಡೋರ್ ಹ್ಯಾಂಡಲ್, ದೊಡ್ಡ ಡೋರ್ ಗಳು, LED ಲೈಟ್ ಬಾರ್ ಗಳಿರುವ ಬ್ಯಾಕ್ ಡೋರ್, ಹ್ಯಾರಿಯರ್ ಇವಿಯನ್ನು ಉತ್ತಮ ಟೆಕ್ನಾಲಜಿ ಜೊತೆಗೆ ನೀಡಲಾಗುತ್ತದೆ.

ಟಾಟಾ ಸಫಾರಿ ಇವಿ :- ಟಾಟಾ ಸಫಾರಿ ಎಲೆಕ್ಟ್ರಿಕ್ ಕಾರ್ ಗಳಲ್ಲಿ ಹ್ಯಾರಿಯರ್ ಇವಿ ಕಾರ್ ಕೂಡ ಇದೆ. ಇದು ಕಾರ್ಬೋಮೆಗಾ ಆರ್ಕ್ ಆರ್ಕಿಟೆಕ್ಚರ್ (ಸಿಗ್ಮಾ/ಜೆನ್ 2 ಪ್ಲಾಟ್ ಫಾರ್ಮ್) ಆಧಾರವಾಗಿದೆ. ಒಳಭಾಗದಲ್ಲಿ ಮತ್ತು ಒಳಭಾಗದಲ್ಲಿ ವಿದ್ಯುತ್ ಬದಲಾವಣೆಯನ್ನು ಗಮನಿಸಬಹುದು. ಈ ಕಾರ್ ನಲ್ಲಿ ಕಾರ್ ಇಂದ ಲೋಡ್ ಹಾಗೂ ಕಾರಿನಿಂದ ಕಾರ್ ಗೆ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಟಾಟಾ ಸಫಾರಿ ಇವಿ 60kWh ಬ್ಯಾಟರಿ ಪ್ಯಾಕ್ ಜೊತೆಗೆ ಬರುತ್ತದೆ. ಈ ಕಾರ್ ಪೂರ್ತಿ ಚಾರ್ಜ್ ಮಾಡಿದರೆ, 400 ಇಂದ 500 ಕಿಮೀ ಹೋಗುತ್ತದೆ.

Comments are closed.