EV Scooter: ಕಡಿಮೆ ಬೆಲೆ ರೇಂಜ್ ಮಾತ್ರ 212 ಕಿಲೋ ಮೀಟರ್- 105 ರ ಟಾಪ್ ಸ್ಪೀಡ್- ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಇನ್ನು ಏನೆಲ್ಲಾ ಇದೆ ಗೊತ್ತೇ?

EV Scooter: ಈಗ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ಜಾಸ್ತಿ ಇದೆ, 2023ರ ಮೇ ತಿಂಗಳಿನಲ್ಲಿ 1,04,829 ಯೂನಿಟ್ಸ್ ಎಲೆಕ್ಟ್ರಿಕ್ ಸ್ಕೊಟರ್ ಗಳು ಮಾರಾಟ ಆಗಿದೆ ಎಂದರೆ ಇವುಗಳ ಬೇಡಿಕೆ ಹೇಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು. Ola Electric, Ather, Hero Electric ಹಾಗೂ Okinawa ಸೇರಿದಂತೆ ಹಲವು ಕಂಪೆನಿಗಳು ಆ ದೇಶದಲ್ಲಿ ಎಲೆಕ್ಟ್ರಿಕ್ ಬೈಕ್ ಗಳ ಮಾರಾಟ ಮಾಡುತ್ತಿದೆ. ಹಾಗೆಯೇ ಹೊಸ ಕಂಪನಿಗಳು ಕೂಡ ಪ್ರವೇಶ ಮಾಡುತ್ತಿದೆ. ಇತ್ತೀಚೆಗೆ ಬೆಂಗಳೂರಿಗೆ ಸೇರಿದಂತೆ ಸಿಂಪಲ್ ಎನರ್ಜಿ (Simple energy) ಸಂಸ್ಥೆಯು. ಇದನ್ನೂ ಓದಿ: Shravana masa 2023: ಶ್ರಾವಣ ಮಾಸದ ಮೊದಲ ದಿನ ಇದೊಂದು ಕೆಲಸ ಮಾಡಿದರೆ ಸಾಕು, ಗೌರಿ ಸಾಕು ಸಾಕು ಎನ್ನುವಷ್ಟು ಹಣ, ನೆಮ್ಮದಿ ಕರುಣಿಸುತ್ತಾಳೆ; ಏನು ಮಾಡಬೇಕು ಗೊತ್ತೇ?

ಉತ್ತಮ ಪರ್ಫಾರ್ಮೆನ್ಸ್ ಹೊಂದಿರುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ (Simple one ev scooter) ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದುವರೆಗೂ ಬಂದಿರುವುದಕ್ಕಿಂತ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಇದು ಎಂದು ಹೇಳಲಾಗುತ್ತಿದೆ. ಈ ಸ್ಕೂಟರ್ ಅನ್ನು ಹಲವು ವೈಶಿಷ್ಟ್ಯತೆಗಳ ಜೊತೆಗೆ ಬಂದಿದೆ. ಈಗಿನ ಮಾರ್ಕೆಟ್ ನಲ್ಲಿ ದೊಡ್ಡ ಕಂಪನಿಗಳಿಗೆ ಇದು ಸವಾಲಾಗಬಹುದು.ಈ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆಗಳಲ್ಲಿ ಪ್ರಮುಖವಾದದ್ದು, ಚಾರ್ಜಿಂಗ್ ಸ್ಪೀಡ್. ಕೇವಲ ಎರಡು ಗಂಟೆಗಳಲ್ಲಿ ಸ್ಕೂಟರ್ ಫುಲ್ ಚಾರ್ಜ್ ಆಗಲಿದೆ. ಜೆನೆರಲ್ ಹಾಗೂ ಫಾಸ್ಟ್ ಚಾರ್ಜಿಂಗ್ ಎರಡು ಆಯ್ಕೆಗಳು ಇರುತ್ತದೆ. ಜೆನೆರಲ್ ಚಾರ್ಜಿಂಗ್ ನಲ್ಲಿ 0 ಇಂದ 80% ಚಾರ್ಜ್ ಆಗಲು 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಫಾಸ್ಟ್ ಚಾರ್ಜಿಂಗ್ ಮಲ್ಲಿ 2 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಹಾಗೆಯೇ ಈ ಸ್ಕೂಟರ್ ನ ಸ್ಪೀಡ್ ಕೂಡ ಹೆಚ್ಚಿದ್ದು, 0 ಇಂದ 40 ಕಿಮೀ ಸ್ಪೀಡ್ 2.77 ಸೆಕೆಂಡ್ಸ್ ಗಳಲ್ಲಿ ತೆಗೆದುಕೊಳ್ಳುತ್ತದೆ. ಈ ಸ್ಕೂಟಿಯ ಮ್ಯಾಕ್ಸಿಮಮ್ ಸ್ಪೀಡ್ 105ಕಿಮೀ ಆಗಿದೆ.

ಸಿಂಪಲ್ ಒನ್ ಕಂಪನಿ ತಿಳಿಸಿರುವ ಹಾಗೆ ಈ ಎಲೆಕ್ಟ್ರಿಕ್ ಸ್ಕೂಟರ್. ಭಾರತದ ಅತ್ಯುನ್ನತ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಪೂರ್ತಿ ಚಾರ್ಜ್ ಮಾಡಿದರೆ, 212 ಕಿಮೀ ಪ್ರಯಾಣ ಮಾಡಬಹುದು, ಓಲಾದ ಟಾಪ್ ಮಾಡೆಲ್ ಸ್ಕೂಟಿ ಓಲಾ ಎಸ್1 ಪ್ರೊ 170ಕಿಮೀ ರೇಂಜ್, TVS iQube 145ಕಿಮೀ ರೇಂಜ್ ಹೊಂದಿದ್ದು, ಅಥೆರ್ 450X ಶ್ರೇಣಿ 146ಕಿಮೀ ಆಗಿದೆ. ಹೆಚ್ಚಿನ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, 7.0 ಇಂಚ್ TFT ಡಿಸ್ಪ್ಲೇ ಇದೆ. LED ಬಲ್ಬ್ ಗಳನ್ನು ಹೊಂದಿದೆ. 12ಇಂಚ್ ಮಿಕ್ಸ್ಡ್ ಲೋಹದ ವೀಲ್ಸ್ ಹೊಂದಿದೆ..

ಸ್ಕೂಟರ್ ನಲ್ಲಿ 4 ರೈಡಿಂಗ್ ಮೋಡ್ ಇದೆ, ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್. 30 ಲೀಟರ್ ಬೂಟ್ ಸ್ಪೇಸ್ ಹಾಗೂ ಎರಡು ವೀಲ್ ಗಳಲ್ಲಿ ಬೂಟ್ ಸ್ಪೇಸ್ ಇದೆ. ಈ ಬೈಕ್ ಒಂದು ವೇರಿಯಂಟ್ ನಲ್ಲಿ ಬಿಡುಗಡೆ ಆಗಿದ್ದು, ಬೆಂಗಳೂರಿನ ಎಕ್ಸ್ಪೋ ಶೋರೂಮ್ ಬೆಲೆ 1.45ಲಕ್ಷ ರೂಪಾಯಿ ಆಗಿದೆ. ಈಗಾಗಲೇ ಈ ಸ್ಕೂಟಿ 1ಲಕ್ಷಕ್ಕಿಂತ ಹೆಚ್ಚು ಯೂನಿಟ್ಸ್ ಬುಕಿಂಗ್ ಆಗಿದೆ. 2023ರ ಜೂನ್ ಇಂದ ಗ್ರಾಹಕರ ಕೈ ಸೇರುತ್ತದೆ ಈ ಸ್ಕೂಟಿ. ಇದನ್ನೂ ಓದಿ: Kannada Youtubers: ಕನ್ನಡದಲ್ಲಿಯೇ ವಿಡಿಯೋ ಲಕ್ಷಗಟ್ಟಲೆ ದುಡಿಯುವ ಟಾಪ್ 10 ಯೂಟ್ಯೂಬರ್ಸ್: ಇವರೇ ಕನ್ನಡದ ಬೆಸ್ಟ್ ವಿಡಿಯೋ ಮೇಕರ್ಸ್.

Comments are closed.