Film News: ಹೆಂಡತಿಯ ಮನಸ್ಸನ್ನು ನೋವಿಸಿದ ರಾಮ್ ಚರಣ್- ಆ ವಿಷಯದಲ್ಲಿ ಈಗಲೂ ರಾಮ್ ಚರಣ್ ಮಾಡಿದ್ದು ಉಪಾಸನಾಗೆ ಇಷ್ಟವೇ ಇಲ್ಲ.

Film News: ತೆಲುಗು ಚಿತ್ರರಂಗದ ಖ್ಯಾತ ನಟ ರಾಮ್ ಚರಣ್ (Ram Charan)ಅವರು ಇತ್ತೀಚೆಗೆ ತಂದೆಯಾಗಿದ್ದಾರೆ. ಉಪಾಸನಾ ಅವರೊಡನೆ ಮದುವೆಯಾಗಿ 10 ವರ್ಷಗಳು ಕಳೆದ ಬಳಿಕ ರಾಮ್ ಚರಣ್ ಮತ್ತು ಉಪಾಸನಾ (Upasana) ದಂಪತಿಗೆ ಹೆಣ್ಣು ಮಗು ಜನಿಸಿದೆ. ಜೂನ್ 20ರ ಬೆಳಗ್ಗೆ ಉಪಾಸನಾ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದರು. ಮೆಗಾ ಫ್ಯಾಮಿಲಿಗೆ ರಾಜಕುಮಾರಿಯ ಆಗಮನ ಆಗಿದ್ದು, ಇಡೀ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಸಂತೋಷ ನೀಡಿತು. ಇದನ್ನೂ ಓದಿ: Liquor Price Increase: ಎಣ್ಣೆ ಮೇಲೆ ತೆರಿಗೆ ಹೆಚ್ಚಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೋಗುವ ತೆರಿಗೆ ಹಣ ಎಷ್ಟು ಗೊತ್ತೆ? ಎಲ್ಲಾ ಕುಡುಕರ ಮಹಿಮೆ.

ಮಗಳು ಹುಟ್ಟಿದ್ದನ್ನು ಎಲ್ಲರೂ ಸೇರಿ ಸೆಲೆಬ್ರೇಟ್ ಮಾಡಿದರು.
ಮಗುವಿಗೆ ಕ್ಲಿನ್ ಕಾರಾ ಕೊನಿಡೇಲ ಎಂದು ಹೆಸರನ್ನು ಇಟ್ಟರು. ಈಗ ರಾಮ್ ಚರಣ್ ಮತ್ತು ಉಪಾಸನಾ ಇಬ್ಬರು ಕೂಡ ಹೆಚ್ಚಿನ ಸಮಯವನ್ನು ತಮ್ಮ ಮುದ್ದು ಮಗಳ ಜೊತೆಗೆ ಕಳೆಯುತ್ತಿದ್ದಾರೆ. ಇದೆಲ್ಲವೂ ಚೆನ್ನಾಗಿಯೇ ಇರುವಾಗ, ರಾಮ್ ಚರಣ್ ಮತ್ತು ಉಪಾಸನಾ ಜೋಡಿ ಬಗ್ಗೆ ಈಗ ಒಂದು ವಿಷಯ ಕೇಳಿಬರುತ್ತಿದೆ. ಈ ಜೋಡಿ ಅಭಿಮಾನಿಗಳ ಮೆಚ್ಚಿನ ಜೋಡಿ, ಎಲ್ಲರೂ ಸ್ಫೂರ್ತಿಯಿಂದ ನೋಡುವ ಜೋಡಿ..

ಆದರೆ ಇದೆ ಮೊದಲಬಾರಿಗೆ ಪತ್ನಿಗೆ ನೋವು ಮಾಡಿದ್ದಾರಂತೆ ರಾಮ್ ಚರಣ್. ಅಷ್ಟಕ್ಕೂ ಆಗಿರುವುದು ಏನು ಎಂದರೆ, ಉಪಾಸನಾ ಅವರು ಗರ್ಭಿಣಿಯಾದ ನಂತರ ಮಗು ಹುಟ್ಟುವವರೆಗು ಸದಾ ಜೊತೆಯಲ್ಲೇ ಇರುತ್ತೇನೆ ಎಂದು ಭರವಸೆ ನೀಡಿದ್ದರಂತೆ ರಾಮ್ ಚರಣ್, ಹಾಗಾಗಿ ರಾಮ್ ಚರಣ್ ಅವರು ನಟಿಸುತ್ತಿದ್ದ ಸಿನಿಮಾಗಳಿಂದ ಕೂಡ ಬ್ರೇಕ್ ಪಡೆದಿದ್ದರು. ಆದರೆ ರಾಮ್ ಚರಣ್ ಅವರು ಈಗ ಶೂಟಿಂಗ್ ಗೆ ವಾಪಸ್ ಹೊಗಲಿದ್ದಾರಂತೆ. ಇದನ್ನೂ ಓದಿ; Post office scheme: ಮಹಿಳೆಯರಿಗಾಗಿಯೇ ಇದೆ, ಅತ್ಯುತ್ತಮ ಯೋಜನೆ- ಇದಕ್ಕಿಂತ ಬೆಸ್ಟ್ ಯೋಜನೆ ಮತ್ತೊಂದಿಲ್ಲ.

ಮಗು ಹುಟ್ಟಿದ ನಂತರ ಮೂರು ತಿಂಗಳವರೆಗು ಉಪಾಸನಾ ಅವರ ಜೊತೆಯಲ್ಲೇ ಇರುವುದಾಗಿ ರಾಮ್ ಚರಣ್ ಭರವಸೆ ನೀಡಿದ್ದರು. ಆದರೆ ಈಗ ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ನಲ್ಲಿ ರಾಮ್ ಚರಣ್ ಅವರು ಭಾಗವಹಿಸಬೇಕಿದೆ. ಅದಕ್ಕಾಗಿ ತಯಾರಿ ಕೂಡ ನಡೆಸಿದ್ದಾರಂತೆ. ಆದರೆ ರಾಮ್ ಚರಣ್ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಉಪಾಸನಾ ಅವರು ಕೋಪ ಮಾಡಿಕೊಂಡಿದ್ದಾರಂತೆ. ಇದರಿಂದ ಉಪಾಸನಾ ಅವರ ಮನಸ್ಸಿಗೆ ನೋವಾಗಿದೆಯಂತೆ.

ಇದರ ಜೊತೆಗೆ ಚಿರಂಜೀವ ಹಾಗೂ ಸುರೇಖಾ ದಂಪತಿಗಳು ಪ್ರವಾಸಕ್ಕಾಗಿ ಅಮೆರಿಕಾಗೆ ಹೋಗಿದ್ದಾರೆ. ಜೊತೆಗೆ ರಾಮ್ ಚರಣ್ ಅವರು ಸಹ ಶೂಟಿಂಗ್ ಗೆ ಹೋಗಲಿದ್ದಾರೆ. ಇಷ್ಟು ದಿವಸ ಎಲ್ಲರೂ ಮಗು ಬೇಕು ಎಂದು ಆಸೆ ಪಡುತ್ತಿದ್ದರು, ಆದರೆ ಮಗು ಹುಟ್ಟಿದ ಮೇಲೆ ಉಪಾಸನಾ ಒಂಟಿ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ಜ್ಯೋತಿಷಿ- ಇವರು ನಿಜಕ್ಕೂ ಹಿಂಗಾ??

Comments are closed.