Range Rover Velar Facelift: ಕನ್ನಡ ನಟರೂ ಇಷ್ಟಪಡುವ, ಐಷಾರಾಮಿತನಕ್ಕೆ ಮತ್ತೊಂದು ಹೆಸರೇ ರೇಂಜ್ ರೊವರ್ ವೆಲಾರ್ ಫೆಸ್ ಲಿಪ್ಟ್; ಏನೆಲ್ಲಾ ವೈಶಿಷ್ಟ್ಯತೆಗಳಿವೆ ಗೊತ್ತಾ!

Range Rover Velar Facelift: ಕಾರುಗಳು ಬಗ್ಗೆ ಆಸಕ್ತಿ ಇರುವವವರಲ್ಲಿ ರೇಂಜ್ ರೋವರ್ (Range Rover)  ತನ್ನದೇ ಆದ ಸ್ಥಾನ ಗಳಿಸಿದೆ. ತನ್ನ ಆನ್ ರೋಡ್  (on road)  ಮತ್ತು ಆಫ್ ರೋಡ್ (off road) ಸಾಮರ್ಥ್ಯಗಳಿಂದ ಇದು ಬಹಳ ಮಂದಿಯ ನೆಚ್ಚಿನ ಕಾರಾಗಿದೆ. ಪ್ರತೀ ಸಲವೂ ರೇಂಜ್ ರೋವರ್ ಹೊಸ ಮಾದರಿ ಬಂದಾಗ ಕಾರು ಮಾರುಕಟ್ಟೆಯಲ್ಲಿ ಸಂಚನಲ ಇರುತ್ತದೆ. ಈಗ ನಿರೀಕ್ಷಿತ ರೇಂಜ್ ರೋವರ್ ವೆಲಾರ್ ಫೇಸ್ ಲಿಫ್ಟ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಹಾಗಾದರೆ ಕಾರು ಹೇಗಿದೆ ನೋಡೋಣ. ಇದನ್ನೂ ಓದಿ: Team India: ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಈ ಆಟಗಾರ ಇರಲೇಬೇಕು; ಗೌಅಮ್ ಗಂಭೀರ್ ’ಗಂಭೀರವಾಗಿ ಸೂಚಿಸಿದ್ದು ಯಾರ ಹೆಸರು ಗೊತ್ತಾ?

Range Rover Velar Facelift ವೈಶಿಷ್ಟ್ಯತೆಗಳು:

ವೆಲಾರ್ ಫೇಸ್ ಲಿಫ್ಟ್ ಒಂದೇ ಎಚ್. ಎಸ್. ಇ ಟ್ರಿಮ್ ನಲ್ಲಿ ಲಭ್ಯವಿದ್ದು ಎರಡು ಪವರ್ ಟ್ರೇನ್ ಗಳ ಆಯ್ಕೆಯನ್ನು ನೀಡುತ್ತದೆ. ವೆಲಾರ್ ರೇಂಜ್ ರೋವರ್ ನ ಹೊಸ ಆವಿಶ್ಕಾರದ ಪಿಕ್ಸೆಲ್ ಎಲ್.ಇ.ಡಿ. ಗಳ ಹೆಡ್ ಲೈಟ್ ಅನ್ನು ಹೊಂದಿದೆ. ಡೆ ಟೈಮ್ ರನ್ನಿಂಗ್ ಲೈಟ್ ಗಳು ಈ ಹೆಡ್ ಲೈಟ್ ಗೆ ಹೊಸ ಲುಕ್ ಕೊಡುತ್ತಿದೆ. ಡಾಶ್ ಬೋರ್ಡ್ ಕೂಡ ಹೊಸ ವಿನ್ಯಾಸವನ್ನು ಪಡೆದಿದೆ. 11.4 ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್ ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ದ್ ಆಟೋ ವನ್ನು ಹೊಂದಿದೆ. ಸೆಂಟ್ರಲ್ ಕನ್ಸೋಲ್ ಅಲ್ಲಿ ಕಡಿಮೆ ಬಟನ್ ಗಳನ್ನು ಫೇಸ್ ಲಿಫ್ಟ್ ನಲ್ಲಿ ನಾವು ಕಾಣಬಹುದಾಗಿದೆ. ವೈರ್ ಲೆಸ್ ಚಾರ್ಜಿಂಗ್ ಕೂಡ ಈ ಕಾರಿನಲ್ಲಿದೆ.

Range Rover Velar Facelift ಎಂಜಿನ್:

ಎರಡು ಎಂಜಿನ್ ಆಯ್ಕೆಗಳೊಂದಿಗೆ ವೆಲಾರ್ ಫೇಸ್ ಲಿಫ್ಟ್ ಮಾರುಕಟ್ಟೆಗೆ ಬಂದಿದೆ. ಎರಡು ಲೀಟರ್ ನ ಪೆಟ್ರೋಲ್ ಎಂಜಿನ್ 250 ಬಿ.ಎಚ್.ಪಿ ಪವರ್ ಅನ್ನು ಉತ್ಪಾದಿಸಿ 365 ಟಾರ್ಕ್ ಪವರ್ ಅನ್ನು ನೀಡುತ್ತದೆ. ಎರಡು ಲೀಟರ್ ನ ಡೀಸೆಲ್ ಎಂಜಿನ್ ಮೈಲ್ಡ್ ಹೈಬ್ರಿಡ್ ವ್ಯವಸ್ಥೆ ಹೊಂದಿದ್ದು 204 ಬಿ.ಎಚ್. ಪಿ ಮತ್ತು 430 ಎನ್. ಎಮ್ ಟಾರ್ಕ್ ಪವರ್ ಅನ್ನು ಉತ್ಪಾದಿಸುತ್ತದೆ. ಎರಡೂ ಮಾದರಿಗಳಲ್ಲಿ ಎಂಟು ಸ್ಪೀಡ್ ನ ಸ್ವಯಂಚಾಲಿತ ಗೇರ್ ಬಾಕ್ಸ್ ಅನ್ನು ನಾವು ಕಾಣಬಹುದಾಗಿದೆ. ಇದನ್ನೂ ಓದಿ: Hero Xtreme 200s 4v: ಹಿರೋ ತರಾನೇ ಭಾರತಕ್ಕೆ ಎಂಟ್ರಿ ಕೊಡ್ತಾ ಇದೆ ಹಿರೋ ಎಕ್ಸ್ ಟ್ರೀಮ್ 200; ವೈಶಿಷ್ಟ್ಯತೆ ನೋಡಿಂದ್ರೆ ಕಂಗಾಲಾಗಿ ಹೋಗ್ತೀರಾ!

Range Rover Velar Facelift ಮೈಲೇಜ್:

ಪೆಟ್ರೋಲ್ ಮಾದರಿ ಕಾರು ಗಂಟೆಗೆ 217 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹಾಗೂ 0 – 100  ಕಿ.ಮೀ ಸ್ಪೀಡ್ ಅನ್ನು 7.5 ಸೆಕೆಂಡುಗಳಲ್ಲಿ ಸಾಧಿಸುತ್ತದೆ. ಡಿಸೇಲ್ ಎಂಜಿನ್ ಗಂಟೆಗೆ 210 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದರೆ 0 – 100 ಸಾಧನೆ 8.3 ಸೆಕೆಂಡುಗಳಲ್ಲಿ ಸಾಧ್ಯವಿದೆ.

Range Rover Velar Facelift ಬೆಲೆ:

ವೆಲಾರ್ ಫೇಸ್ ಲಿಫ್ಟ್ 580 ಎಮ್.ಎಮ್ ನೀರಿನ ಆಳದ ತನಕ ಡ್ರೈವ್ ಮಾಡಬಹುದಾಗಿದೆ. ಕಾರಿನ ಎತ್ತರವನು 40 ಎಮ್.ಎಮ್ ತನಕ ಇಳಿಸಬಹುದಾಗಿದ್ದು ಇದು ಕಾರಿಗೆ ಬೇರೆಯದೇ ಆದ ಲುಕ್ ನೀಡುತ್ತದೆ. ಈ ಕಾರು ಪೋರ್ಷೆ ಮ್ಯಾಕಾನ್ ಮತ್ತು ಜಾಗ್ವಾರ್ ಎಫ್. ಎಸ್ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ. ವೆಲಾರ್ ಫೇಸ್ ಲಿಫ್ಟ್ ನ ಎಕ್ಸ್ ಷೋ ರೂಮ್ ಲಾಂಚ್ ಬೆಲೆ 93 ಲಕ್ಷ ರೂಪಾಯಿಗಳಾಗಿದೆ.

Comments are closed.