Shravana Maas 2023: ಶ್ರಾವಣ ಮಾಸದಲ್ಲಿ ತಪ್ಪದೇ ಶಿವನ ಪ್ರಿಯ ನಂದಿ ಎಡ ಕಿವಿಯಲ್ಲಿ ಈ ರೀತಿ ಬೇಡಿಕೆ ಇಟ್ಟರೆ ಅದನ್ನು ಶಿವ ಶತಾಯಗತಾಯ ಈಡೇರಿಸಿಯೇ ಬಿಡುತ್ತಾನೆ; ಯಾವ ರೀತಿ ಬೇಡಿಕೆ ಇಡಬೇಕು ಗೊತ್ತೇ

Shravana Maas 2023: ಒಂದು ಶಿವಾಲಯ ಇದೆ ಎಂದರೆ ಆ ಶಿವನಿಗೆ ನೇರವಾಗಿ ಒಂದು ನಂದಿ ಶಿವನ ಮುಂದೆ ಹೊರಗಡೆ ಕುಳಿತಿರುತ್ತೆ ಇಂತಹ ವಿಗ್ರಹವನ್ನು ನೀವು ನೋಡಿರಬಹುದು ಶಿವನ ದೇವಸ್ಥಾನದ ಮುಂದೆ ನಂದಿ ಇರಲೇಬೇಕು. ನಂದಿ ಶಿವನ ಅತಿ ದೊಡ್ಡ ಭಕ್ತ ಎನ್ನಲಾಗುತ್ತೆ. ಶಿವ ಪುರಾಣದ ಪ್ರಕಾರ ಶಿವನ ಅವತಾರವೇ ನಂದಿ. ಗಣಗಳ ಒಡೆಯ ಶಿವ. ಶಿವಗಣಗಳ ಅಧ್ಯಕ್ಷ ನಂದಿ. ಶಿವನ ಮುಂದೆ ಯಾವುದಾದರೂ ಬೇಡಿಕೆ ಇಡುವುದಾದರೆ ಅದು ನಂದಿಯ ಮೂಲಕವೇ ಶಿವನಿಗೆ ತಲುಪಬೇಕು. ಯಾಕೆ ಹೀಗೆ ಗೊತ್ತಾ? ಇದನ್ನೂ ಓದಿ: Sania Mirza: ಕರ್ನಾಟಕ ಆರ್ ಸಿ ಬಿ ಮಹಿಳಾ ತಂಡಕ್ಕೆ ಮೆಂಟರ್ ಆಗಿದ್ದ ಸಾನಿಯಾ ಮಿರ್ಜಾ ಕನ್ನಡದಲ್ಲಿ ಒಂದು ಮಾತನಾಡಿ ಅಂದ್ರು ಐ ಕಾಂಟ್ ಎಂದಿದ್ದೇಕೆ ಕಡೆಗೂ ಕನ್ನಡಿಗರು ಏನು ಉತ್ತರ ಕೊಟ್ಟಿದ್ದಾರೆ ಗೊತ್ತೇ

ನಂದಿಯ ಕಿವಿಯಲ್ಲಿ ಹೇಳುವ ಗುಟ್ಟಿನ ರಹಸ್ಯವೇನು?

ಮೊದಲು ಪುರಾಣದಲ್ಲಿ ಹೇಳಲಾಗಿರುವ ಈ ವಿಚಾರವನ್ನು ನಾವು ತಿಳಿದುಕೊಳ್ಳಲೇಬೇಕು. ನಂದಿಯ ಕಿವಿಯಲ್ಲಿ ಯಾಕೆ ಗುಟ್ಟನ್ನು ಹೇಳಬೇಕು ಎನ್ನುವುದು. ಪುರಾಣ ಕಥೆಗಳ ಪ್ರಕಾರ ಮಹಾದೇವ ತಪಸ್ವಿ ಅವನು ಯಾವಾಗಲೂ ಸಮಾಧಿ ಸ್ಥಿತಿಯಲ್ಲಿ ಇರುತ್ತಾನೆ ಇಂತಹ ಸಂದರ್ಭದಲ್ಲಿ ಭಕ್ತರು ಹೇಳಿರುವ ಮಾತುಗಳು ನೇರವಾಗಿ ಆತನ ಕಿವಿಗೆ ತಲುಪುವುದಿಲ್ಲ. ಹಾಗಾಗಿ ಶಿವ ಸಮಾಧಿ ಸ್ಥಿತಿಯಿಂದ ಎದ್ದ ನಂತರ ನಂದಿಯೇ ಭಕ್ತರ ಇಷ್ಟಾರ್ಥಗಳನ್ನು ಶಿವನಿಗೆ ತಲುಪಿಸುತ್ತಾನೆ. ನಂದಿಯಿಂದ ತಲುಪಿದ ವಿಷಯಗಳು ಶಿವನಿಗೆ ಬೇಗ ತಲುಪುತ್ತವೆ ಜೊತೆಗೆ ಉತ್ತರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ನಂಬಿಕೆ.

ಶಿವಲಿಂಗದ ಅಥವಾ ಶಿವ ಮೂರ್ತಿಯ ಎದುರಿಗೆ ಇರುವ ನಂದಿಯನ್ನು ಶಿವನಿಗೆ ಪೂಜಿಸಿದ ನಂತರ ಅದನ್ನು ಕೂಡ ಪೂಜೆ ಮಾಡಬೇಕು ಇಲ್ಲವಾದರೆ ಶಿವಲಿಂಗ ಪೂಜಿಸಿದ ಸಂಪೂರ್ಣ ಫಲ ಸಿಗಲು ಸಾಧ್ಯವೇ ಇಲ್ಲ. ಶಿವ ದೇವಾಲಯದಲ್ಲಿ ಶಿವನಿಗೆ ಹೇಗೆ ಭಕ್ತಿ ಭಾವದಿಂದ ಪೂಜೆ ಪುನಸ್ಕಾರಾದಿಗಳನ್ನು ಮಾಡಲಾಗುತ್ತದೆಯೋ ನಂದಿಗೂ ಕೂಡ ಅದೇ ರೀತಿಯಾಗಿ ಆರತಿ ಬೆಳಗಿ ಪೂಜೆ ಸಲ್ಲಿಸಬೇಕಾಗುತ್ತದೆ. ಇದನ್ನೂ ಓದಿ: Story of Soujanya; ಸಿನಿಮಾದಲ್ಲಾದ್ರೂ ಸಿಗಲಿದ್ಯಾ ಸೌಜನ್ಯ ಕೇಸ್ ಗೆ ನ್ಯಾಯ? ಸ್ಟೋರಿ ಆಫ್ ಸೌಜನ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು ಯಾರು?

ನಂದಿಯ ಕಿವಿಯಲ್ಲೇ ಯಾಕೆ ಇಷ್ಟಾರ್ಥಗಳನ್ನು ಹೇಳಬೇಕು?

ಶಿವನು ಒಬ್ಬ ಮಹಾನ್ ತಪಸ್ವಿ ಆತನ ತಪಸ್ಸಿಗೆ ಯಾವುದೇ ಭಂಗ ಆಗಬಾರದು ಎನ್ನುವ ಕಾರಣಕ್ಕೆ ನಂದಿ ಸದಾ ಕಾವಲು ಕಾಯುತ್ತಾನೆ. ಇನ್ನು ಭಕ್ತಾದಿಗಳು ಹೋಗಿ ಶಿವನನ್ನು ಧ್ಯಾನ ಭಂಗ ಮಾಡಲು ಸಾಧ್ಯವಿಲ್ಲ. ಹಾಗಾಗಿ ತಮ್ಮ ಬಯಕೆಗಳನ್ನು ಹೇಳಿಕೊಂಡರೆ ಅದು ನೇರವಾಗಿ ಶಿವನನ್ನು ತಲುಪುತ್ತದೆ ಎಂದು ನಂಬಿಕೆ ಇದೆ.

ಇನ್ನು ನಂದಿಯ ಎಡ ಕಿವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳಬೇಕು. ಇನ್ನು ನಂದಿಯ ಕಿವಿಯಲ್ಲಿ ನಿಮ್ಮ ಬಯಕೆಯನ್ನು ಹೇಳುವಾಗ ಎರಡು ಕೈಗಳಿಂದ ಬಾಯಿಯನ್ನು ಮುಚ್ಚಿ ಗುಟ್ಟು ಹೇಳುವ ರೀತಿಯಲ್ಲಿಯೇ ಹೇಳಬೇಕು. ಇನ್ನು ನಂದಿಯ ಕಿವಿಯಲ್ಲಿ ನೀವು ಒಳ್ಳೆಯ ವಿಷಯಗಳನ್ನು ಮಾತ್ರ ಕೇಳಿಕೊಳ್ಳಬೇಕು ಯಾರ ಬಗ್ಗೆಯಾದರೂ ಕೆಟ್ಟದ್ದನ್ನು ಯೋಚಿಸಿದರೆ ಕೆಟ್ಟದಾಗಲಿ ಎಂದು ಬಯಸಿದರೆ ಅದು ಖಂಡಿತವಾಗಿಯೂ ನೆರವೇರುವುದಿಲ್ಲ.

ಈ ರೀತಿಯಾಗಿ ನಿಮ್ಮ ಯಾವುದೇ ಬೇಡಿಕೆ ಆಸೆಗಳು ಇದ್ದರೂ ಅದನ್ನು ಶಿವ ಈಡೇರಿಸಬೇಕು ಎಂದರೆ ಶಿವನನ್ನು ಭಕ್ತಿಯಿಂದ ಪೂಜಿಸಬೇಕು. ಅದರ ಜೊತೆಗೆ ನಂದಿ ವಿಗ್ರಹವನ್ನು ಪೂಜೆ ಮಾಡುವುದರ ಜೊತೆಗೆ ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳಬೇಕು. ಈಗಂತೂ ಶ್ರಾವಣ ಮಾಸ ಶಿವನ ಜೊತೆಗೆ ನಂದಿಯ ಪೂಜೆ ಕೂಡ ಮಾಡಿದರೆ ಖಂಡಿತ ಒಳಿತಾಗುತ್ತದೆ.

Comments are closed.