BP Control: ಬಿಪಿ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಇದೊಂದನ್ನು ತಿನ್ನುವುದಕ್ಕೆ ರೂಢಿ ಮಾಡಿಕೊಳ್ಳಿ ಸಾಕು; ನಿಯಮಿತವಾಗಿ ಮಾತ್ರೆ ತಿನ್ನುವುದು ಕೂಡ ನಿಂತು ಹೋಗುತ್ತೆ!

BP Control: ನಾವು ನಮ್ಮ ದೇಹದಲ್ಲಿ ಯಾವುದೇ ಕಾಯಿಲೆ (Health issues) ಉಂಟಾದರೂ ಅದಕ್ಕೆ ನಿರ್ಲಕ್ಷ ತೋರಿಸಲೇಬಾರದು ಅದು ಒಂದರಿಂದ ಮತ್ತೊಂದು ಕಾಯಿಲೆಗೆ ದಾರಿ ಮಾಡಿಕೊಡುತ್ತದೆ ಉದಾಹರಣೆಗೆ ಇತ್ತೀಚಿಗೆ ಸಕ್ಕರೆ ಕಾಯಿಲೆ ಆಗಿರಬಹುದು. ಅಥವಾ ಅಧಿಕ ರಕ್ತದೊತ್ತಡದ (Blood pressure) ಕಾಯಿಲೆ ಇರಬಹುದು ಬಹುತೇಕ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಂತಹ ಸಮಸ್ಯೆಯಾಗಿದೆ. ಅದರಲ್ಲೂ ಬಿಪಿ ಅಧಿಕವಾದರೆ ಅದನ್ನ ನೀವು ನಿರ್ಲಕ್ಷ ಮಾಡಿದರೆ ಹಾರ್ಟ್ ಅಟ್ಯಾಕ್ (Heart Attack) ಆಗುವ ಸಂಭವ ಕೂಡ ಇರುತ್ತದೆ. ಇದನ್ನೂ ಓದಿ: Arecanut Farming: ಎಷ್ಟು ಕಡಿಮೆ ಹೂಡಿಕೆ ಮಾಡಿ ಲಕ್ಷ ಲಕ್ಷ ಹಣ ಗಳಿಸಬಹುದು ಗೊತ್ತಾ ಈ ಕೃಷಿಯಲ್ಲಿ! ಪ್ರಯತ್ನಿಸಿ ನೋಡಿ!

ಬ್ಲಡ್ ಪ್ರೆಶರ್ ಅಥವಾ ಬಿಪಿ (BP) ಕಾಣಿಸಿಕೊಂಡಾಗ ಅದನ್ನು ನಿಯಂತ್ರಣದಲ್ಲಿ ಇಡಲು ವೈದ್ಯರು (Doctor) ಮಾತ್ರೆಗಳನ್ನು ನೀಡುತ್ತಾರೆ ಈ ಔಷಧಿಯ ಹೊರತಾಗಿಯೂ ನೀವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳನ್ನು ಸೇವಿಸಬೇಕು ನೀವು ಇದನ್ನ ಅಭ್ಯಾಸ ಮಾಡಿಕೊಂಡರೆ, ಮುಂದಿನ ಬಾರಿ ವೈದ್ಯರೇ ನಿಮ್ಮನ್ನು ಪರೀಕ್ಷೆ ಮಾಡಿ ನಿಮಗೆ ಔಷಧಿ ಸೇವಿಸುವ ಅಗತ್ಯವೇ ಇಲ್ಲ ಎನ್ನುತ್ತಾರೆ ನೋಡಿ!

ಬಾಳೆಹಣ್ಣು ಸೇವನೆ: (Eat banana)
ಬ್ಲಡ್ ಪ್ರೆಶರ್ ಅಥವಾ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಹಲವು ಆಹಾರಗಳು ಪ್ರಯೋಜನಕಾರಿಯಾಗಿವೆ. ಬಾಳೆಹಣ್ಣು ಕೂಡ ಒಂದು. ಆರೋಗ್ಯ ತಜ್ಞರು ಹೇಳುವ ಪ್ರಕಾರ ಪ್ರತಿದಿನ ಒಂದು ಬಾಳೆಹಣ್ಣು ತಿನ್ನುವುದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ ಇದರಿಂದ ಹೃದ್ರೋಗದಂತಹ ಅಪಾಯ ಕೂಡ ಕಡಿಮೆಯಾಗುತ್ತದೆ. ಬಾಳೆಹಣ್ಣು ದೇಹದ ಅನೇಕ ರೋಗಗಳಿಗೆ ರಾಮಬಾಣ ಎನ್ನಬಹುದು ಯಾಕೆಂದರೆ ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಅಂಶ ಹೇರಳವಾಗಿರುತ್ತದೆ ಇದು ದೇಹದಲ್ಲಿ ಸೋಡಿಯಂ ಅಂಶವನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣು ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡ, ಹೃದಯಘಾತ, ಪಾರ್ಶ್ವ ವಾಯು ಇಂತಹ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಇದನ್ನೂ ಓದಿ: Flipkart Loan: ಕೇವಲ 30 ಸೆಕೆಂಡ್ ಗಳಲ್ಲಿ ಚಿಟಿಕೆ ಹೊಡೆದಷ್ಟು ಸುಲಭವಾಗಿ ಪಡೆಯಿರಿ 5 ಲಕ್ಷಗಳವರೆಗೆ ವೈಯಕ್ತಿಕ ಸಾಲ: ಸೇಫ್ ಅಂತೆ ಕಣ್ರೀ!

ದೇಹದಲ್ಲಿ ಸೋಡಿಯಂ ಹೆಚ್ಚಾದರೆ ರಕ್ತ ನಾಳಗಳ ಮೇಲೆ ಅದು ಒತ್ತಡ ಉಂಟು ಮಾಡುತ್ತದೆ ಇದರಿಂದ ನೀರಿನ ಸಮತೋಲನ ಆಗದೆ ದೇಹದಲ್ಲಿ ಸಮಸ್ಯೆ ಉಂಟಾಗುತ್ತದೆ. ಆದರೆ ಬಾಳೆಹಣ್ಣು ಸೇವನೆ ಮಾಡಿದರೆ ಅದರಲ್ಲಿ ಇರುವ ಪೊಟ್ಯಾಸಿಯಂ ಅಂಶ, ಮೂತ್ರಪಿಂಡಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ದೇಹದಲ್ಲಿರುವ ಹೆಚ್ಚುವರಿ ಉಪ್ಪನ್ನು ಮೂತ್ರದ ಮೂಲಕ ಹೊರ ಹಾಕುವಂತೆ ಮಾಡುತ್ತದೆ. ಅಂಶ ದೇಹದಲ್ಲಿ ದ್ರವ ಮತ್ತು ಎಲೆಕ್ಟ್ರೋಲೈಟ್ ಸಮತೋಲನದಲ್ಲಿ ಇರುವಂತೆ ಮಾಡುವುದರಿಂದ ರಕ್ತದೊತ್ತಡ ತಾನಾಗಿಯೇ ನಿಯಂತ್ರಣಕ್ಕೆ ಬರುತ್ತದೆ.

ಎಷ್ಟು ಬಾಳೆಹಣ್ಣು ತಿಂದರೆ ಒಳ್ಳೆಯದು?
ರಕ್ತದೊತ್ತಡ ಕಡಿಮೆಯಾಗಲು ಅಥವಾ ನಿಯಂತ್ರಣಕ್ಕೆ ಬರಲು ದಿನಕ್ಕೆ ಎರಡು ಬಾಳೆಹಣ್ಣು ತಿನ್ನುವುದು ಒಳ್ಳೆಯದು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಇದರಿಂದ ದೇಹದಲ್ಲಿರುವ ರಕ್ತದೊತ್ತಡ ಶೇಕಡ 10 ರಷ್ಟು ಕಡಿಮೆಯಾಗುತ್ತದೆ. ಒಂದು ಮಾಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ 109 ಕ್ಯಾಲೋರಿಗಳು, 18 ಗ್ರಾಂ ನೈಸರ್ಗಿಕ ಸಕ್ಕರೆ, 20 ಗ್ರಾಂ ಕಾರ್ಬೋಹೈಡ್ರೇಟ್ ಹಾಗೂ ತಲಾ ಒಂದು ಗ್ರಾಂ ಪ್ರೋಟೀನ್ ಮತ್ತು ಫೈಬರ್ ಕೂಡ ಇರುತ್ತೆ. ಇದರ ಜೊತೆಗೆ ವಿಟಮಿನ್ ಸಿ, ಪೋಲೆಟ್ ವಿಟಮಿನ್ ಎ, ಮೊದಲಾದ ಅಂಶಗಳು ಕೂಡ ಇರುತ್ತವೆ. ಇದರಿಂದಾಗಿ ದೇಹದಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಇನ್ನು ಸಾಕಷ್ಟು ಕಾಯಿಲೆಗಳಿಂದ ನೀವು ಮುಕ್ತಿ ಪಡೆಯಬಹುದು.

ಅಧಿಕ ರಕ್ತದ ಒತ್ತಡದ ಸಮಸ್ಯೆ ಇರುವವರು ಬಾಳೆಹಣ್ಣು ಸೇವನೆ ಮಾಡುವುದು ಒಳ್ಳೆಯದು ಆದರೆ ಅಂತವರಿಗೆ ಸಕ್ಕರೆ ಕಾಯಿಲೆ ಕೂಡ ಇದ್ದರೆ ಹೆಚ್ಚು ಬಾಳೆಹಣ್ಣು ಸೇವಿಸಲು ಸಾಧ್ಯವಿಲ್ಲ. ಸಂಪರ್ಕ ಮಾಡಿ ಅವರ ಸಲಹೆಯನ್ನು ಪಡೆದು ಬಾಳೆಹಣ್ಣು ಸೇವನೆ ಮಾಡುವುದು ಒಳ್ಳೆಯದು.

Comments are closed.