Property Rights for Women: ಮಹಿಳೆಗೆ ತನ್ನ ಪತಿ ಹಾಗೂ ಅತ್ತೆ ಆಸ್ತಿಯಲ್ಲಿ ಎಷ್ಟು ಹಕ್ಕಿದೆ ಗೊತ್ತಾ? ತಿಳಿದುಕೊಳ್ಳದೆ ಇದ್ರೆ ದೊಡ್ಡ ಲಾಸ್ ಆಗಬಹುದು!

Property Rights for Women: ಒಂದು ಹೆಣ್ಣು ಮದುವೆಯಾಗಿ ತಂದೆ ತಾಯಿಯನ್ನು ಬಿಟ್ಟು ಗಂಡನ ಮನೆಗೆ ಸೇರುತ್ತಾಳೆ. ಆಗ ಆಕೆಯ ಸಂಪೂರ್ಣ ಜವಾಬ್ದಾರಿ ಗಂಡ ಹಾಗೂ ಗಂಡನ ಮನೆಯವರದ್ದೇ ಆಗಿರುತ್ತದೆ. ಇನ್ನು ಆಸ್ತಿ ವಿಚಾರ ಬಂದಾಗ ಕೂಡ ಹೆಣ್ಣಿಗೆ ಆ ಮನೆಯಲ್ಲಿ ಸರಿಯಾದ ಸ್ಥಾನ ಮಾನ ಇದೆಯೇ ಆಕೆಗೂ ಕೂಡ ಗಂಡನ ಆಸ್ತಿಯಲ್ಲಿ ಪಾಲಿದೆಯೆ? ಈ ಬಗ್ಗೆ ನ್ಯಾಯಾಲಯದ (Court)  ತೀರ್ಮಾನ ಏನು ಎಲ್ಲದ್ರ ಬಗ್ಗೆ ಈ ಲೇಖನದಲ್ಲಿದೆ ಸಂಪೂರ್ಣ ಮಾಹಿತಿ. ಇದನ್ನೂ ಓದಿ: Ration Card Correction: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಹೊಸ ರೇಷನ್ ಕಾರ್ಡ್ ಕೂಡ ಮಾಡಿಸಿಕೊಳ್ಳಬಹುದೇ? ರಾಜ್ಯ ಸರ್ಕಾರದ ಮಹತ್ವದ ಸೂಚನೆ!

ಗಂಡನ ಆಸ್ತಿಯ ಮೇಲೆ ಹೆಂಡತಿಗೆ ಹಕ್ಕು ಇದೆಯೇ?

ಸಾಮಾನ್ಯವಾಗಿ ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಂಪೂರ್ಣ ಹಕ್ಕಿದೆ (Property rights) ಎಂದು ಎಲ್ಲರೂ ಭಾವಿಸುತ್ತಾರೆ ಆದರೆ ಇದು ಪೂರ್ಣ ನಿಜವಲ್ಲ. ಹೆಂಡತಿಗೆ ಮಾತ್ರವಲ್ಲದೆ ಆ ಕುಟುಂಬದ ಇತರ ಸದಸ್ಯರಿಗೂ ಕೂಡ ಆ ಆಸ್ತಿಯ ಮೇಲೆ ಹಾಕಿರುತ್ತದೆ. ಒಬ್ಬ ಮಹಿಳೆಯ ಪತಿ ಯಾವುದೇ ಆಸ್ತಿಯನ್ನು ಹೊಂದಿದ್ದರೂ ಕೂಡ ಹೆಂಡತಿಯ ಜೊತೆಗೆ ಆತನ ತಾಯಿ ಹಾಗೂ ಮಕ್ಕಳಿಗೂ ಕೂಡ ಹಕ್ಕಿರುತ್ತದೆ.

ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಉಯಿಲು (Property Will) ಮಾಡಿ ಮರಣ ಹೊಂದಿದರೆ ಅವನ ಆಸ್ತಿ ನಾಮಿನಿಗೆ ಸೇರುತ್ತದೆ. ನಾಮಿನಿ ಆತನ ಹೆಂಡತಿಯ ಹೆಸರು ಆಗಿರಬಹುದು. ಬರೆಯದೆ ಸತ್ತರೆ, ಆತನ ಆಸ್ತಿ ಹೆಂಡತಿ ಮಾತ್ರವಲ್ಲದೆ ಆತನ ತಾಯಿ ಹಾಗೂ ಮಕ್ಕಳಿಗೂ ಕೂಡ ಸೇರುತ್ತದೆ ಈ ಆಸ್ತಿಯನ್ನು ಸಮಾನವಾಗಿ ಹಂಚಬೇಕಾಗುತ್ತದೆ.

ಗಂಡನ ಪೂರ್ವಜರ ಆಸ್ತಿಯಲ್ಲಿ ಹೆಂಡತಿಗಿದ್ಯಾ ಹಕ್ಕು?

ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಯಾವುದೇ ಹಕ್ಕು ಇರುವುದಿಲ್ಲ ಗಂಡ-ಮರಣ ಹೊಂದಿದರೆ ಆ ಮಹಿಳೆಯನ್ನು ಅತ್ತೆಯ ಮನೆಯಿಂದ ಹೊರಗೆ ಹಾಕುವಂತಿಲ್ಲ. ಅತ್ತೆಯ ಮನೆಯವರು ಆಕೆಗೆ ಜೀವನಾಂಶ ನೀಡಬೇಕು ಆದರೆ ಗಂಡನ ಪೂರ್ವಜರ ಆಸ್ತಿಯಲ್ಲಿ ಮಾತ್ರ ಹಾಕಿದೆ ಪಾಲು ಸಿಗುವುದಿಲ್ಲ. ಒಂದು ವೇಳೆ ಗಂಡನ ಮನೆಯಿಂದ ಹೊರಗೆ ಹೋಗಬೇಕಾಗಿರುವ ಪರಿಸ್ಥಿತಿ ಬಂದರೆ ಅತ್ತೆಯ ಆರ್ಥಿಕ ಪರಿಸ್ಥಿತಿಯನ್ನು ನೋಡಿ ನ್ಯಾಯಾಲಯ ಇಂತಿಷ್ಟು ಹಣವನ್ನು ಜೀವನಾಂಶಾವಾಗಿ ಕೊಡಬೇಕು ಎಂದು ಸೂಚಿಸುತ್ತದೆ. ಆದರೆ ಆ ಹೆಣ್ಣಿಗೆ ಮಕ್ಕಳಿದ್ದರೆ ತಂದೆಯ ಮರಣದ ನಂತರ ತಂದೆಯ ಪಾಲಿನ ಸಂಪೂರ್ಣ ಆಸ್ತಿ ಅವರಿಗೆ ಸಿಗುತ್ತದೆ. ಇನ್ನು ವಿಧವೆಯಾಗಿರುವ ಮಹಿಳೆ ಮರುಮದುವೆ ಮಾಡಿಕೊಂಡರೆ ಆಕೆಗೆ ಗಂಡನ ಮನೆಯವರಿಂದ ಸಿಗುತ್ತಿದ್ದ ಜೀವನಾಂಶ ನಿಂತು ಹೋಗುತ್ತದೆ. ಇದನ್ನು ಓದಿ: Arecanut Farming: ಎಷ್ಟು ಕಡಿಮೆ ಹೂಡಿಕೆ ಮಾಡಿ ಲಕ್ಷ ಲಕ್ಷ ಹಣ ಗಳಿಸಬಹುದು ಗೊತ್ತಾ ಈ ಕೃಷಿಯಲ್ಲಿ! ಪ್ರಯತ್ನಿಸಿ ನೋಡಿ!

ವಿಚ್ಛೇದಿತ ಮಹಿಳೆಗೆ ಗಂಡನ ಆಸ್ತಿಯಲ್ಲಿ ಪಾಲು ಇದೆಯೇ?

ಒಬ್ಬ ಹೆಣ್ಣು ತನ್ನ ಪತಿಯಿಂದ ವಿಚ್ಛೇದನ (Divorce)  ಪಡೆದರೆ ಆಕೆ ಗಂಡನಿಂದ ಜೀವನ ಅಂಶವನ್ನು ಪಡೆದುಕೊಳ್ಳಬಹುದು. ಗಂಡ ಹೆಂಡತಿಯರ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಅದರ ಮೇಲೆ ಜೀವನ ಅಂಶದ ಹಣವನ್ನು ನಿರ್ಧಾರ ಮಾಡಲಾಗುತ್ತದೆ. ಗಂಡ ಹೆಂಡತಿ ಮದುವೆಯಾಗಿ ಅವರಿಗೆ ಮಗು ಇದ್ದು ಇಬ್ಬರು ವಿಚ್ಚೇಧನ ಹೊಂದಿದರೆ ಆಗ ಆ ಮಗುವಿಗೂ ಕೂಡ ಪತಿ ಜೀವನಾಂಶ ಕೊಡಬೇಕಾಗುತ್ತದೆ. ಆದರೆ ವಿಚ್ಛೇದ ಮಹಿಳೆಗೆ ಗಂಡನ ಆಸ್ತಿಯ ಮೇಲೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಆದರೆ ಹೆಣ್ಣು ಮಕ್ಕಳಿದ್ದರೆ ಅವರು ತಂದೆಯ ಆಸ್ತಿಯ ಮೇಲೆ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾರೆ. ವಿಚ್ಚೇದನದ ಸಮಯದಲ್ಲಿ ಗಂಡ ಹೆಂಡತಿ (Husband and wife) ಇಬ್ಬರೂ ಸೇರಿ ಆಸ್ತಿ ಮಾಡಿದರೆ ಅದನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ.

Comments are closed.