D-SIB: ಈ ಬ್ಯಾಂಕ್ ಗಳಲ್ಲಿ ಮಾತ್ರ ಎಫ್ ಡಿ ಇಟ್ಟರೆ ಸೇಫ್: ಮೂರು “ಸುರಕ್ಷಿತ” ಬ್ಯಾಂಕ್ ಹೆಸರು ಬಹಿರಂಗಪಡಿಸಿದ ಆರ್ ಬಿ ಐ! ನಿಮ್ಮ ಖಾತೆಯು ಇದಿಯಾ ನೋಡಿಕೊಳ್ಳಿ!

D-SIB: ಯಾವುದೇ ಬ್ಯಾಂಕ್ (bank) ವ್ಯವಹಾರ ಮಾಡುವಾಗ ಬ್ಯಾಂಕನಲ್ಲಿ ಹಣ ಡೆಪಾಸಿಟ್ (Deposit money) ಇಡುವಾಗ ಆ ಬ್ಯಾಂಕ್ ಎಷ್ಟು ಸುರಕ್ಷಿತ ಎಂಬುದನ್ನು ನೋಡಿಕೊಳ್ಳಬೇಕು. ಆದರೆ ಯಾವ ಬ್ಯಾಂಕ್ ಸುರಕ್ಷಿತ ಯಾವ ಬ್ಯಾಂಕ ಸುರಕ್ಷಿತವಲ್ಲ ಎಂದು ತಿಳಿದುಕೊಳ್ಳಲು ಅಷ್ಟು ಸುಲಭವಲ್ಲ ಆದರೆ ಈಗ ಆರ್ ಬಿ ಐ (RBI) ಇದಕ್ಕೂ ಅವಕಾಶ ಮಾಡಿಕೊಟ್ಟಿದ್ದು ಈ ವರ್ಷ ಮೂರು ಬ್ಯಾಂಕ್ಗಳನ್ನು ಸುರಕ್ಷತೆಯ ಪಟ್ಟಿಯಲ್ಲಿ ಸೇರಿಸಿದೆ ಎರಡು ವಾಣಿಜ್ಯ ಬ್ಯಾಂಕ್ (commercial banks) ಹಾಗೂ ಒಂದು ಸಾರ್ವಜನಿಕ ಬ್ಯಾಂಕ್ (Public bank) ಅನ್ನು ಘೋಷಿಸಿದೆ.

ಆರ್ ಬಿ ಸುರಕ್ಷಿತ ಎಂದು ಘೋಷಿಸಿರುವ ಮೂರು ಬ್ಯಾಂಕ್ ಗಳು ಯಾವವು?

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI, (SBI) ಹೆಚ್ ಡಿ ಎಫ್ ಸಿ (HDFC) ಹಾಗೂ ಐಸಿಐಸಿಐ (ICICI) ಬ್ಯಾಂಕ್ ಅನ್ನು D-SIB ( Somestic systematically important banks) ದೇಶಿಯ ವ್ಯವಸ್ಥೆತ ಪ್ರಮುಖ ಬ್ಯಾಂಕ್ ಎಂದು ಈ ಮೂರು ಬ್ಯಾಂಕ್ಗಳನ್ನು ಘೋಷಿಸಲಾಗಿದೆ. ಈ ಬ್ಯಾಂಕ್ ಅಕೌಂಟ್ ಯಾವುದೇ ಹಣಕಾಸು ವ್ಯವಹಾರ ಮಾಡುವುದಕ್ಕೆ “ಸುರಕ್ಷಿತ” ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಅಂದ್ರೆ ಈ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಆರ್ಥಿಕ ಒತ್ತಡ ಅಥವಾ ಇತರ ಸಮಸ್ಯೆಗಳಾದರೆ ಸರ್ಕಾರ ಅದಕ್ಕೆ ಸಹಾಯ ಮಾಡುತ್ತದೆ ಹಾಗಾಗಿ ಗ್ರಾಹಕರು ಯಾವುದೇ ಚಿಂತೆ ಇಲ್ಲದೆ ಈ ಬ್ಯಾಂಕ್ಗಳಲ್ಲಿ ಸ್ಥಿರ ಠೇವಣಿ (FD) ಅಥವಾ ಇತರ ಖಾತೆ ಹೊಂದಬಹುದು. ಈ ಬ್ಯಾಂಕ್ ಗಳಲ್ಲಿ ಹಣ ಇಟ್ಟರೆ ಸೇಫ್ ಎಂದು ಅಧಿಕೃತವಾಗಿ RBI ತಿಳಿಸಿದೆ.

ಆರ್ ಬಿ ಸುರಕ್ಷಿತ ಬ್ಯಾಂಕ್ ಎಂದು ಪರಿಗಣಿಸುವುದು ಹೇಗೆ

ಪ್ರತಿ ವರ್ಷ ಹಣಕಾಸು ವರ್ಷದ ಅವಧಿಯಲ್ಲಿ ಯಾವ ಬ್ಯಾಂಕ್ ಸೇಫ್ ಎಂಬುದನ್ನು ರಿಸರ್ವ್ ಬ್ಯಾಂಕ್ ಪರಿಶೀಲಿಸುತ್ತದೆ. ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಆರ್ ಬಿ ಐ ಮೌಲ್ಯಮಾಪನವನ್ನು ಮಾಡಿ ಹೊಸ ಪಟ್ಟಿ ಬಿಡುಗಡೆ ಮಾಡುತ್ತದೆ. ಅದೇ ಪ್ರತಿ ವರ್ಷ ಹಿಂದಿನ ಬಾರಿ ಸೇರಿಸಲ್ಪಟ್ಟ ಬ್ಯಾಂಕುಗಳು ಈಗಲೂ ಸುರಕ್ಷಿತವಾಗಿವೆಯೇ ಇಲ್ಲವೇ ಎಂಬುದನ್ನು ಕೂಡ ಮರು ಪರಿಶೀಲನೆ ಮಾಡುತ್ತದೆ. ಬ್ಯಾಂಕುಗಳಲ್ಲಿ ನಡೆಯುವ ವ್ಯವಹಾರ ಇಕ್ವಿಟಿ ಮೊದಲಾದವುಗಳನ್ನು ಗಮನದಲ್ಲಿ ಇಟ್ಟುಕೊಂಡು ಯಾವ ಬ್ಯಾಂಕ್ ಸುರಕ್ಷಿತ ಎಂಬುದನ್ನು ಆರ್‌ಬಿಐ ನಿರ್ಧಾರ ಮಾಡುತ್ತದೆ. ಸದ್ಯ ಎಸ್ ಬಿ ಐ, ಐ ಸಿ ಐ ಸಿ ಐ ಬ್ಯಾಂಕ್ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ಡೆಪಾಸಿಟ್ ಹಣವನ್ನು ಇಡಲು ಕೂಡ ಸೇಫ್ ಎಂದು ಪರಿಗಣಿಸಲಾಗಿದ್ದು ಇಲ್ಲಿ ಹಣ ಕಳೆದುಕೊಳ್ಳುವ ಅಪಾಯ ಇರುವುದಿಲ್ಲ.

Comments are closed.