Political News: ವಿರೋಧ ಪಕ್ಷದ ‘ಇಂಡಿಯಾ’ ಭಣದ ರಾಜಕೀಯ ತಂತ್ರದಲ್ಲಿ ಗೆಲುವು ಸಾಧಿಸುತ್ತಾ ಮೋದಿ ಪಡೆ: ಸಮೀಕ್ಷೆ ಹೇಳಿದ್ದೇನು?

Political News : 2024ರ ಲೋಕಸಭಾ ಚುನಾವಣೆ (Lok Sabha election 2024) ಎಲ್ಲರಲ್ಲೂ ಬಹಳ ಕುತೂಹಲ ಮೂಡಿಸಿದೆ ಪಂಚಾಯಿತಿ ಕಟ್ಟೆಯಿಂದ ಹಿಡಿದು ಸೋಶಿಯಲ್ ಮೀಡಿಯಾ (Social Media) ದ ವರೆಗೆ ಎಲ್ಲರೂ ಮುಂಬರುವ ಎಲೆಕ್ಷನ್ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ಸಮರ್ಥ ಎದುರಾಳಿಗಳೆ ಇಲ್ಲ ಎನ್ನುವಂತೆ ಬಿಜೆಪಿ (BJP) ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಮೋದಿ ಪಡೆ (Modi) ಹ್ಯಾಟ್ರಿಕ್ ಗೆಲುವನ್ನು ತಪ್ಪಿಸಲು ವಿರೋಧಪಕ್ಷಗಳು (Opposition party)  ಇಂಡಿಯಾ (India) ಎನ್ನುವ ಹೆಸರಿನಲ್ಲಿ ಒಂದಾಗಿದ್ದು ಏನ್ ಡಿ ಎ ಒಕ್ಕೂಟಕ್ಕೆ ಪೈಪೋಟಿ ನೀಡಲಿವೆ. ಇದನ್ನೂ ಓದಿ: Ration card Correction: ಇದೊಂದು ಕೆಲಸ ಮಾಡದೆ ಇದ್ರೆ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರೋದಿಲ್ಲ: ಆದರೂ ಸರ್ಕಾರ ಕೊಟ್ಟ ಈ ಗುಡ್ ನ್ಯೂಸ್ ಪ್ರಯೋಜನ ಪಡ್ಕೊಳ್ಳಿ!

ಹೆಚ್ಚಾಗುತ್ತಿದೆಯಾ “ಇಂಡಿಯಾ”ಜನಪ್ರಿಯತೆ?

ಇತ್ತೀಚಿಗೆ ಮೂಡ್ ಆಫ್ ದಿ ನೇಶನ್ ಹೆಸರಿನಲ್ಲಿ ಇಂಡಿಯಾ ಟುಡೇ ಸಮೀಕ್ಷೆ ಒಂದನ್ನು ನಡೆಸಿತು. ಈ ಸಮೀಕ್ಷೆ ಪ್ರಕಾರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಫಿಕ್ಸ್. 26 ವಿರೋಧ ಪಕ್ಷಗಳು ಒಕ್ಕೂಟ ಇಂಡಿಯಾ ಸೋಲನ್ನ ಅನುಭವಿಸಬೇಕಾಗಬಹುದು ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ 543 ಲೋಕಸಭಾ ಸ್ಥಾನದಲ್ಲಿ ಎನ್ ಡಿ ಎ 36 ಸ್ಥಾನವನ್ನು ಪಡೆದುಕೊಳ್ಳಲಿದೆ ವಿರೋಧ ಪಕ್ಷಕ್ಕೆ 193 ಸ್ಥಾನಗಳು ಮಾತ್ರ ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: Organ Donation: ಮನುಷ್ಯನ ಸಾವಿನ ನಂತರ ದೀರ್ಘಕಾಲದ ವರೆಗೆ ದೇಹದ ಭಾಗಗಳು ಜೀವಂತವಾಗಿರುತ್ತೆ ಎನ್ನುವುದು ನಿಜವೇ?

ಈ ಸಮೀಕ್ಷೆಯನ್ನು ಜನವರಿ ತಿಂಗಳಿನಲ್ಲಿಯೂ ನಡೆಸಲಾಗಿತ್ತು. ಆಗ NDA 298 ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದಿದ್ದರೆ ಇಂಡಿಯಾ ಒಕ್ಕೂಟ 153 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇತ್ತು. ಈಗ ಎನ್ ಡಿ ಎ ಬಲ ಇನ್ನಷ್ಟು ಜಾಸ್ತಿಯಾಗಿದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಆದರೆ ಕೇವಲ ಎಂಟು ತಿಂಗಳಿನಲ್ಲಿ ಇಂಡಿಯಾ ಒಕ್ಕೂಟ 153 ಸ್ಥಾನದಿಂದ 193 ಸ್ಥಾನಗಳಿಗೆ ಏರಿಕೆಯಾಗಿದೆ. ಇದೇ ರೀತಿ ಮುಂದುವರೆದರೆ ಬಿಜೆಪಿ ಸೋಲನ್ನು ಕಾಣಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಸಮೀಕ್ಷೆ ತಿಳಿಸುತ್ತದೆ.

ಮತದಾರನನ್ನು ಸಮೀಕ್ಷೆ ಮಾಡಲಾಗಿದೆ

ಇನ್ನು ಮತದಾರರ ಸಮೀಕ್ಷೆಯ ಪ್ರಕಾರ ಶೇಕಡ 33% ಅಷ್ಟು ಜನ ಇಂಡಿಯಾ ಒಕ್ಕೂಟ ಪರವಾಗಿ ಮಾತನಾಡಿದ್ದರೆ 54 ರಷ್ಟು ಜನ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವೋಟ್ ಮಾಡಿದ್ದಾರೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ನಾಯಕತ್ವವನ್ನು ರಾಹುಲ್ ಗಾಂಧಿ ವಹಿಸಿಕೊಳ್ಳಬೇಕು ಎಂದು 24% ರಷ್ಟು ಜನ ವೋಟ್ ಮಾಡಿದ್ದರೆ ಅರವಿಂದ್ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ ಪರವಾಗಿ ತಲಾ 15% ನಷ್ಟು ವೋಟ್ ಬಂದಿದೆ. ಒಟ್ಟಿನಲ್ಲಿ ಬಿಜೆಪಿ ಮೋದಿ ಪಡೆದ ಸ್ಥಾನವನ್ನು ಉಳಿಸಿಕೊಳ್ಳಲು ಏಕೆಂದರೆ ಮತ್ತಷ್ಟು ಶ್ರಮವಹಿಸುವ ಅಗತ್ಯ ಇದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇದನ್ನೂ ಓದಿ: SBI FD rate: SBI ಹೆಚ್ಚಿಸಿದೆ ಎಫ್ ಡಿ ಮೇಲಿನ ಬಡ್ಡಿ; ಪಡೆಯಿರಿ 10.10% ವರೆಗಿನ ಬಡ್ಡಿ, ಗಳಿಸಿ ಹೆಚ್ಚು ಲಾಭ!

Comments are closed.