Electric two-wheeler problems: ಪೆಟ್ರೋಲ್ ಸ್ಕೂಟರ್ ದುಬಾರಿ ಅಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಮಾಡಿದ್ರೆ ಇದರಲ್ಲೂ ಇಂತಹ ಸಮಸ್ಯೆ ಇದೆಯಾ; ಖರೀದಿಗೂ ಮೊದಲು ನೂರು ಬಾರಿ ಯೋಚನೆ ಮಾಡಿ!

Electric two-wheeler problems: ಇತ್ತೀಚಿಗೆ ಎಲ್ಲರಿಗೂ ಗೊತ್ತಿರುವ ಹಾಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿ ಹಾಗೂ ಮಾರಾಟ ಹೆಚ್ಚಾಗಿದೆ ಜನರ ಬೇಡಿಕೆಗೆ ತಕ್ಕಹಾಗೆ ಬೇರೆ ಬೇರೆ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರು ಮಾಡುತ್ತಿವೆ ಅದರಲ್ಲೂ ಸ್ಟಾರ್ಟ್ ಅಪ್ (Startup company)  ಕಂಪನಿಗಳು ಹೆಚ್ಚಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಈ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳ ವಿನ್ಯಾಸ ಕಾರ್ಯ ಕ್ಷಮತೆ ಹಾಗೂ ಬೆಲೆಯಲ್ಲಿಯೂ ಕೂಡ ಬಹಳ ದೊಡ್ಡ ಪೈಪೋಟಿ ಇರುತ್ತದೆ. ಹೀಗೆ ಉತ್ತಮವಾಗಿದೆ ಎಂದುಕೊಂಡು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಮಾಡಿದವರ ಪರಿಸ್ಥಿತಿ ಇಂದು ಚಿಂತೆ ಮಾಡುವಂತೆ ಆಗಿದೆ ಇದಕ್ಕೆ ಕಾರಣ ದ್ವಿಚಕ್ರ ವಾಹನಗಳಲ್ಲಿ ಕಂಡು ಬರುತ್ತಿರುವ ತಾಂತ್ರಿಕ ದೋಷಗಳು. ಇದನ್ನೂ ಓದಿ: UPI Credit Line Loan: ಅಕೌಂಟ್ ನಲ್ಲಿ ಒಂದು ರೂಪಾಯಿ ಇಲ್ಲದೆ ಇದ್ದರೂ UPI ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿ. ಹೇಗೆ ಗೊತ್ತೇ?

ಬ್ಯಾಟರಿ ಸಮಸ್ಯೆ:

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಹುತೇಕ ನಿಂತಿರುವುದೇ ಈ ಬ್ಯಾಟರಿ (Battery problems)  ಮೇಲೆ ಎನ್ನಬಹುದು ಬ್ಯಾಟರಿ ಶಕ್ತಿ ಉತ್ತಮವಾಗಿದ್ದರೆ ಮಾತ್ರ ಈ ಸ್ಕೂಟರ್ ಅಥವಾ ಬೈಕ್ ಹೆಚ್ಚು ಸಮಯ ಬಾಳಿಕೆಗೆ ಬರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹೆಚ್ಚು ತಯಾರಿಸುವ ಭರದಲ್ಲಿ ಬ್ಯಾಟರಿ ಬಗ್ಗೆ ಕಂಪನಿಗಳು ಹೆಚ್ಚಿನ ಗಮನ ಕೊಡುತ್ತಿಲ್ಲ ಎಂದು ಕಾಣುತ್ತದೆ. ಯಾಕೆಂದ್ರೆ ಬ್ಯಾಟರಿ ಬೇಗ ಬಿಸಿಯಾಗುತ್ತದೆ ಇದರಿಂದ ಬ್ಯಾಟರಿಯ ಶಕ್ತಿ ಕೂಡ ಬಹಳ ಬೇಗ ಕಡಿಮೆಯಾಗುತ್ತದೆ. ಒಮ್ಮೆ ಬ್ಯಾಟರಿಯ ವಾರಂಟಿ ಮುಗಿದ ನಂತರ ಮತ್ತೆ ಹೊಸ ಬ್ಯಾಟರಿ ಕೊಳ್ಳುವುದು ಹೊಸ ಗಾಡಿ ಖರೀದಿ ಮಾಡಿದಷ್ಟೇ ದುಬಾರಿಯಾಗಿರುತ್ತದೆ.

ಮೋಟಾರ್ ಬಿಸಿಯಾಗುವುದು:

ಇನ್ನು ಎಲೆಕ್ಟ್ರಿಕಲ್ ದ್ವಿಚಕ್ರವಾಹನಗಳ ಮತ್ತೊಂದು ಸಮಸ್ಯೆ ಅಂದ್ರೆ ಬಹಳ ಬೇಗ ಮೋಟಾರ್ ಬಿಸಿಯಾಗುತ್ತದೆ ವಾಹನದ ಕಾರ್ಯ ಕ್ಷಮತೆ ರೇಂಜ್ ತೂಕ ಎಲ್ಲವೂ ಒಂದು ಸ್ಕೂಟರ್ನಿಂದ ಇನ್ನೊಂದಕ್ಕೆ ವ್ಯತ್ಯಾಸವಿರುತ್ತದೆ. ನಿಮ್ಮ ಸ್ಕೂಟರ್ ನಲ್ಲಿ ಬಳಸಿರುವ ಬ್ಯಾಟರಿಗೆ ಹೊಂದಿಕೊಂಡಂತೆ ಆ ಸ್ಕೂಟರ್ ಅನ್ನು ಕಾರ್ಯಕ್ಷಮತೆ ಇರುತ್ತದೆ ಬ್ಯಾಟರಿ ಉತ್ತಮವಾಗಿ ಇಲ್ಲದೆ ಇದ್ದರೆ ಕಾರ್ಯ ಕ್ಷಮತೆ ಕೂಡ ಕುಸಿಯುತ್ತದೆ. ಇವನ ಬಹಳ ಬಿಸಿ ಆಗುವ ಸಮಸ್ಯೆ ಹೊಂದಿರುವುದರಿಂದ ಶಾರ್ಟ್ ಸರ್ಕ್ಯೂಟ್ ಆಗುವ ಸಮಸ್ಯೆ ಕೂಡ ಇರುತ್ತದೆ ಥರ್ಮಲ್ ಸ್ಥಿರತೆ ಕೂಡ ಕಡಿಮೆ ಇರುತ್ತದೆ ಹಾಗಾಗಿ ಇದರ ಕಾರ್ಯ ಕ್ಷಮತೆ ಅಸ್ಥಿರವಾಗಿರುತ್ತದೆ ಎನ್ನಬಹುದು. ಇದನ್ನೂ ಓದಿ: Health Insurance policy: ಆರೋಗ್ಯ ವಿಮೆ ಮಾಡಿಸುವಾಗ ಈ ತಪ್ಪು ಮಾಡಬೇಡಿ; ಮಾಡಿದ್ರೆ ಪಾಲಿಸಿ ಕ್ಲೈಮ್ ಮಾಡಿದ್ರೂ ಒಂದು ರೂಪಾಯಿಯೂ ಸಿಗೋದಿಲ್ಲ!

ಸ್ಪೀಡ್ ಮೋಡ್ ಬದಲಾವಣೆ:

ಸ್ಕೂಟರ್ ನಾ ಇನ್ನೊಂದು ಲೋಪ ದೋಷ ಅಂದ್ರೆ ವೇಗ ವರ್ಧಕ ಸಮಸ್ಯೆ. ಇದಕ್ಕಿದ್ದ ಹಾಗೆ ಸ್ಪೀಡ್ ಮೋಡ್ ಬದಲಾಗುತ್ತದೆ ಅಗತ್ಯ ಇಲ್ಲದಿದ್ದರೂ ರಿವರ್ಸ್ ಮೋಡ್ ಗೆ ಸಕ್ರಿಯಗೊಳ್ಳುವುದರಿಂದ ವಾಹನ ರೈಡ್ ಮಾಡುವವರೆಗೂ ತೊಂದರೆಯಾಗುತ್ತದೆ.

ಕಳಪೆ ಗುಣಮಟ್ಟ:

ಇತ್ತೀಚಿಗೆ ಎಲೆಕ್ಟ್ರಿಕ್ ವಾಹನಗಳ ಗುಣಮಟ್ಟ ಉತ್ತಮವಾಗಿದೆ ಕಾರ್ಯ ಕ್ಷಮತೆ ಚೆನ್ನಾಗಿದೆ ಎಂದು ಹೇಳಿಕೊಳ್ಳುತ್ತಾರೆ ಅಷ್ಟೇ ಆದರೆ ವಾಹನದಲ್ಲಿ ಬಳಸಿರುವ ಪ್ಯಾನೆಲ್ ಗಳು ಪ್ಯಾನಲ್ ಗಳ ನಡುವಿನ ಅಂತರ ಎಲ್ಲವೂ ಉತ್ತಮವಾಗಿರುವುದಿಲ್ಲ ಸಸ್ಪೆನ್ಷನ್ ಕೂಡ ಕಳಪೆ ಸಾಮರ್ಥ್ಯ ಹೊಂದಿರುತ್ತದೆ. ಬ್ರೇಕ್ ಲಿವರ್ ಚಾರ್ಜಿಂಗ್ ಪೋರ್ಟ್ ಡಿಸ್ಕ್ ಬ್ರೇಕ್ ಇಂಡಿಕೇಟರ್ ಸ್ವಿಚ್ ಈ ಮೊದಲಾದ ಸಣ್ಣಪುಟ್ಟ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡದೆ ಇರುವುದರಿಂದ ಇದರ ತಯಾರಿಕೆಯಲ್ಲಿ ಸಾಕಷ್ಟು ಲೋಪ ದೋಷಗಳು ಕಂಡುಬರುತ್ತವೆ.

ಡಿಸ್ಪ್ಲೇ ಸಮಸ್ಯೆ:

ಅಷ್ಟು ದುಬಾರಿ ಹಣ ಕೊಟ್ಟು ಖರೀದಿ ಮಾಡಿದರು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಸಮಸ್ಯೆ ಸಾಕಷ್ಟು. ಎಲೆಕ್ಟ್ರಿಕಲ್ ವಾಹನಗಳ ಡಿಸ್ಪ್ಲೇ ಯಲ್ಲಿ ಯಾವಾಗಲೂ ಸಮಸ್ಯೆ ಇರುತ್ತೆ ಟಚ್ ಸೆನ್ಸಿಟಿವಿಟಿ ಕೂಡ ಉತ್ತಮವಾಗಿ ಇಲ್ಲದೆ ಇರುವುದರಿಂದ ಬಹಳ ಬೇಗ ಡಿಸ್ಪ್ಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ಖರೀದಿ ನಂತರದ ನಂತರದ ಸಮಸ್ಯೆ:

ಮೇಲ್ನೋಟಕ್ಕೆ ಬಹಳ ಚೆನ್ನಾಗಿ ಇರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಿದ ನಂತರ ಉಂಟಾಗುವ ಸಮಸ್ಯೆ ಇರುವುದಿಲ್ಲ ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಷ್ಟು ಸಂದರ್ಭದಲ್ಲಿ ಸರಿಯಾಗಿ ಸರ್ವಿಸ್ ಮಾಡದೆ ಕೂಡ ಬೈಕ್ ಹಿಂತಿರುಗಿಸಬಹುದು ಇದರಿಂದ ಮತ್ತೆ ದ್ವಿಚಕ್ರ ವಾಹನ ಓಡಿಸುವಾಗ ಸಮಸ್ಯೆ ಎದುರಾಗುತ್ತದೆ. ಇದನ್ನೂ ಓದಿ: Mera Bill Meta Adhikar: ಇನ್ನು ಮುಂದೆ ಶಾಪಿಂಗ್ ಬಿಲ್ ಬಿಸಾಡಬೇಡಿ; ಈ ಒಂದು ಕೆಲಸ ಮಾಡಿದ್ರೆ ಗಳಿಸಬಹುದು ಒಂದು ಕೋಟಿವರೆಗೆ ಹಣ!

Comments are closed.