Karnataka Politics: ಸೈಲೆಂಟಾಗಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ರಾ ಬಿ.ಕೆ. ಹರಿಪ್ರಸಾದ್? ಸಿಎಂ ಹೆಸರೇಳದೆ ಹಿಗ್ಗಾಮುಗ್ಗಾ ವಾಗ್ದಾಳಿ!

Karnataka Politics: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ (Congress Government) ರಚನೆಯಾಗಿ ಆಗಲೇ ಮೂರು ತಿಂಗಳು ಕಳೆದಿದೆ. ೫ ಗ್ಯಾರಂಟಿಗಳ ಭರವಸೆ ನೀಡಿ ಗೆದ್ದು ಬೀಗಿರುವ ಕಾಂಗ್ರೆಸ್ ಈಗ ಅದನ್ನು ಜಾರಿ ಮಾಡಲು ಒದ್ದಾಡತೊಡಗಿದೆ. ಈ ಮಧ್ಯೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ತಮಗೆ ಅಧಿಕಾರ ಸಿಗಲಿಲವಲ್ಲ ಎನ್ನುವ ಬೇಸರದಲ್ಲಿರುವ ಕೆಲವು ಮುಖಂಡರು ಕಾಂಗ್ರೆಸ್ ಹಾಗೂ ಸಿಎಂ ವಿರುದ್ಧವೇ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (B.K. Hariprasad) ಮುಂಚೂಣಿಯಲ್ಲಿದ್ದಾರೆ. ಇದನ್ನೂ ಓದಿ: No Tax in this country: ಭವಿಷ್ಯದಲ್ಲಿ ಈ ದೇಶಗಳಿಗೆ ಶಿಫ್ಟ್ ಆಗೋಕ್ಕೇ ಯೋಚಿಸುತ್ತಿದ್ದಾರೆ ಹಲವರು; ಎಷ್ಟು ಹಣ ಮಾಡಿದ್ರೂ ಸರ್ಕಾರಕ್ಕೆ ಒಂದು ರೂ. ಟ್ಯಾಕ್ಸ್ ಕೂಡ ಕಟ್ಟೋದು ಬೇಡವಂತೆ; ಯಾವ ದೇಶಗಳು ಗೊತ್ತೇ?

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮಂತ್ರಿಗಳಾಗುವವರ ಪಟ್ಟಿಯಲ್ಲಿ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಮಂಚೂಣಿಯಲ್ಲಿತ್ತು. ಆದರೆ ಯಾಕೋ ಅವರಿಗೆ ಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಯಾವ ಕಾಣದ ಕೈಗಳು ಇವರಿಗೆ ಮಂತ್ರಿ ಪದವಿ ತಪ್ಪಿಸಿದರೋ ಅದು ತಿಳಿಯುತ್ತಿಲ್ಲ. ಇದರಿಂದ ಅಸಮಾದಾನಗೊಂಡಿರುವ ಅವರು ಪದೇ ಪದೇ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಸಮಾನ ಮನಸ್ಕರ ಸಭೆ ಅಥವಾ ಹಿಂದುಳಿದ ವರ್ಗದವರ ಹಾಗೂ ಈಡಿಗ,ಬಿಲ್ಲವ, ನಾಮಧಾರಿ ಸಮಾಜದವರ ಸಭೆಯಲ್ಲಿ ದೊಡ್ಡ ಬಾಂಬ್ ಸಿಡಿಸಿದ್ದಾರೆ.

ಈ ಸಭೆಯಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಯಾರೋ ಕೆಲವರು ಹ್ಯೂಬ್ಲೋಟ್ ವಾಚ್ ಹಾಕಿಕೊಂಡು, ಪಂಚೆ ಕಟ್ಟಿಕೊಂಡು, ಒಳಗಡೆ ಖಾಕಿ ಚಡ್ಡಿ ಹಾಕಿಕೊಂಡು ತಾನು ಸಮಾಜವಾದಿ ಎಂದು ಹೇಳುತ್ತಾರೆ. ಸಮಾಜವಾದಿ ಎಂದರೆ ಮಜಾವಾದಿ ಅಲ್ಲ. ಅಹಂಕಾರದಿಂದ ಮೆರೆದವರಿಗೆ ಜನರೇ ತಕ್ಕ ಶಾಸ್ತಿ ಮಾಡುತ್ತಾರೆ ಎನ್ನುವುದಕ್ಕೆ ಈ ಬಾರಿ ನಡೆದ ವಿಧಾನಸಭೆ ಚುನಾವಣೆಯೇ ಸಾಕ್ಷಿಯಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದವರನ್ನೇ ಜನರು ಬದಲಾವಣೆ ಮಾಡಿದರು ಎನ್ನುವ ಮೂಲಕ ಸಿಎಂ ಬದಲಾವಣೆ ಆಗುವುದು ದೊಡ್ಡ ವಿಚಾರವಲ್ಲ ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ.

ರಾಜ್ಯದಲ್ಲಿ ೬ ವರ್ಷಗಳ ಕಾಲ ಡಾ.ಜಿ.ಪರಮೇಶ್ವರ (Dr. G. Parameshwar)  ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ್ದರು. ಆದರೆ ಅಧಿಕಾರಕ್ಕೆ ಬಂದ ವೇಳೆ ಅವರ ಡಿಸಿಎಂ ಪದವಿಯನ್ನೇ ಕಿತ್ತುಕೊಂಡರು. ಸಮಾಜವಾದ ಎಂದರೆ ಎಲ್ಲರನ್ನು ಸಮಾನವಾಗಿ ನೋಡುವುದು. ಪರಮೇಶ್ವರ್ ಅವರು ದಲಿತ ಎನ್ನುವ ಕಾರಣಕ್ಕೆ ಅವರಿಗೆ ಡಿಸಿಎಂ ಮಾಡಲಿಲ್ಲ. ಸಮಾಜವಾದಿ ಎಂದರೆ ಮಜಾವಾದಿ ಅಲ್ಲ ಎಂದು ಬಿ.ಕೆ. ಹರಿಪ್ರಸಾದ್ ಎಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: Kannada language: ಇನ್ನು ಮುಂದೆ ಬ್ಯಾಂಕ್ ನಲ್ಲಿ ಯಾರೂ ’ಕನ್ನಡ್ ಗೊತ್ತಿಲ್ಲ’ ಎನ್ನುವ ಹಾಗಿಲ್ಲ ಎಂದ ರಾಜ್ಯ ಸರ್ಕಾರ; ’ಕನ್ನಡಿಗರಿಗೆ ಕೆಲಸ’ ಕೂಡ ಸಿಗಲಿದ್ಯಾ?

ಇನ್ನು ಈ ವಿಚಾರವಾಗಿ ಧಾರವಾಡದ ಕೃಷಿ ಮೇಳಕ್ಕೆ ಆಗಮಿಸಿದ್ದ ಸಿದ್ಧರಾಮಯ್ಯ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಅವರು ನನ್ನ ಹೆಸರನ್ನು ಎಲ್ಲಿಯೂ ತೆಗೆದುಕೊಂಡಿಲ್ಲ. ಆದ್ದರಿಂದ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ವಿಚಾರವಾಗಿ ಗೃಹಸಚಿವ ಡಾ. ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ಬಿ.ಕೆ.ಹರಿಪ್ರಸಾದ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತೋ ಅದಕ್ಕೆ ನಾನು ಬದ್ಧ ಎಂದು ತಿಳಿಸಿದ್ದಾರೆ.

Comments are closed.