Cricket News: ಲಿಟಲ್ ಮಾಸ್ಟರ್ ದಾಖಲೆಯನ್ನೇ ಮುರಿದ ಈ ಆಟಗಾರ; ಯಾರು ಈ ಸ್ಪೋಟಕ ಬ್ಯಾಟ್ಸಮನ್?

Cricket News: ವಿಶ್ವದಲ್ಲಿ ಅತ್ಯಂತ ಹೆಚ್ಚು ಜನರು ನೋಡುವ ಆಟಗಳ  ಪೈಕಿ ಕ್ರಿಕೆಟ್ (Cricket) ಕೂಡ ಒಂದು. ಹಾಗಾಗಿಯೇ ಕ್ರಿಕೆಟ್ ಆಟಗಾರರು ಅತ್ಯಂತ ಹೆಚ್ಚಿನ ಪ್ರಮಾಣದ ಅಭಿಮಾನಿಗಳನ್ನು ಹೊಂದಿರುತ್ತಾರೆ. ಸಿನೆಮಾ ನಟರಿಗಿಂತಲೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವವರು ಇದ್ದಾರೆ ಅಂದರೆ ನೀವು ನಂಬಲೇಬೇಕು. ಮೊನ್ನೆ ನಡೆದ ಸೌತ್ ಆಫ್ರಿಕಾ (South Africa)  ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ (David Warner)  ಶತಕ ಬಾರಿಸುವ ಮೂಲಕ ಭಾರತರತ್ನ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar)  ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: Electric two-wheeler problems: ಪೆಟ್ರೋಲ್ ಸ್ಕೂಟರ್ ದುಬಾರಿ ಅಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಮಾಡಿದ್ರೆ ಇದರಲ್ಲೂ ಇಂತಹ ಸಮಸ್ಯೆ ಇದೆಯಾ; ಖರೀದಿಗೂ ಮೊದಲು ನೂರು ಬಾರಿ ಯೋಚನೆ ಮಾಡಿ!

ಮಂಗಾಂಗ್ ಓವಲ್ ಮೈದಾನದಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ (Australia)  ನಡುವೆ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ 93 ಎಸೆತಗಳಲ್ಲಿ ಮೂರು ಸಿಕ್ಸರ್, 13 ಫೋರ್ಗಳನ್ನು ಭಾರಿಸುವ ಮೂಲಕ 106  ರನ್ ಗಳಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಶತಕ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತಿಹೆಚ್ಚು ಶತಕ ಭಾರಿಸಿದ ಎನ್ನುವ ಆಟಗಾರ ಎನಿಸಿಕೊಂಡರು.

ನಮ್ಮ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 45 ಶತಕಗಳನ್ನು ಸಿಡಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸಮನ್ ಡೇವಿಡ್ ವಾರ್ನರ್ ಈ ದಾಖಲೆ ಮುರಿದು ನೂತನ ದಾಖಲೆ ನಿರ್ಮಿಸಿದ್ದಾರೆ.

ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಆರಂಭಿಕ ಆಟಗಾರ. ಇವರು ಏಕದಿನ ಪಂದ್ಯದಲ್ಲಿ 2೦ ಶತಕಗಳು ಹಾಗೂ ಟೆಸ್ಟ್ ಮ್ಯಾಚ್ನಲ್ಲಿ 25 ಶತಕಗಳನ್ನು ಸಿಡಿಸಿದ್ದಾರೆ. ಇದರ ಜೊತೆ ಒಂದು ಟಿ-2೦ (T20) ಪಂದ್ಯದಲ್ಲೂ ಶತಕ ಸಿಡಿಸಿದ್ದಾರೆ. ಇದನ್ನೂ ಓದಿ: Mailaralinga Swamy Daiva: ನಿಖರವಾಗಿ ಭವಿಷ್ಯ ಹೆಳುವ ಮೈಲಾರ ಲಿಂಗ; ಇಲ್ಲಿಗೆ ಬಂದ ಭಕ್ತಾಧಿಗಳು ವರ ಪಡೆಯದೆ ಖಾಲಿ ಕೈಲಿ ಹೋಗಿದ್ಡೆ ಇಲ್ಲ!

ಇನ್ನು ಈ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಕ್ರಿಸ್ ಗೇಲ್ (Cris gayle) ಹೆಸರು ಕೂಡ ಇದೆ. ಇವರು ವೆಸ್ಟ್  ಇಂಡೀಸ್ ತಂಡದ ಆಟಗಾರನಾಗಿದ್ದಾರೆ. ಇವರು ಒಟ್ಟು 42 ಶತಕಗಳನ್ನು ಗಳಿಸಿದ್ದಾರೆ.

ಒಟ್ಟಿನಲ್ಲಿ ಡೇವಿಡ್ ವಾರ್ನರ್ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಇನ್ನು ಇವರ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಎನ್ನುವುದನ್ನು ಕ್ರಿಕೆಟ್ ಪ್ರೇಮಿಗಳು ಕಾದು ನೋಡಬೇಕಾಗಿದೆ.

Comments are closed.