Home Loan: ಹೋಮ್ ಲೋನ್ ಪಡೆಯುವರಿಗೆ ಗುಡ್ ನ್ಯೂಸ್; ಸ್ವಂತ ಮನೆ ನಿರ್ಮಾಣದ ಕನಸನ್ನು ಇನ್ನು ಎಲ್ಲರೂ ಈಡೇರಿಸಿಕೊಳ್ಳಬಹುದು!

Home Loan: ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತನ್ನದೆ ಆದ ಸ್ವಂತ ಸೂರು ಇರಬೇಕು ಎಂದು ಕನಸು ಕಾಣುತ್ತಾನೆ. ಸ್ವಂತ ಜಾಗ ಪಡೆದು ಮನೆ ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಪ್ರತಿ ವ್ಯಕ್ತಿಯ ಕನಸಾಗಿರುತ್ತದೆ. ಈ ರೀತಿ ಮನೆ ಕಟ್ಟಿಕೊಳ್ಳಲು ಹಲವಾರು ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಬ್ಯಾಂಕ್ಗಳು ಸಹ ಸಾಲವನ್ನು ನೀಡುತ್ತವೆ. ನೀವು ಇದರ ಪ್ರಯೋಜನ ಪಡೆದು ಮನೆ ನಿರ್ಮಿಸಿಕೊಳ್ಳಬಹುದು. ಇದನ್ನೂ ಓದಿ: Bengaluru land: ಬೆಂಗಳೂರಿನಲ್ಲಿ ಸೈಟ್ ತಗೊಂಡವರಿಗೂ, ತಗೊಳ್ಳುವವರಿಗೂ ಸಂಕಷ್ಟ; ನಡೆದಿದೆ ಸಾವಿರಾರು ಎಕರೆ ಅಕ್ರಮ, ನಿಮ್ಮ ಸೈಟ್ ನಿಮ್ಮದಲ್ಲ ಎನ್ನುತ್ತಿದೆಯಾ ಸರ್ಕಾರ!

ನೀವು ಮನೆ ನಿರ್ಮಾಣ ಮಾಡುವ ಸಲುವಾಗಿ ಸಾಲ ಮಾಡುತ್ತೀರಿ ಎಂದಾದರೆ ಮೊದಲು ಯಾವ ಯಾವ ಬ್ಯಾಂಕ್ಗಳಲ್ಲಿ ಸಾಲಕ್ಕೆ ಬಡ್ಡಿದರ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಿ. ಖಾಸಗಿ ಬ್ಯಾಂಕ್ಗಳಲ್ಲಿ ಮನೆ ನಿರ್ಮಾಣಕ್ಕಾಗಿ ನೀಡುವ ಸಾಲಕ್ಕೆ ಹೆಚ್ಚಿನ ಬಡ್ಡಿ ಆಕರಿಸಲಾಗುತ್ತದೆ. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಉತ್ತಮ;

ನೀವು ಹೋಮ್ ಲೋನ್ (Home loan) ಮಾಡಲು ಇಚ್ಚಿಸಿದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಖಾಸಗಿ ಬ್ಯಾಂಕ್ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ  (Low Interest loan) ಸಾಲ ಸಿಗುತ್ತದೆ. ಇದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನಿರ್ಧರಿತವಾಗಿರುತ್ತದೆ. ನಿಮ್ಮ ಸಿಬಿಲ್ ಸ್ಕೋರ್ (CIBIL Score) 750ಕ್ಕೂ ಅಧಿಕ ಇದ್ದರೆ ನಿಮಗೆ ಕಡಿಮೆ ಬಡ್ಡಿದರಲ್ಲಿ ಸಾಲ ಸೌಲಭ್ಯ ಸಿಗಲಿದೆ. ಇಲ್ಲದಿದ್ದಲ್ಲಿ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಸಾಲ ಪಡೆಯುವ ವೇಳೆ ಆದಷ್ಟು ಕಡಿಮೆ ಅವಧಿಯ ಸಾಲ ಪಡೆದುಕೊಳ್ಳಿ. ಯಾಕೆಂದರೆ ದೀರ್ಘಾವಧಿಯ ಸಾಲ ಪಡೆದುಕೊಂಡಲ್ಲಿ ಅದಕ್ಕೆ ಬಡ್ಡಿದರವು ಹೆಚ್ಚಿಗೆ ಇರುತ್ತದೆ. ಇದರಿಂದ ನೀವು ದುಡಿದ ಹಣವು ಬಡ್ಡಿ ಪಾವತಿಗೆ ಸರಿಯಾಗಿಬಿಡುತ್ತದೆ.

ತಪ್ಪು ಮಾಡ್ಬೇಡಿ:

ನೀವು ಹೋಮ್ ಲೋನ್ ಮಾಡುವ ಮೊದಲು ಯಾವ ಯಾವ ಬ್ಯಾಂಕ್ಗಳಲ್ಲಿ ಎಷ್ಟೆಷ್ಟು ಬಡ್ಡಿದರವಿದೆ ಎನ್ನುವುದನ್ನು ಪರಿಶೀಲಿಸಿ. ಯಾವ ಬ್ಯಾಂಕ್ನಲ್ಲಿ ಅತಿ ಕಡಿಮೆ ಬಡ್ಡಿದರಲ್ಲಿ ಸಾಲ ನೀಡಲಾಗುತ್ತದೆಯೋ ಆ ಬ್ಯಾಂಕ್ನಲ್ಲಿ ಸಾಲ ಪಡೆಯಿರಿ. ಅಲ್ಲದೆ ಸಾಲದ ಸಂಸ್ಕರಣಾ ಶುಲ್ಕ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಿ. ಈ ರೀತಿ ನೀವು ಸಾಲ ಮಾಡುವ ವೇಳೆ ಡಾಕ್ಯುಮೆಂಟೆಶನ್ (Documentation)  ಹಾಗೂ ಕಾನೂನು ಶುಲ್ಕ ಸೇರಿದಂತೆ ಹಲವು ರೀತಿಯ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ನೀವು ಪಡೆಯುವ ಸಾಲಕ್ಕೆ ಲೋನ್ ಕವರ್ ಟರ್ಮ ಅಶುರೆನ್ಸ್ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ. ಕವರ್ ಟರ್ಮ್ ಅಶುರೆನ್ಸ್ ಇದ್ದಲ್ಲಿ ಮಾತ್ರ ಸಾಲ ಪಡೆದುಕೊಳ್ಳಿ. ಇದನ್ನೂ ಓದಿ: Airavata Scheme: ವಿದ್ಯಾವಂತ ನಿರುದ್ಯೋಗಿಗಳಿಗೆ ಸರ್ಕಾರದ ಬಂಪರ್ ಯೋಜನೆ; 5 ಲಕ್ಷ ರೂ. ವರೆಗೆ ಸಹಾಯಧನ, ಇಂದೇ ಅಪ್ಲೈ ಮಾಡಿ!

ಇನ್ನು ನೀವು ಹೋಮ್ ಲೋನ್ ಮಾಡಿದ್ದಲ್ಲಿ ನಿಮಗೆ ಆದಾಯ ತೆರಿಗೆ ಪಾವತಿಯಲ್ಲಿ ರಿಯಾಯತಿ ಸಿಗುತ್ತದೆ. ಗೃಹಸಾಲವನ್ನು ಆಯ್ಕೆ ಮಾಡುವ ವೇಳೆ ದೀರ್ಘಾವಧಿ ಆಯ್ಕೆ ಮಾಡಿದರೆ ಮಾಸಿಕ ಕಂತುಗಳಲ್ಲಿ ಕಡಿಮೆ ಹಣ ಪಾವತಿ ಮಾಡಬಹುದು. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದಲ್ಲಿ ಮಾತ್ರ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ ಎನ್ನುವುದನ್ನು ಮಾತ್ರ ಮರೆಯದಿರಿ.

Comments are closed.