Prime minister: ಮುಂದಿನ ಪ್ರಧಾನಿ ನೀವು ಗೆಸ್ ಮಾಡಿದಂತೆ ಮೋದಿಜಿ ಅಲ್ವಂತೆ, ಬೇರೇ ಹೆಸರು ಸೂಚಿಸಿದ ಡಾ. ಯಶವಂತ ಗುರೂಜಿ; ಯಾರಂತೆ ಗೊತ್ತಾ?

Prime minister: ಚುನಾವಣೆ, ಸಿನೆಮಾ ರಂಗದ ಕುರಿತು ಹಲವು ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಾರೆ. ಅದರಲ್ಲಿ ಹಲವು ನಿಜವೂ ಆಗಿದೆ. ಈ ಬಾರಿ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Congress Government)  ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದ ತುಮಕೂರಿನ ಡಾ. ಯಶವಂತ ಗುರೂಜಿ (Dr. Yashwanth Guruji)  ಅವರು ಇದೀಗ ಲೋಕಸಭಾ ಚುನಾವಣೆ (Loksabha election)  ಕುರಿತು ಭವಿಷ್ಯ ನುಡಿದಿದ್ದಾರೆ. ಇದನ್ನು ಓದಿ: Airavata Scheme: ವಿದ್ಯಾವಂತ ನಿರುದ್ಯೋಗಿಗಳಿಗೆ ಸರ್ಕಾರದ ಬಂಪರ್ ಯೋಜನೆ; 5 ಲಕ್ಷ ರೂ. ವರೆಗೆ ಸಹಾಯಧನ, ಇಂದೇ ಅಪ್ಲೈ ಮಾಡಿ!

ಮುಂದಿನ ವರ್ಷ ಎಪ್ರಿಲ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಅದಕ್ಕಾಗಿ ರಾಜಕೀಯ ಪಕ್ಷಗಳು ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ನಮ್ಮ ದೇಶದ ಎರಡು ದೊಡ್ಡ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಈಗಾಗಲೇ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದೆ. ಕಾಂಗ್ರೆಸ್ ಸಮಾನ ಮನಸ್ಕರನ್ನು ಸೇರಿಸಿಕೊಂಡು ಇಚಿಡಿ ಅಲೈನ್ಸ್ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ. ಇತ್ತ ಎನ್ಡಿಎ ಕೂಡ ತನ್ನ ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್ ಸರ್ಕಾರದಲ್ಲಿ ಆದ ತಪ್ಪುಗಳನ್ನು ಜನರ ಮುಂದೆ ಇಡುತ್ತ ಮತ್ತೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಈ ವೇಳೆಯಲ್ಲಿಯೇ ತುಮಕೂರಿನ ಡಾ. ಯಶವಂತ ಗುರೂಜಿ ಅವರು ಲೋಕಸಭಾ ಚುನಾವಣೆ ವಿಚಾರವಾಗಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: Bengaluru land price: ಬೆಂಗಳೂರು ಸುತ್ತಮುತ್ತ 30* 40 site ಖರೀದಿ ಮಾಡಬೇಕು ಅಂತಿದ್ರೆ ಎಷ್ಟಾಗಬಹುದು ದರ ಗೊತ್ತೇ? ನೀವು ಖರೀದಿ ಮಾಡಬಹುದಾ ನೋಡಿ!

ನಿಜವಾಗುತ್ತಾ ಭವಿಷ್ಯ!

ಡಾ. ಯಶವಂತ  ಗುರೂಜಿ ಅವರು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿಯೇ ರಾಜ್ಯ ವಿಧಾನಸಭೆ ಚುನಾವಣೆ ವಿಚಾರವಾಗಿ ಭವಿಷ್ಯ ನುಡಿದಿದ್ದು, ಕಾಂಗ್ರೆಸ್ ಬಹುಮತದಿಂದ ಅಧಿಕಾರ ಹಿಡಿಯಲಿದೆ ಎಂದು ತಿಳಿಸಿದ್ದರು. ಈಗ ಅದು ನಿಜವಾಗಿದೆ. ಅಲ್ಲದೆ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದೂ ಅವರು ಕೆಲ ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದರು. ಅದೂ ಸಹ ನಿಜವಾಗಿತ್ತು. ಹಾಗಾಗಿ ಡಾ.ಯಶವಂತ ಗುರೂಜಿ ಅವರು ಹೇಳುವ ಮಾತಿನ ಮೇಲೆ ಜನರ ಆಸಕ್ತಿ ಹೆಚ್ಚಾಗಿದೆ.

ಬಾರಿ ಪ್ರಧಾನಿ ಯಾರು ಆಗಬಹುದು?

ಭಾರತದಲ್ಲಿ ಮಹಾ ಶಿವರಾತ್ರಿ ನಂತರ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ. ಈ ಬಾರಿ ಯಾವ ಪಕ್ಷವೂ ಅಧಿಕಾರಕ್ಕೆ ಬರುವುದಿಲ್ಲ. ಮಿತ್ರ ಪಕ್ಷಗಳ ಸಹಾಯದಿಂದ ಮಹಿಳೆಯೊಬ್ಬರು ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಲಿದ್ದಾರೆ. ಯಾರು ಆ ಮಹಿಳೆ ಎನ್ನುವುದನ್ನು ಸಂಕ್ರಾಂತಿ ನಂತರ ತಿಳಿಸುತ್ತೇನೆ ಎಂದು ಡಾ. ಯಶವಂತ ಗುರೂಜಿ ಹೇಳಿದ್ದಾರೆ. ಇದನ್ನೂ ಓದಿ: Optical illusion: ನಿಮ್ಮ ದೃಷ್ಟಿಗೆ ಒಂದು ಸವಾಲ್: ಬುದ್ಧಿವಂತರು ಮಾತ್ರ ಕೇವಲ ಹತ್ತು ಸೆಕೆಂಡ್ಗಳಲ್ಲಿ ಈ ಹಣ್ಣುಗಳಲ್ಲಿ ಅಡಗಿರುವ ಗಿಳಿಯನ್ನು ಗುರುತಿಸಬಲ್ಲರು! ನಿಮಗೂ ಕಾಣಿಸ್ತಾ?

ಒಟ್ಟಿನಲ್ಲಿ ಮಹಾಶಿವಾರಾತ್ರಿ ನಂತರ ರಾಷ್ಟ್ರದ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಹಿಳೆಯೊಬ್ಬರು ಪ್ರಧಾನಿ ಆಗಲಿದ್ದಾರೆ ಎಂದು ಗುರೂಜಿ ಅವರು ಭವಿಷ್ಯ ನುಡಿದಿರುವುದು ಕುತೂಹಲಕ್ಕೆ ಕಾರಣವಾಗಿದೆ.

Comments are closed.