Scholarship:  1೦ನೇ ತರಗತಿ ಪಾಸ್ ಆದ ಹೆಣ್ಣುಮಕ್ಕಳಿಗೆ ಸಿಗತ್ತೆ ವರ್ಷ ಪೂರ್ತಿ ಸ್ಕಾಲರ್ ಶಿಪ್; ಕಾಲೇಜ್ ಫೀ ಕಟ್ಟುವ ತಲೆಬಿಸಿ ಇಲ್ಲ; ಇಂದೇ ಅಪ್ಲೈ ಮಾಡಿ

Scholarship: ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಅದು ಸಾಧಕನ ಸ್ವತ್ತು. ಎಷ್ಟೋ ಜನ ಹೆಣ್ಣುಮಕ್ಕಳು, ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಇರುವವರು ಸಾಕಷ್ಟು ಪ್ರತಿಭಾವಂತರಾಗಿರುತ್ತಾರೆ. ಆದರೆ ಪಾಲಕರ ಆರ್ಥಿಕ ಅಸಹಾಯಕತೆ ಅವರು ಓದನ್ನು ಅರ್ಧಕ್ಕೆ ಬಿಡುವಂತೆ ಮಾಡಿಬಿಡುತ್ತದೆ. ಆದರೆ ಇಂತಹ ಬಡ ಪ್ರತಿಭಾನ್ವಿತ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಲವು ಸಂಸ್ಥೆಗಳು ಸ್ಕಾಲರಶಿಪ್ ನೀಡುತ್ತಿವೆ. ನೀವು ಇದನ್ನು ಬಳಸಿಕೊಂಡು ವಿದ್ಯಾಭ್ಯಾಸ ಮುಂದುವರಿಸಬಹುದು. ಇದನ್ನೂ ಓದಿ: Vastu Tips: ನಿಮ್ಮ ಫ್ರಿಜ್ ನಲ್ಲಿ  ಬೇರೆ ವಸ್ತು ಇಡುವುದು ಹಾಗಿರಲಿ, ಇಂದು ಒಂದು ರೂ. ನಾಣ್ಯ ಇಟ್ಟು ನೋಡಿ | ಎಂಥ ಮ್ಯಾಜಿಕ್ ಆಗಲಿದೆ ಗೊತ್ತಾ?  

ಗ್ರಾಮೀಣ ಭಾಗದಲ್ಲಿ ಇಂದಿನ ದಿನದಲ್ಲೂ 1೦ನೇ ತರಗತಿವರೆಗೆ ಓದಿ ವಿದ್ಯಾಭ್ಯಾಸ ನಿಲ್ಲಿಸುವ ಹಲವು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಓದಬೇಕು. ಒಳ್ಳೆಯ ಉದ್ಯೋಗ ಸೇರಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಆದರೆ ಪಾಲಕರ ನಿರ್ಲಕ್ಷ್ಯ ಹಾಗೂ ಮುಂದೆ ಓದಿ ಸಾಧನೆ ಮಾಡುವುದು ಏನಿದೆ ಎನ್ನುವ ಮನೋಭಾವದಿಂದ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ವಿಪ್ರೋ ಸಂತೂರ್ ಕಂಪನಿ ವಿದ್ಯಾರ್ಥಿ ವೇತನ ನೀಡುತ್ತಿದೆ.

2೦16-17 ರ ಶೈಕ್ಷಣಿಕ ವರ್ಷದಿಂದ ಈ ರೀತಿಯ ವಿದ್ಯಾರ್ಥಿ ವೇತನ  ನೀಡಲಾಗುತ್ತಿದೆ. ಭಾರತದ ಛತ್ತಿಸಘಡ್, ತೆಲಂಗಾಣ, ಕರ್ನಾಟಕ ಆಂದ್ರಪ್ರದೇಶ ರಾಜ್ಯದ ಸುಮಾರು 19೦೦ ವಿದ್ಯಾರ್ಥಿಗಳಿವೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಮೆರಿಟ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕಳೆದ ಬಾರಿ 6೦೦೦ ವಿದ್ಯಾರ್ಥಿನಿಯರು ಇದರ ಲಾಭ ಪಡೆದು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು.

ಇದಕ್ಕೆ ಬೇಕಾಗಿರುವ ಅರ್ಹತೆಗಳು:

ನೀವು 1೦ ನೇ ತರಗತಿ ಅಥವಾ ಮಧ್ಯಂತರವನ್ನು ಮೆರಿಟ್ನಲ್ಲಿ ಪಾಸು ಮಾಡಿರಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿರಬೇಕು. ಆರ್ಥಿಕವಾಗಿ ಹಿಂದುಳಿದಿರುವ ಹೆಣ್ಣು ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬೇಕು. 2022-23 ರನೇ ಶೈಕ್ಷಣಿಕ ವರ್ಷದಲ್ಲಿ ಇಂಟರ್ ಅಥವಾ ತತ್ಸಮಾನ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು. 2023-24ರಲ್ಲಿ ಸ್ನಾತಕೋತ್ತರ ಪದವಿ ಮೊದಲ ವರ್ಷದ ಕೋರ್ಸ್ಗೆ ದಾಖಲಿಸಬೇಕು. ಕನಿಷ್ಠ ಮೂರು ವರ್ಷಗಳ ಅವಧಿಯ ಪದವಿ ಕೋರ್ಸ್ಗೆ ದಾಖಲಾದವರು ಮಾತ್ರ ಈ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ಪ್ರತಿ ತಿಂಗಳು 2೦೦೦ ರೂ. ನೀಡಲಾಗುತ್ತದೆ. ಇದನ್ನೂ ಓದಿ: TATA Car: ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಇಷ್ಟದ ಕಾರು; ಬಡವರ ಕೈಗೆಟುಕುವ ಕಾರು| ಅಬ್ಬಾ ಇಷ್ಟು ಕಡಿಮೆ ಬೆಲೆನಾ!

 ಈ ವಿದ್ಯಾರ್ಥಿ ವೇತನವನ್ನು (Scholarship) ವಿದ್ಯಾರ್ಥಿಯ ಬ್ಯಾಂಕ್ ಖಾತೆ ಇದ್ದಲ್ಲಿ ಅದಕ್ಕೆ ಅಥವಾ ಪಾಲಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದಕ್ಕೆ ನೀವು ಆಫ್ ಲೈನ್ (Off Line) ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ನೀವು ಸಂಸ್ಥೆಯ ವೆಬ್ ಸೈಟ್ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಡೌನ್ಲೋಡ್ (Download) ಮಾಡಿಕೊಂಡು ನಂತರ ಅದನ್ನು ಭರ್ತಿ ಮಾಡಿ ಅವರು ತಿಳಿಸಿದ ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನವಾಗಿದೆ.

Comments are closed.