Post Office Scheme: ನಿಮ್ಮ ಪಾಕೆಟ್ ನಲ್ಲಿ 5೦ ರೂ. ಇದ್ಯಾ? ಹಾಗಾದ್ರೆ ಅದೇ ದುಡ್ಡಿಂದ ನೀವು ಗಳಿಸಬಹುದು 35 ಲಕ್ಷ ರೂ. ! ಇನ್ನು ಆರಂಭಿಸದಿದ್ರೆ ಕೂಡಲೇ ಆರಂಭಿಸಿ

Post Office Scheme: ಜೀವನದಲ್ಲಿ ದುಡಿಯುವ ಪ್ರತಿಯೊಬ್ಬ ವ್ಯಕ್ತಿಯು ತಾನು ದುಡಿದ ಹಣದಲ್ಲಿ ಸ್ವಲ್ಪ ಹಣವನ್ನು ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸುತ್ತಾನೆ. ಹೂಡಿಕೆ ಮಾಡಬೇಕಾದರೆ ಅದು ನಂಬಲರ್ಹ ಸಂಸ್ಥೆಯಾಗಿರಬೇಕು. ಅದಕ್ಕಾಗಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಬ್ಯಾಂಕ್ಗಳು, ಅಂಚೆ ಕಚೇರಿಗಳು ಬಹಳ ವಿಶ್ವಾಸರ್ಹವಾಗಿದೆ. ಅಲ್ಲಿ ಹೂಡಿಕೆ ಮಾಡುವುದಿರಂದ ನಾವು ನಿಶ್ಚಿಂತರಾಗಿ ಇರಬಹುದು. ಇದನ್ನೂ ಓದಿ: Election Tricks: ಚುನಾವಣೆಗೂ ಮುನ್ನವೇ ಹೊಸ ಯೋಜನೆ; ಮಹಿಳೆಯರಿಗೆ 3,000ರೂ, ಪಿಂಚಣಿ 6,000ಕ್ಕೆ ಹೆಚ್ಚಳ; ಸರ್ಕಾರದ ಹೊಸ ಆದೇಶ  

ಅಂಚೆ ಕಚೇರಿಯಲ್ಲಿ ಹೂಡಿಕೆ (Investment) ಮಾಡಲು ಅನೇಕ ಯೋಜನೆಗಳಿವೆ. ಅಲ್ಲದೆ ನೀವು ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭವನ್ನು ಗಳಿಸಬಹದು. ಸದ್ಯ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಲು ಇರುವ ಉತ್ತಮ ಯೋಜನೆಗಳಲ್ಲಿ ಗ್ರಾಮ ಸುರಕ್ಷಾ ಯೋಜನೆಯು ಪ್ರಮುಖವಾದುದಾಗಿದೆ.

ಗ್ರಾಮ ಸುರಕ್ಷಾ ಯೋಜನೆಯು (Gram Suraksha Yojana) ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಒಳ್ಳೆಯ ಯೋಜನೆಯಾಗಿದೆ. ಈ ಯೋಜನೆಯನ್ನು ಅಂಚೆ ಇಲಾಖೆಯು 1995 ರಲ್ಲಿಯೇ ಜಾರಿಗೆ ತಂದಿದೆ. ಹಾಗಾದರೆ ಈ ಯೋಜನೆಯಲ್ಲಿ ಯಾರೆಲ್ಲ ಹೂಡಿಕೆ ಮಾಡಬಹುದು, ಎಷ್ಟು ಹೂಡಿಕೆ ಮಾಡಬಹುದು ಎನ್ನುವ ಕುರಿತು ಮಾಹಿತಿ ಇಲ್ಲಿದೆ. ಇದನ್ನೂ ಓದಿ: One Nation One ID: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ್ರು ಸಿಹಿ ಸುದ್ದಿ; ಇನ್ಮುಂದೆ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಒಂದೇ ಐಡಿ ಕಾರ್ಡ್!

ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಲು ಹೂಡಿಕೆದಾರನ ವಯಸ್ಸು 19 ವರ್ಷ ಮೇಲ್ಪಟ್ಟಿರಬೇಕು. 55 ವರ್ಷದ ಒಳಗಿನವರಾಗಿರಬೇಕು. ಹೆಸರೇ ಸೂಚಿಸುವಂತೆ ಗ್ರಾಮೀಣ ಭಾಗದ ಜನರಿಗಾಗಿ ಈ ಯೋಜನೆ ಜಾರಿಗೆ ತರಲಾಗಿದೆ. ಇದರ ಕನಿಷ್ಠ ವಿಮಾ ಮೊತ್ತ ಹತ್ತು ಸಾವಿರ ರೂ.ಗಳಾಗಿದ್ದು, ಗರಿಷ್ಟ ಹತ್ತು ಲಕ್ಷ ರೂಪಾಯಿಗಳಾಗಿವೆ. ನಾಲ್ಕು ವರ್ಷಗಳ ಕವರೇಜ್ ನಂತರ ಸಾಲ ಸೌಲಭ್ಯ ಪಡೆಯಬಹುದಾಗಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಕಂತುಗಳನ್ನು ನೀವು ಪಾವತಿಸಬಹುದು.

ಗ್ರಾಮ ಸುರಕ್ಷಾ ಯೋಜನೆಯಡಿ ಪ್ರತಿ ದಿನ 5೦ ರೂ. ಪಾವತಿಸುವುದರಿಂದ ನೀವು 35 ಲಕ್ಷ ರೂ.ಗಳನ್ನು ಪಡೆದುಕೊಳ್ಳಬಹುದು. ನೀವು 19  ನೇ ವಯಸ್ಸಿಗೆ 1೦ ಲಕ್ಷ ರೂ.ಗಳ ವಿಮೆ ಖರೀದಿಸಿದರೆ ನೀವು ದಿನಕ್ಕೆ 5೦ ರೂ. ಪಾವತಿಸಬೇಕು. ತಿಂಗಳಿಗೆ 1515 ರೂ. ಪಾವತಿಸಬೇಕಾಗುತ್ತದೆ. ಮೆಚ್ಯೂರಿಟಿಯ ನಂತರ ನಿಮಗೆ 34.6೦ ಲಕ್ಷ ರೂ. ನಿಮ್ಮ ಕೈಸೇರಲಿದೆ. ನೀವು ಈ ಗ್ರಾಮ ಸುರಕ್ಷಾ ಯೋಜನೆ ಪ್ರಾರಂಭಿಸಿ ಐದು ವರ್ಷದೊಳಗೆ ಅದನ್ನು ಬಿಟ್ಟರೆ ನಿಮಗೆ ಬೋನಸ್ ಸಿಗುವುದಿಲ್ಲ. ಪ್ರತಿ ಸಾವಿರ ರೂ.ಗೆ 6೦ ರೂ. ಬೋನಸ್ ಆಗಿ ನೀಡಲಾಗುತ್ತದೆ.

Comments are closed.