Education Loan: ನೀವು ವೃತ್ತಿಪರ ಕೋರ್ಸ್ ಮಾಡಬೇಕಾ? ನಿಮ್ಮ ಬಳಿ ಹಣ ಇಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ; ಸರ್ಕಾರವೇ ನೀಡುತ್ತೆ ಶೇ.1೦೦ ಸಬ್ಸಿಡಿ ಇಂದೇ ಅಪ್ಲೈ ಮಾಡಿ

Education Loan by CSIS: ಇಂದಿನ ದಿನದಲ್ಲಿ ಶಿಕ್ಷಣ ಇಲ್ಲ ಎಂದಾದರೆ ಯಾರೂ ಬೆಲೆ ನೀಡುವುದಿಲ್ಲ. ಮನುಷ್ಯನ ವ್ಯಕ್ತಿತ್ವಕ್ಕೆ ಒಂದು ಬೆಲೆ ಬರುವುದೇ ಆತ ಪಡೆದುಕೊಳ್ಳುವ ಶಿಕ್ಷಣದಿಂದ. ಆತನ ಸಂಸ್ಕಾರದಿಂದ. ಹಾಗಾಗಿ ಮನುಷ್ಯನ ಜೀವನದಲ್ಲಿ ಶಿಕ್ಷಣವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವೊಬ್ಬರಿಗೆ ಆರ್ಥಿಕ ಸಮಸ್ಯೆ ಅವರ ಓದಿಗೆ ಪೂರ್ಣ ವಿರಾಮ ನೀಡುವಂತೆ ಮಾಡಿಬಿಡುತ್ತದೆ. ಆದರೆ ಇನ್ಮುಂದೆ ಓದಲು ಹಣಕಾಸಿನ ತೊಂದರೆಯಾಯಿತು ಎನ್ನುವಂತಿಲ್ಲ. ಉನ್ನತ ಶಿಕ್ಷಣದ ಓದಿಗಾಗಿಯೇ ಸರ್ಕಾರ ಶೇ.1೦೦ ರ ಸಬ್ಸಿಡಿಯಲ್ಲಿ ಸಾಲ Education Loan ನೀಡಲು ಮುಂದಾಗಿದೆ. ಈ ಮೂಲಕ ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ.

Education Loan by Central Sector Interest Subsidy Scheme (CSIS) how to get it, here are the details.

ಕೇಂದ್ರ ವಲಯದ ಬಡ್ಡಿ ಸ್ಕೀಮ್ Central Sector Interest Subsidy Scheme (CSIS):

ಆರ್ಥಿಕವಾಗಿ ತೊಂದರೆಯಲ್ಲಿರುವವರೂ ಕೂಡ ಸಾಲ ಮಾಡಿಯಾದರೂ ಉನ್ನತ ಶಿಕ್ಷಣ ಪಡೆದುಕೊಳ್ಳಲೇಬೇಕು ಎಂದುಕೊಂಡಿರುವವರಿಗೆ ಕೇಂದ್ರ ವಲಯ ಬಡ್ಡಿ ಸಬ್ಸಿಡಿ ಸ್ಕೀಂ Education Loan ಒಂದು ಉತ್ತಮ ಯೋಜನೆ ಆಗಿದೆ. ಈ ಯೋಜನೆ ಅಡಿಯಲ್ಲಿ ನೀವು ಬ್ಯಾಂಕಿನಿಂದ ಪಡೆಯುವ ಸಾಲಕ್ಕೆ ಸರ್ಕಾರವು ಶೇ.1೦೦ ರಷ್ಟು ಸಬ್ಸಿಡಿ ನೀಡುತ್ತದೆ.

ಇದನ್ನೂ ಓದಿ: ನಿಮಗೆ ತಕ್ಷಣಕ್ಕೆ Personal Loan ಬೇಕಾದರೆ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ; ಆರ್ ಬಿ ಐ ಅನುಮೋದಿತ ಅಪ್ಲಿಕೇಶನ್ ಕಣ್ರೀ ಇದು!

ಯಾರಿಗೆ ಸಿಗುತ್ತೆ ಸಾಲ: Who can apply for CSIS Education Loan?

ಕುಟುಂಬದ ಆದಾಯವು (Income) 4.5 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬದ ವಿದ್ಯಾರ್ಥಿಗಳಿಗೆ ಈ ಸಾಲ ಸಿಗುತ್ತದೆ. ಈ ಯೋಜನೆಯನ್ನು ತಂದಿರುವುದೇ ಬಡವರೂ ಸಹ ಉನ್ನತ ಶಿಕ್ಷಣ (Higher education) ಪಡೆದು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕು ಎನ್ನುವ ಉದ್ದೇಶದಿಂದ. ಇದರ ಜೊತೆ ನ್ಯಾಕ್,ಎನ್ಬಿಎ, ಸಿಎಎಫ್ಟಿಐ, ಹಾಗೂ ಇತರ ನಿಯಂತ್ರಿತ ಸಂಸ್ಥೆಗಳ ಅನುಮತಿ ಪಡೆದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಹ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರ ವಲಯ ಬಡ್ಡಿ ಸಬ್ಸಿಡಿ ಸ್ಕೀಂ ಅಡಿಯಲ್ಲಿ ಸಾಲ Education Loan ಪಡೆದ ವಿದ್ಯಾರ್ಥಿಗಳು (Students) ಕೂಡಲೇ ಇಎಂಐ ಪಾವತಿ ಮಾಡಬೇಕು ಎನ್ನುವ ಹಾಗಿಲ್ಲ. ನೀವು ಯಾವ ಪದವಿ ಪಡೆಯಬೇಕು ಎನ್ನುವ ಉದ್ದೇಶದಿಂದ ಸಾಲ ಪಡೆದುಕೊಂಡಿದ್ದಿರೋ ಅದನ್ನು ಮುಗಿದ ನಂತರ ನೀವು ಸಾಲ ಮರುಪಾವತಿ ಆರಂಬಿಸಬಹುದಾಗಿದೆ.

ಕೇಂದ್ರ ವಲಯ ಬಡ್ಡಿ ಸಬ್ಸಿಡಿ ಸ್ಕೀಂಗೆ ಅರ್ಜಿ ಸಲ್ಲಿಸುವುದು ಹೇಗೆ?: How to apply for CSIS Education Loan?

*ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವವರು ಜ್ಞಾನಸಮರ್ಥ https://www.jansamarth.in/ ಎನ್ನುವ ವೆಬ್ಸೈಟ್ಗೆ ಭೇಟಿ ನೀಡಬೇಕು.

*ಆ ವೆಬ್ಸೈಟ್ನ ಮೊದಲ ಪುಟದಲ್ಲಿಯೇ ಸಾಲಕ್ಕೆ ಸಂಬಂಧಿಸಿದ ಆಯ್ಕೆಗಳು ನಿಮಗೆ ಕಾಣಿಸುತ್ತದೆ. ಅಲ್ಲಿ ನೀವು ಸಾಲ Education Loan ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳೇನು ಎನ್ನುವುದನ್ನು ತಿಳಿದುಕೊಳ್ಳಬಹುದು.

*ಈಗಾಗಲೇ ಕಾಲೇಜಿಗೆ ಪಾವತಿಸಲಾದ ಶುಲ್ಕವೂ ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದೇ? ಸೇರಿದಂತೆ ಎಲ್ಲ ಮಾಹಿತಿ ಪಡೆದುಕೊಳ್ಳಬಹುದು. ನಂತರ ಅಲ್ಲಿ ಕೇಳಲಾಗುವ ಎಲ್ಲ ಮಾಹಿತಿಗಳನ್ನು ಒದಗಿಸಬೇಕು

*ಜೊತೆಗೆ ನೀವು ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳ ನಕಲು ಪ್ರತಿಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಇವೆಲ್ಲವೂ ಮುಗಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಅಲ್ಲಿ ಕಾಣಿಸಿಕೊಳ್ಳುವ ಕ್ಯಾಪ್ಚಾ ಎಂಟ್ರಿ ಮಾಡಬೇಕು.

*ಈ ನಿಮ್ಮ ಮುಂದೆ ಸಾಲದ ಶರತ್ತುಗಳು ಹಾಗೂ ನಿಬಂಧನೆಗಳಿಗೆ ಸಂಬಂಧಿಸಿದ ಪೇಜ್ ಓಪನ್ ಆಗುತ್ತದೆ. ಇಲ್ಲಿ ನೀಡಿರುವ ಮಾಹಿತಿಯನ್ನು ಬಹಳ ಎಚ್ಚರದಿಂದ ಓದಿ ಅರ್ಥೈಸಿಕೊಳ್ಳಬೇಕು.

*ಎಲ್ಲ ಶರತ್ತುಗಳನ್ನು ಓದಾದ ಬಳಿಕ ಎಡಭಾಗದಲ್ಲಿ ಕಾಣಿಸಿಕೊಳ್ಳುವ ಬಾಕ್ಸ್ ಒಳಗೆ ಕ್ಲಿಕ್ ಮಾಡಬೇಕು. ಇದಾದ ಬಳಿಕ ಓಟಿಪಿ (OTP) ಆಯ್ಕೆ ಒತ್ತಬೇಕು. ಈಗ ನೀವು ನೀಡಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ಇದನ್ನು ವೆಬ್ ಪೇಜಿನಲ್ಲಿ ದಾಖಲಿಸಿ ನಿಮ್ಮ ಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಬಹುದು.

Comments are closed.