Travel Loan: ನೀವು ಹೊರ ದೇಶಗಳಿಗೆ ಪ್ರವಾಸ ಹೊಗ್ಬೇಕಾ? ಬಜೆಟ್ ಇಲ್ದೇ ಸುಮ್ಮನಾದ್ರಾ? ಟೆನ್ಶನ್ ಬೇಡ, ನಿಮ್ಮ ಪ್ರವಾಸಕ್ಕೂ ಸಿಗುತ್ತೆ ಕಡಿಮೆ ಬಡ್ಡಿಯ ಸಾಲ, ಅದೂ ಕ್ಷಣ ಮಾತ್ರದಲ್ಲಿ!

Get Travel Loan by Bank easily:  ದಿನಗಳಲ್ಲಿ ಪ್ರವಾಸಕ್ಕೆ ಹೋಗಿಬರುವುದು ಒಂದು ರೀತಿಯ ಫ್ಯಾಶನ್ ಆಗಿದೆ. ಒತ್ತಡದ ಜೀವನದಲ್ಲಿ ವರ್ಷಕ್ಕೆ ಒಮ್ಮೆಯಾದರೂ ಪ್ರವಾಸಕ್ಕೆ ಹೋಗುವುದು ಅನಿವಾರ್ಯವೂ ಆಗಿದೆ. ಪ್ರವಾಸಕ್ಕೆ ಹೋಗುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಅಲ್ಲದೆ ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಇನ್ಫ್ಲೂಯೆನ್ಸರ್ (influencer) ಗಳಿಂದಾಗಿ ಹೆಚ್ಚಿನ ಜನರು ಪ್ರವಾಸಕ್ಕೆ ತೆರಳಲು ಅಲ್ಲಿನ ಸೊಬಗನ್ನು ಸವಿಯಲು ಬಯಸುತ್ತಿದ್ದಾರೆ.

ಪ್ರವಾಸದ ವೇಳೆ ಮುಖ್ಯವಾಗುವುದು ಅಲ್ಲಿನ ಖರ್ಚು-ವೆಚ್ಚಗಳನ್ನು ಹೇಗೆ ನಿಭಾಯಿಸುವುದು ಎಂಬುದು! ಪ್ರವಾಸಕ್ಕೆ ಹೋಗುವಾಗ ಸ್ವಲ್ಪವಾದರೂ ನಮ್ಮ ಪ್ಲಾನ್ ಗಿಂತ ಹೆಚ್ಚುವರಿ ಹಣ ಹೊಂದಿರುವುದು ಅಗತ್ಯ. ಅನೇಕರು ಈ ಆರ್ಥಿಕ ಸಮಸ್ಯೆಯಿಂದಾಗಿ ಪ್ರವಾಸಕ್ಕೆ ಹೋಗುವುದನ್ನು ಕೈಬಿಡುತ್ತಾರೆ. ಆದರೆ ಇನ್ಮುಂದೆ ಆ ರೀತಿ ಮಾಡಬೇಕಾಗಿಲ್ಲ. ನಿಮಗೆ ಪ್ರವಾಸಕ್ಕೆ ತೆರಳಲು ಬೇಕಾಗಿರುವ ಹಣವನ್ನು ಬ್ಯಾಂಕ್ಗಳು ಸಾಲದ Travel Loan ರೂಪದಲ್ಲಿ ನಿಮಗೆ ನೀಡುತ್ತವೆ. ಹಾಗಾಗಿ ನೀವು ನಿಶ್ಚಿಂತೆಯಿಂದ ಪ್ರವಾಸ ಮಾಡಬಹುದಾಗಿದೆ.

Get Travel Loan by Bank easily here are the details

ಪ್ರಪಂಚದಲ್ಲಿರುವ ಅನೇಕ ಸುಂದರ ಸ್ಥಳಗಳ ಕುರಿತು ಸಾಮಾಜಿಕ ಪ್ರಭಾವಿಗಳು ಪ್ರಚಾರ ಮಾಡುತ್ತ ಬಂದಿದ್ದಾರೆ. ಇತ್ತಿಚೆಗೆ ಟರ್ಕಿ, ವಿಯಟ್ನಾಂ, ಕಾಂಬೋಡಿಯಾ ದೇಶಗಳ ಪ್ರವಾಸೋದ್ಯಮ ಸಾಕಷ್ಟು ಸುದ್ದಿಯಲ್ಲಿದೆ. ಈ ದೇಶಗಳಿಗೆ ಹೋಗಬೇಕು, ಅಲ್ಲಿನ ಸೌಂದರ್ಯ ಸವಿಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ವೆಚ್ಚಗಳು ಹೆಚ್ಚಾಗಿರುವುದರಿಂದ ಹೆಚ್ಚಿನ ಜನರು ಟಿವಿಯಲ್ಲಿಯೇ ನೋಡಿ ಖುಷಿ ಪಡುತ್ತಾರೆ.

ಇದನ್ನೂ ಓದಿ: ಸ್ವಂತ ಉದ್ಯೋಕ್ಕೆ ಸರ್ಕಾರದಿಂದ  ಸಿಗುತ್ತೆ 50 ಸಾವಿರ ರೂ. Loan ಇಂದೇ ಅಪ್ಲೈ ಮಾಡಿ; ಮಹಿಳೆಯರಿಗೂ ಅವಕಾಶ

ಇದನ್ನು ಅರಿತ ವಿವಿಧ ಬ್ಯಾಂಕುಗಳು ಪ್ರವಾಸ ತೆರಳಲು ಸಾಲವನ್ನು ನೀಡಲು ಮುಂದಾಗಿವೆ. ಇದನ್ನು ಪ್ರವಾಸ ಸಾಲ ಎಂದು ಕರೆಯುತ್ತಾರೆ. ಈ ಪ್ರವಾಸ ಸಾಲವು Travel Loan ವೈಯಕ್ತಿಕ ಸಾಲದ ಒಂದು ಭಾಗವಾಗಿದೆ. ಹಾಗಾಗಿ ಇದು ಅಸುರಕ್ಷಿತ ಸಾಲದ ವ್ಯಾಪ್ತಿಯಲ್ಲಿ ಬರುತ್ತದೆ. ಇದರಿಂದ ನೀವು ಈ ಸಾಲ ಪಡೆಯಲು ಯಾವುದೇ ರೀತಿಯ ಭದ್ರತೆ ಒದಗಿಸುವ ಅಗತ್ಯವಿಲ್ಲ.

ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಕ್ಕಾಗಿ ಸಾಲ Loans for domestic and international travel:

ನಮ್ಮ ದೇಶದಲ್ಲಿರುವ ಅನೇಕ ಬ್ಯಾಂಕುಗಳು ಈ ರೀತಿ ಪ್ರವಾಸಕ್ಕೆ ತೆರಳಲು ಸಾಲವನ್ನು ನೀಡುತ್ತವೆ. ನೀವು ದೇಶದೊಳಗೆ ಪ್ರವಾಸ ಹೋಗಬಹುದು ಇಲ್ಲವೇ ಅಂತಾರಾಷ್ಟ್ರೀಯ ಪ್ರವಾಸಕ್ಕೆ ತೆರಳಬಹುದು. ರಜೆಯ ದಿನಗಳನ್ನು ಸುಮಧುರವಾಗಿ ಕಳೆಯುವ ಸಲುವಾಗಿ ಈ ರೀತಿಯ ಸಾಲವನ್ನು ನೀಡಲಾಗುತ್ತದೆ. ಇದು ಅಸುರಕ್ಷಿತ ಸಾಲವಾಗಿದೆ. ಹೀಗಾಗಿ ಈ ಸಾಲ Travel Loan ಮಾಡಬೇಕಾದರೆ ನೀವು ಬ್ಯಾಂಕ್ಗೆ ಯಾವುದೇ ರೀತಿಯ ಭದ್ರತೆ ಒದಗಿಸಬೇಕಾಗಿಲ್ಲ.

ಸಾಲ ಪಡೆಯುವ ಪ್ರಕ್ರಿಯೆ ಹೇಗೆ? How to get travel loan?:

ನೀವು ಪ್ರವಾಸ ಸಾಲಕ್ಕಾಗಿ ಆನ್ಲೈನ್ ಇಲ್ಲವೇ ಖುದ್ದಾಗಿ ಬ್ಯಾಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದಾದಲ್ಲಿ ಮೊದಲು ನೀವು ಯಾವ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದೀರೋ ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.  ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿದರೆ ಸಾಲ Travel Loan ಮಂಜೂರಾಗುತ್ತದೆ.

ಪ್ರವಾಸ ಸಾಲ ತೆಗೆದುಕೊಳ್ಳಲು ಬೇಕಾಗುವ ದಾಖಲೆಗಳು (Documents required for availing travel loan):

  •  ಪ್ರವಾಸ ಸಾಲಕ್ಕಾಗಿ ಗುರುತಿನ ಪುರಾವೆ
  •  ವಿಳಾಸ ಪುರಾವೆ
  •  ಪ್ರಯಾಣ ವಿಮೆ – Travel Insurance
  • ಬುಕ್ ಮಾಡಲಾದ ಟಿಕೆಟ್ಗಳು
  • ಪ್ರವಾಸದ ವಿವರಗಳನ್ನು ನೀಡಬೇಕಾಗುತ್ತದೆ. ಈ ರೀತಿ ನೀಡುವ ಸಾಲಕ್ಕೆ ಒಂದೊಂದು ಬ್ಯಾಂಕ್ಗಳು ಒಂದೊಂದು ರೀತಿಯ ಬಡ್ಡಿಯನ್ನು ಆಕರಿಸುತ್ತವೆ.

ಬಡ್ಡಿದರ ಎಷ್ಟಿದೆ?:

ಈ ರೀತಿಯ ಪ್ರವಾಸ ಸಾಲಕ್ಕಾಗಿ HDFC ಬ್ಯಾಂಕ್ ವಾರ್ಷಿಕ ಶೇ.1೦.5೦ರಷ್ಟು ಬಡ್ಡಿದರ ವಿಧಿಸುತ್ತದೆ. ಈ ಬ್ಯಾಂಕ್ ಪ್ರವಾಸದ ಸಲುವಾಗಿ 4೦ ಲಕ್ಷ ರೂ.ಗಳ ವರೆಗೆ ಸಾಲವನ್ನು ನೀಡುತ್ತವೆ. ಈ ಸಾಲ ಮರುಪಾವತಿ ಮಾಡಲು 6೦ ತಿಂಗಳ ಅವಧಿಯನ್ನೂ ನೀಡುತ್ತದೆ.

ಟಾಟಾ ಕ್ಯಾಪಿಟಲ್ ಸಂಸ್ಥೆಯು ಪ್ರವಾಸ ಸಾಲಕ್ಕೆ ವಾರ್ಷಿಕವಾಗಿ ಶೇ.10.99ರಷ್ಟು ಬಡ್ಡಿದರ ವಿಧಿಸುತ್ತದೆ. 25 ಲಕ್ಷ ರೂ.ಗಳ ವರೆಗೆ ಸಾಲ ನೀಡುತ್ತದೆ. ಸಾಲ ಮರುಪಾವತಿಗೆ 6 ವರ್ಷಗಳ ಗಡುವನ್ನು ನೀಡುತ್ತದೆ.

ಎಕ್ಸಿಸ್ ಬ್ಯಾಂಕ್ 15 ಲಕ್ಷ ರೂ.ಗಳ ವರೆಗೆ ಸಾಲ ನೀಡುತ್ತದೆ. ಈ ರೀತಿ ನೀಡಿದ ಸಾಲಕ್ಕೆ ಶೇ. 1೦.25 ರಷ್ಟು ಬಡ್ಡಿ ವಿಧಿಸುತ್ತದೆ. ಹಾಗೂ ಸಾಲ ಮರುಪಾವತಿಗೆ 5 ವರ್ಷಗಳ ಅವಧಿ ನೀಡುತ್ತದೆ.

ಇನ್ಯಾಕೆ ತಡ, ನಿಮ್ಮ ಕನಸಿನ ಸ್ಥಳಕ್ಕೆ ಪ್ರವಾಸ ಮಾಡಲು ಇಂದೇ ಬ್ಯಾಂಕ್ ಜೊತೆಗೆ ಮಾತನಾಡಿ ಹಣಕಾಸು ಸಹಾಯ ಪಡೆದು ಪ್ರವಾಸ ಕೈಗೊಳ್ಳಿ!

Comments are closed.