Personal Loan: ವೈದ್ಯಕೀಯ ಎಮರ್ಜೆನ್ಸಿ ಇರುವಾಗ ಹಣ ಬೇಕಾ? ಟೆನ್ಶನ್ ಬೇಡ ಹೀಗೆ ಮಾಡಿ, ಸುಲಭ ಸಾಲ ಪಡೆದುಕೊಳ್ಳಿ!

Personal Loan for Medical Treatment: ಯಾವುದೇ ಒಂದು ವೈದ್ಯಕೀಯ ಶುಶ್ರೂಷತೆ (Medical treatment) ಅವಶ್ಯಕತೆ ಅನಿರೀಕ್ಷಿತವಾಗಿ ಬರುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಹಣವನ್ನು ಹೊಂದಿಸಿಕೊಳ್ಳುವುದು ತುಂಬಾ ಕಷ್ಟದಾಯಕ. ಇಂತಹ ಸಂದರ್ಭದಲ್ಲಿ ಆರ್ಥಿಕ ಸಹಾಯಕ್ಕಾಗಿ ಯಾವುದಾದರೂ ಒಂದು ಯೋಜನೆ ಇರಬೇಕಾದದ್ದು ಅತ್ಯವಶ್ಯ.

Personal Loan for Medical Treatment in India.

ಸಮಸ್ಯೆಯ ಪರಿಹಾರಕ್ಕಾಗಿ ಯೋಜನೆಗಳ ಪರಿಚಯ

ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಖರ್ಚು ಮಾಡಬೇಕಾಗಿರುವ ಮೊತ್ತವು ತುಂಬಾ ಜಾಸ್ತಿಯಾಗಿದೆ. ಚಿಕಿತ್ಸಾ ವಿಧಾನಗಳು ಕೈಗೆಟುಕದಷ್ಟು ಹೆಚ್ಚಾಗಿವೆ. ಇಂತಹ ಅವಶ್ಯಕತೆಗಳಲ್ಲಿ ನಿಯಮಿತ ಹೆಲ್ತ್ ಚೆಕಪ್ಗಳಿಂದ ಆರಂಭಿಸಿ ಸರ್ಜರಿಗಳು ಅಂದರೆ ಶಸ್ತ್ರ ಚಿಕಿತ್ಸೆ ವರೆಗೆ ಬೇಕಾಗುವ ಆರ್ಥಿಕ ಅವಶ್ಯಕತೆ ಗಣನೀಯವಾಗಿ ಬೆಳೆದಿದೆ ಹಾಗಾಗಿ ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಏನಿಲ್ಲ ಸಾಧ್ಯತೆಗಳು ಇದೆ ನೋಡಬೇಕು.

ಇದನ್ನೂ ಓದಿ:  ಈ ಬ್ಯಾಂಕ್ ಕೊಡುತ್ತೆ ಒಂದು ಲಕ್ಷ ರೂಪಾಯಿಗಳವರೆಗೆ ಅಡಮಾನ ಇಲ್ಲದೆ ಸಾಲ; ಅಪ್ಲೈ ಮಾಡೋದಕ್ಕೆ ಇದೊಂದೇ ದಾಖಲೆ ಸಾಕು!

ಭಾರತದಲ್ಲಿ ಈಗ ಮೆಡಿಕಲ್ ಎಕ್ಸ್ಪೆನ್ಸಸ್ ಅಥವಾ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ಖರ್ಚುಗಳು (Medical expenses in India)

ಭಾರತದ ವೈದ್ಯಕೀಯ ಚಿಕಿತ್ಸೆ ಬಗ್ಗೆ ಅಂಕಿ ಅಂಶಗಳು ಏನು ಹೇಳುತ್ತವೆ ಅಂದರೆ ನಮ್ಮ ದೇಶದಲ್ಲಿನ ಬಹುಪಾಲು ಜನಾಂಗ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಶಕ್ತವಾಗಿಲ್ಲ. ಈ ಕಾರಣದಿಂದ ಯಾವ ಕಾಲದಲ್ಲಿ ಏನು ವೈದ್ಯಕೀಯ ಅವಶ್ಯಕತೆಗಳು ಇವೆಯೋ ಅವುಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗಾಗಿ ವೈದ್ಯಕೀಯ ಕಾರಣಗಳಿಗಾಗಿ ಖರ್ಚಾಗುವ ಮೊಬಲಗು ಒಂದು ಹೊರೆಯಾಗಿ ಪರಿಗಣಿಸಲ್ಪಟ್ಟಿದೆ.

ವೈದ್ಯಕೀಯ  ಕಾರಣಗಳಿಗಾಗಿ ಸಿಗಬಹುದಾದ ಸಾಲ ಸೌಲಭ್ಯಗಳು (Personal Loan for Medical Treatment)

ವೈದ್ಯಕೀಯ ಕಾರಣಗಳಿಗಾಗಿ ಸಿಗಬಹುದಾದ ಸಾಲ ಸೌಲಭ್ಯಗಳು ವಿಶೇಷವಾಗಿ ಹಣಕಾಸಿನ ಸವಾಲನ್ನು ಸ್ವೀಕರಿಸುವ ಸಲುವಾಗಿ ವಿನ್ಯಾಸಗೊಳಿಸಿದ ಸಾಲ ಸೌಲಭ್ಯಗಳಾಗಿವೆ. ಇಂತಹ ಕ್ಲಿಷ್ಟ ಸಂದರ್ಭಗಳನ್ನು ಎದುರಿಸಲು ಬೇರೆ ಬೇರೆ ರೂಪಗಳಲ್ಲಿ ಈ ಸಾಲಗಳು ಸಿಗುತ್ತವೆ ಹೇಗೆಂದರೆ ವೈದ್ಯಕೀಯ ಉದ್ದೇಶಗಳಿಗಾಗಿಯೇ ಇರುವ ಸಾಲುಗಳು ಮತ್ತು ವೈಯಕ್ತಿಕ ಸಾಲಗಳು.

ವೈದ್ಯಕೀಯ ಸಾಲಗಳಲ್ಲಿ ಇರುವಂತಹ ಪ್ರಯೋಜನಗಳು Personal Loan usage

ಬಹುವಿಧವಾದ ಸಾಲಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನಿಮಗಿದೆ ಈ ಅವಕಾಶಗಳನ್ನು ಬಳಸಿಕೊಳ್ಳುವುದರಿಂದ ತಕ್ಷಣ ಆರ್ಥಿಕ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ಕ್ಲಪ್ತ ಸಮಯದಲ್ಲಿ ನೀಡಲು ಸಾಧ್ಯವಾಗುತ್ತದೆ. ಸುಲಭ ಕಂತುಗಳಲ್ಲಿ ಮರುಪಾವತಿಸಲು ಸಾಧ್ಯವಾಗುವ ಸಾಲದಿಂದಾಗಿ ಒಮ್ಮೆ ಎದುರಾದ ವೈದ್ಯಕೀಯ ಅವಶ್ಯಕತೆಯಿಂದ ಹೊರಗೆ ಬರಲು ಸಹಾಯವಾಗುತ್ತದೆ.

ವೈದ್ಯಕೀಯ ಸಾಲ ಸೌಲಭ್ಯದ ಅರ್ಹತೆಯ ಮಾನದಂಡ

ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಾಲುಗಳು ಜೀವ ಸಲಹೆಯನ್ನು ನೀಡುತ್ತವೆ. ಹೌದು. ಆದರೆ ಇಲ್ಲಿ ಕೆಲವು ಮಾನದಂಡಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ. ಈ ಸಲ ಸೌಲಭ್ಯವನ್ನು ಪಡೆಯುವವನ ಆರ್ಥಿಕ ಶಕ್ತಿ ಅವನ ಕ್ರೆಡಿಟ್ ಸ್ಕೋರ್ ಗಳು ಇತ್ಯಾದಿಯಾಗಿ ಸಾಲ Personal Loan ಮಂಜೂರಾತಿಯ ಪ್ರಕ್ರಿಯೆಯಲ್ಲಿ ಗಮನಿಸಲ್ಪಡುತ್ತವೆ

ಮೆಡಿಕಲ್ ಲೋನ್ಗಾಗಿ ಅರ್ಜಿ ಸಲ್ಲಿಸುವ ವಿಧಾನ Personal Loan for Medical Treatment how to apply

ಈ ವಿಧಾನವು ಒಂದು ನೇರ ಪ್ರಕ್ರಿಯೆ ಆಗಿರುತ್ತದೆ. ಕೆಲವೆಲ್ಲ ಅತ್ಯಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ ಅದೆಲ್ಲ ಯಾವುದೆಂದರೆ ಒಂದು ಆದಾಯ ಪ್ರಮಾಣ ಪತ್ರ ಮತ್ತು ವೈದ್ಯಕೀಯ ಚಿಕಿತ್ಸೆಗೆ ತಗಲುವ ಅಂದಾಜು ಖರ್ಚಿನ ಬಗ್ಗೆ ಮಾಹಿತಿ ಮತ್ತು ಗುರುತು ಚೀಟಿ. ಸಾಲದ ಅರ್ಜಿ ವಿಧಾನ ಎಲ್ಲಾ ಆನ್ಲೈನ್ ಆಗಿರುವುದರಿಂದ ಇದರ ನಿರ್ವಹಣೆ ಮತ್ತು ಮಂಜೂರಾತಿ ತಕ್ಷಣ ಆಗುತ್ತದೆ.

ಸಾಲದ ಬಡ್ಡಿ ದರಗಳು ಮತ್ತು ಮರುಪಾವತಿಯ ವಿವರಗಳು Personal Loan for Medical Treatment Interest rate

ಸಾಲವನ್ನು ಪಡೆದುಕೊಳ್ಳುವ ಮೊದಲು ತಿಳಿದುಕೊಳ್ಳುವ ಮುಖ್ಯವಾದ ವಿಷಯವೇನೆಂದರೆ ಸಾಲದ ಬಡ್ಡಿದರ ಮತ್ತು ಮರುಪಾವತಿಯ ವಿಧಾನ. ಸಾಲದ ಬಡ್ಡಿ ದರಗಳು ಅವಶ್ಯಕತೆಗಳಿಗೆ ಮತ್ತು ಮೊಬೈಲಾಗಿಗೆ ಹೊಂದಿಕೊಂಡು ವಿಭಿನ್ನವಾಗಿರುತ್ತದೆ. ಸಾಲ ಪಡೆಯುವಾಗ ತನ್ನ ಅರ್ಹತೆಯನ್ನು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ.

ಭಾರತದಲ್ಲಿವೈದ್ಯಕೀಯ ಸಾಲವನ್ನು ನೀಡುವ ಜನಪ್ರಿಯ ಸಂಸ್ಥೆಗಳು Personal Loan for Medical Treatment – Companies

ವೈದ್ಯಕೀಯ ಅವಶ್ಯಕತೆಗಳಿಗೆ ಅನುಸಾರವಾಗಿ ಸಹಾಯ ಮಾಡಲು ಭಾರತದಲ್ಲಿ ಅನೇಕ ಸಂಸ್ಥೆಗಳು ತಲೆ ಎತ್ತಿವೆ. ಆದರೆ ನಾವು ನಮ್ಮ ಅವಶ್ಯಕತೆಗಳನ್ನು ಪೂರೈಸುವ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸಂಸ್ಥೆಗಳ ಗುಣಮಟ್ಟ ಮತ್ತು ಅವುಗಳ ವಿಶ್ವಾಸಾರ್ಹತೆ ಪರಿಗಣಿಸಬೇಕಾಗುತ್ತದೆ.

ವೈದ್ಯಕೀಯ ಸಾಲ ಪಡೆದುಕೊಳ್ಳುವ ಮೊದಲು ಕೆಲವೆಲ್ಲ ವಿಚಾರಗಳನ್ನು ಯೋಚಿಸಬೇಕಾಗುತ್ತದೆ

ಸಾಲ ಪಡೆದುಕೊಳ್ಳುವ ಮೊದಲು ತಮ್ಮ ಆರ್ಥಿಕ ಶಕ್ತಿ ಮತ್ತು ಬರುವಂತಹ ಕಂತುಗಳನ್ನು ನಿರ್ವಹಿಸುವಂತಹ ಸ್ಥಿತಿಗತಿ ಇವನ್ನೆಲ್ಲ ಪರಿಗಣಿಸಬೇಕಾಗುತ್ತದೆ. ಪರಿಗಣಿಸುವಾಗ ಏನಾದರೂ ಬದಲಿ ವ್ಯವಸ್ಥೆ ಇದೆಯೇ ಅಥವಾ ಯಾವುದಾದರೂ ಇನ್ಸೂರೆನ್ಸ್ ಕವರೇಜ್ ಅಥವಾ ಸರಕಾರದ ಯೋಜನೆಗಳು ತಮ್ಮ ವೈದ್ಯಕೀಯ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತವೆಯೆ ಎಂದು ನೋಡಬೇಕು.

ಸಾಲ ಪಡೆಯುವಲ್ಲಿ ಎದುರಿಸಬೇಕಾಗುವ ಅಪಾಯಗಳು ಮತ್ತು ಸವಾಲುಗಳು

ವೈದ್ಯಕೀಯ ಕಾರಣಕ್ಕಾಗಿ ಒಂದು ಸಲ ಹಣವನ್ನು ಹೊಂದಿಸಿಕೊಳ್ಳಲು ಸಾಲವನ್ನು ಪಡೆಯುವಾಗ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಸಾಲವನ್ನು ನೀಡುವ ಸಂಸ್ಥೆಗಳು ವಿಧಿಸುವ ಬಡ್ಡಿ ದರಗಳು ನಮ್ಮ ಕೈಗೆಟಕುವಂತೆ ಇದೆಯೇ ನೋಡಬೇಕು ಮತ್ತು ಅದರ ಮರುಪಾವತಿಯ ವಿಧಾನ ಅರಿತುಕೊಳ್ಳಬೇಕು ಹಾಗೆಯೆ ಇದರಲ್ಲಿ ಯಾವುದಾದರೂ ಕಾಣದೆ ಅಡಗಿಕೊಂಡು ಇರುವ ಶುಲ್ಕಗಳು ಅಡಕವಾಗಿ ಇವೆಯೇ ಎಂಬುದನ್ನು ಸರಿಯಾಗಿ ನೋಡಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಆರ್ಥಿಕ ಸ್ಥಿತಿ ಅಸಮತೋಲವನ್ನು ಕಾಣುವ ಸಾಧ್ಯತೆ ಇದೆ.

ಸರಕಾರದ ಯಾವುದಾದರೂ ಯೋಜನೆಗಳು ಇವೆಯೇ ಪರಿಶೀಲಿಸಬೇಕು

ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಅವಶ್ಯಕತೆಗಾಗಿ ಹಲವಾರು ಯೋಜನೆಗಳು ಸರಕಾರದ ವತಿಯಿಂದ ಆರಂಭಿಸಲಾಗಿದೆ. ಹಾಗಾಗಿ ನಮ್ಮ ಅವಶ್ಯಕತೆಗೆ ಹೊಂದಿಕೊಂಡು ಸರಕಾರದ ಯೋಜನೆಗಳು ಇದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯ ಇದೆ.

ನಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಅಂದಾಜಿಸಬೇಕು (Credit Score)

ಯಾವುದೇ ಅವಶ್ಯಕತೆಗಳಿಗೆ ಯಾವುದೇ ರೀತಿಯ ಸಾಲವನ್ನು ಪಡೆಯಬೇಕಾದರೆ ಅದು ಸಾಂಪ್ರದಾಯಿಕವಾಗಿರಬಹುದು ಅಥವಾ ಡಿಜಿಟಲ್ ಆಗಿರಬಹುದು ಆದರೆ ನಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಸ್ಥಿತಿಯಲ್ಲಿ ಇರುವುದು ತುಂಬಾ ಅಗತ್ಯ. ಹಾಗಾಗಿ ನಾವು ಪಡೆದುಕೊಳ್ಳಬೇಕು ಎಂದು ಬಯಸಿದ ವೈದ್ಯಕೀಯ ಸಾಲವನ್ನು ಕ್ಲಪ್ತ ಸಮಯದಲ್ಲಿ ತೀರಿಸಬಹುದೇ ಎಂಬುದನ್ನು ಪರಿಗಣಿಸಬೇಕು. ನಾವು ಕಟ್ಟುವ ಕಂತುಗಳು ವ್ಯತ್ಯಾಸವಾದರೆ ಈ ಕ್ರೆಡಿಟ್ ಸ್ಕೋರ್ ವ್ಯತ್ಯಾಸವಾಗುತ್ತದೆ ಮತ್ತು ಮುಂದೆ ನಮ್ಮ ಸಾಲ ಯೋಜನೆಗಳ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ.

ಭವಿಷ್ಯತ್ತಿನ ವೈದ್ಯಕೀಯ ಸಹಾಯದ ಪ್ರವೃತ್ತಿಗಳು

ದೇಶದ ವೈದ್ಯಕೀಯ ಅವಶ್ಯಕತೆಗಳಿಗೆ ಹೊಂದಿಕೊಂಡು ಮುಂದಿನ ದಿನಗಳಲ್ಲಿ ತಂತ್ರಜ್ಞಾನವು ಮುಂದುವರಿದಂತೆ ಕೆಲವೆಲ್ಲ ಹೊಸ ಹೊಸ ಆವಿಷ್ಕಾರಗಳು ಆಗುವ ಸಾಧ್ಯತೆಗಳು ಲಕ್ಷಣಗಳು ನಿರಾಕರಿಸುವಂತಿಲ್ಲ. ಇನ್ನೂ ಸುಲಭವಾದ ಹಾಗೂ ಕೈಗೆಟುಕ ಬಹುದಾದ ಬಡ್ಡಿ ದರಗಳಲ್ಲಿ ಕಂತುಗಳಲ್ಲಿ ಸಾಲ ಸಿಗುವ ಸಾಧ್ಯತೆಗಳನ್ನು ಅಲ್ಲಗಳಂತಿಲ್ಲ

ಕೊನೆಯ ಮಾತು

ವೈದ್ಯಕೀಯ ಅವಶ್ಯಕತೆಗಳಿಗಾಗಿ ಸಾಕಷ್ಟು ಅವಕಾಶಗಳು ಇರುವುದು ನಿಜ. ಈ ಸಾಲುಗಳನ್ನು ಪಡೆಯುವುದರಿಂದ ವೈದ್ಯಕೀಯ ಸವಾಲುಗಳನ್ನು ಎದುರಿಸಲು ಶಕ್ತಿ ಬರುವುದು ಖಂಡಿತ. ಹಾಗೆ ನಮ್ಮ ಪ್ರಿಯ ಜನರನ್ನು ಅವರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಹೆಜ್ಜೆಗಳು ಕೂಡ ಧನಾತ್ಮಕವೇ ಅದರಲ್ಲಿ ಸಂಶಯ ಇಲ್ಲ. ಆದರೆ ಸಾಲ ಪಡೆಯುವಾಗ ಮತ್ತು ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅಪಾಯಗಳ ಮತ್ತು ಸವಾಲುಗಳ ಬಗ್ಗೆ ಯೋಚಿಸಬೇಕಾಗಿರುವುದು ಅಷ್ಟೇ ಮುಖ್ಯ. ಮುಂದಿನ ಭವಿಷ್ಯದ ಬಗ್ಗೆ ಯೋಚಿಸದೆ ಒಂದು ಶೀಘ್ರ ನಿರ್ಣಯದಿಂದ ಮುಂದಿನ ಬದುಕು, ಹಳಿ ತಪ್ಪುವ ಅಪಾಯವನ್ನು ಯೋಚಿಸಿ ಮುಂದಿಡುವುದು ಅತ್ಯಂತ ಸೂಕ್ತ.

Comments are closed.