Personal Loan: ಮದುವೆ, ಮುಂಜಿ ಏನೇ ಇರಲಿ ಹಣ ಬೇಕು ಅಂದ್ರೆ ಈ ಬ್ಯಾಂಕ್ ಇದ್ದೇ ಇದ್ಯಲ್ಲಾ; ಸಿಗುತ್ತೆ ಅತೀ ಕಡಿಮೆ ಬಡ್ದಿದರಕ್ಕೆ ನೀವು ಕೇಳಿದಷ್ಟು ಸಾಲ!

Get Personal Loan in Bank of Baroda: ಮನೆಯಲ್ಲಿ ಮದುವೆ ಇರಬಹುದು, ಅಥವಾ ಇನ್ಯಾವುದೇ ಧಾರ್ಮಿಕ ಕಾರ್ಯಗಳಿರಬಹುದು, ಮನೆ ಹಳೆಯದಾಗಿದೆ ಅಂತ ಅದರ ರಿಪೇರಿ ಮಾಡುವುದಿರಬಹುದು. ಅಥವಾ ಯಾವುದಾದರೂ ಒಂದು ವೈದ್ಯಕೀಯ ಚಿಕಿತ್ಸೆಯ ತುರ್ತು ಪರಿಸ್ಥಿತಿ ಇರಬಹುದು ಹೀಗೆ ಯಾವುದೇ ಸಮಯದಲ್ಲಿ ಹಣದ ಅಗತ್ಯ ಬಿದ್ದಾಗ ನಿಮ್ಮ ಸಂಬಂಧಿಕರಾಗಲಿ ಅಥವಾ ಪರಿಚಯದವರನ್ನಾಗಲಿ ಅವಲಂಬಿಸುವ ಅವಶ್ಯಕತೆ ಇಲ್ಲ. ಬ್ಯಾಂಕ್ ಆಫ್ ಬರೋಡ Bank of Baroda ನಿಮ್ಮ ಅವಶ್ಯಕತೆಗಳನ್ನು ಎಲ್ಲಾ ಪೂರೈಸಿಕೊಡುತ್ತದೆ.

Get Personal Loan in Bank of Baroda here are the details.

ಬ್ಯಾಂಕ್ ಆಫ್ ಬರೋಡಾದ ಸಾಲದ ಬಗ್ಗೆ ಮಾಹಿತಿ Get Personal Loan in Bank of Baroda

ಬ್ಯಾಂಕ್ ಆಫ್ ಬರೋಡ ನಿಮಗೆ ಕೈಗೆಟಕುವ ಬಡ್ಡಿದರದಲ್ಲಿ (Low interest rate)  ಸಾಲವನ್ನು ನೀಡುತ್ತದೆ. ಕ್ರೆಡಿಟ್ ಕಾರ್ಡ್ (credit card Loan) ನ ಮೂಲಕ ಪಡೆಯುವ ಸಾಲಕ್ಕೂ ಈ ಸಾಲಕ್ಕೂ ವ್ಯತ್ಯಾಸವಿರುತ್ತದೆ. ಕ್ರೆಡಿಟ್ ಕಾರ್ಡ್ ನಿಂದ ಪಡೆದಂತ ಹಣವನ್ನು ನೀವು ಒಂದು ನಿಗದಿತ ಅವಧಿ ಒಳಗೆ ಮರುಪಾವತಿ ಮಾಡುವ ಅಗತ್ಯ ಇರುತ್ತದೆ. ಆದರೆ ನೀವು ಪರ್ಸನಲ್ ಸಾಲ (Personal Loan) ವನ್ನು ಪಡೆದಾಗ ದೀರ್ಘಾವಧಿ ಕಂತುಗಳು ಲಭ್ಯವಾಗುತ್ತವೆ

 1. ಬ್ಯಾಂಕ್ ಆಫ್ ಬರೋಡದಿಂದ ಪರ್ಸನಲ್ ಸಾಲವನ್ನು ತೆಗೆದುಕೊಂಡಿದ್ದರಿಂದ ನೀವು ಕ್ಯಾಶ್ ವಿತ್ ಡ್ರಾ ಅಥವಾ ನಗದು ಬ್ಯಾಂಕಿನಿಂದ ತೆಗೆದು ಉಪಯೋಗಿಸಬಹುದು. ಕ್ರೆಡಿಟ್ ಕಾರ್ಡ್ ನಲ್ಲಿ ಈ ಸೌಲಭ್ಯ ಇರುವುದಿಲ್ಲ. ಹಾಗೆ ಕ್ರೆಡಿಟ್ ಕಾರ್ಡ್ ಗಿಂತ ಬಡ್ಡಿ ದರಗಳು ಪರ್ಸನಲ್ ಲೋನ್ ಕಡಿಮೆ ಇರುತ್ತದೆ.
 2. ಬ್ಯಾಂಕ್ ಆಫ್ ಬರೋಡ ದೊಡ್ಡ ನಗರಗಳಲ್ಲಿ ಒಂದು ಲಕ್ಷದಿಂದ 10 ಲಕ್ಷದವರೆಗೆ ಹಾಗೂ ಸಣ್ಣ ಊರುಗಳಲ್ಲಿ 50,000 ದಿಂದ 5 ಲಕ್ಷದವರೆಗೆ ಸಾಲ ಕೊಡುವ ಯೋಜನೆ ಹೊಂದಿದೆ
 3. ಈ ಸಾಲ ಯೋಜನೆಯ ನಿರ್ವಹಣಾ ಶುಲ್ಕ ಅಂದರೆ ಪ್ರೋಸೆಸಿಂಗ್ ಫೀಸ್ (Processing fee)  ನೀವು ಪಡೆಯುವ ಸಾಲದ ಮೊತ್ತದ ಮೇಲೆ ಶೇಕಡ 2% ಚಾರ್ಜ್ ಮಾಡಲಾಗುತ್ತದೆ. ಈ ಚಾರ್ಜ್ ಹೆಚ್ಚು ಕಮ್ಮಿ ರೂ.1000 ದಿಂದ 10 ಸಾವಿರದವರೆಗೆ ನಿಮ್ಮ ಸಾಲದ ಮೊಬಲಗನ್ನು ಹೊಂದಿಕೊಂಡು ಬದಲಾಗುತ್ತದೆ.
 4. ಸಾಲ ಮರುಪಾವತಿ ಅವಧಿಯು ಸರಕಾರಿ ನೌಕರರಿಗೆ ಅಂತಾದರೆ 60 ತಿಂಗಳುಗಳು ಮತ್ತು ಇತರ ನೌಕರರಿಗೆ ಅಂತಾದರೆ 48 ತಿಂಗಳು

ಇದನ್ನೂ ಓದಿ: Loan ತೆಗೆದುಕೊಳ್ಳೋಕೆ ಇನ್ನು ಮುಂದೆ ಬ್ಯಾಂಕ್ ಗೆ ಅಲಿಬೇಡಿ, ಬ್ಯಾಂಕ್ ಗಿಂತ ಕಡಿಮೆ ಬಡ್ಡಿದರದಲ್ಲಿ ಇಲ್ಲಿ ಸಿಗುತ್ತೆ ಸಾಲ!

ಬ್ಯಾಂಕ್ ಆಫ್ ಬರೋಡದ ಸಾಲವನ್ನು ಪಡೆಯಬೇಕಾದರೆ ಬೇಕಾಗುವ ಅರ್ಹತೆ Eligibility to get  Personal Loan in Bank of Baroda

 • ಪರ್ಸನಲ್ ಲೋನ್ಗಾಗಿ ಅಪ್ಲೈ ಮಾಡಬೇಕಾದರೆ 21 ವರ್ಷಕ್ಕೆ ಮೇಲ್ಪಟ್ಟು 60 ವರ್ಷದ ಒಳಗೆ ವಯೋಮಿತಿ ಇರಬೇಕು. ಇದು ನೌಕರರಿಗೆ ಆದರೆ ಅನ್ವಯಿಸುತ್ತದೆ. ಇನ್ನು ನೌಕರರಲ್ಲದವರಿಗೆ ಎಂದಾದರೆ ವಯಸ್ಸಿನ ಮಿತಿ 21 ವರ್ಷಕ್ಕೆ ಮೇಲ್ಪಟ್ಟು 65 ವರ್ಷದ ಒಳಗೆ.
 • ಯಾವುದೇ ವ್ಯಕ್ತಿ ಕೇಂದ್ರ ಸರಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ಉದ್ಯಮಗಳು ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಅಥವಾ ಎಂ ಎನ್ ಸಿ ಅಂದರೆ ಮಲ್ಟಿ ನ್ಯಾಷನಲ್ ಕಂಪನಿ (Multi National Companies) ಗಳಲ್ಲಿ ಕೆಲಸ ಮಾಡುವವರು ಇಲ್ಲದಿದ್ದರೆ ಎಜುಕೇಶನ್ ಇನ್ಸ್ಟಿಟ್ಯೂಷನ್ ನಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿಕೆಲಸ ಮಾಡುವವರು ಈ ಸಾಲವನ್ನು ಪಡೆದುಕೊಳ್ಳಬೇಕಾದರೆ ಕನಿಷ್ಠ ಒಂದು ವರ್ಷದ ಕೆಲಸದ ಅನುಭವದ ಸರ್ಟಿಫಿಕೇಟ್ ಬೇಕಾಗುತ್ತದೆ.
 • ಯಾವುದಾದರೂ ಪ್ರೈವೇಟ್ ಲಿಮಿಟೆಡ್ ಕಂಪನಿ (Private Ltd. company) ಅಥವಾ ಪ್ರೊಪ್ರೈಟರ್ ಶಿಪ್ ಸಂಸ್ಥೆಗಳಾಗಲಿ ಅಥವಾ ಪಾರ್ಟ್ನರ್ಶಿಪ್ ಕಂಪನಿಗಳಲ್ಲಾಗಲಿ ಒಂದು ವರ್ಷ ಕನಿಷ್ಠ ಕೆಲಸ ಮಾಡಿದ ಅನುಭವದ ದಾಖಲೆಯನ್ನು ಹೊಂದಿರಬೇಕು.
 • ಇನ್ನು ಯಾವುದಾದರೂ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಕಳೆದ ಎರಡು ವರ್ಷ ಕೆಲಸ ಮಾಡಿದ ಅನುಭವ ಹೊಂದಿರಬೇಕು. ಇಂಥ ದಾಖಲೆ ಇದ್ದವರು ಈ ಸಲಕ್ಕಾಗಿ ಅರ್ಜಿ ಸಲ್ಲಿಸಬಹುದು.
 • ಇದಲ್ಲದೆ ಯಾರಾದರೂ ಸ್ವ ಉದ್ಯೋಗವನ್ನು ಮಾಡುತ್ತಿದ್ದರೆ ಯಾರಾದರೂ ಆರ್ಕಿಟೆಕ್ಟ್ ಇದ್ದರೆ ಇಂಜಿನಿಯರ್ ಆಗಿದ್ದರೆ ಡಾಕ್ಟರ್ ಆಗಿದ್ದರೆ ಇಂಟೀರಿಯರ್ ಡಿಸೈನರ್ ಹೀಗೆ ವಿವಿಧ ಉದ್ಯೋಗಗಳನ್ನು ಮಾಡುತ್ತಿದ್ದರೆ ಅವರು ಮಾಡುತ್ತಿರುವ ಉದ್ಯೋಗದ ಬಗ್ಗೆ ದೃಢೀಕರಣವನ್ನು ಹಾಜರಪಡಿಸಿದರೆ ಇಂತಹ ವರ್ಗದವರಿಗೂ ಸಾಲ ಸಿಗುತ್ತದೆ.
 • ಇನ್ನೂ ಒಬ್ಬ ಬಿಸ್ನೆಸ್ ಮ್ಯಾನ್ ಅಂದರೆ ವ್ಯಾಪಾರಿ ಕಳೆದ ಒಂದು ವರ್ಷದಿಂದ ತನ್ನ ವ್ಯಾಪಾರವು ಸರಿಯಾಗಿ ದೃಢವಾಗಿ ನಡೆಯುತ್ತದೆ ಎಂಬ ದಾಖಲೆಯನ್ನು ನೀಡಿದರೆ ಅವರಿಗೂ ಪರ್ಸನಲ್ ಸಾಲ ಸಿಗುತ್ತದೆ.

ಬ್ಯಾಂಕ್ ಆಫ್ ಬರೋಡ ಪರ್ಸನಲ್ ಸಾಲ ಪಡೆಯಬೇಕಾದರೆ ಬೇಕಾಗುವ ಡಾಕ್ಯುಮೆಂಟ್ಸ್ ಅಥವಾ ದಾಖಲೆಗಳು.  Documents to get Personal Loan in Bank of Baroda

 1. ಸಾಲಕ್ಕಾಗಿ ನಿಗದಿಪಡಿಸಲ್ಪಟ್ಟ ಅರ್ಜಿ ಫಾರ್ಮನ್ನು ಪೂರ್ತಿಯಾಗಿ ಭರ್ತಿ ಮಾಡಿ. 135 ಫಾರ್ಮ್ ನಂಬರ್ ಇದನ್ನು ಹಾಜರುಪಡಿಸಬೇಕಾಗುತ್ತದೆ ನಂಬರ್ 135 ಫಾರ್ಮ್ ನಂಬರ್ ಅಂದರೆ ಅದು ಬ್ಯಾಂಕ್ ಆಫ್ ಬರೋಡ ಸಾಲ ಪಡೆಯುವವರಿಗೆ ನಿಗದಿಪಡಿಸಿದ ಫಾರ್ಮ್ ಆಗಿರುತ್ತದೆ
 2. ಕಳೆದ ಆರು ತಿಂಗಳಿನ ಬ್ಯಾಂಕಿನ ಸ್ಟೇಟ್ಮೆಂಟ್ ಹಾಗೂ ಅಪ್ಡೇಟ್ ಮಾಡಿದ ಬ್ಯಾಂಕಿನ ಪಾಸ್ ಬುಕ್ ಇದರ ಕಾಪಿ
 3. ಇನ್ನು ನಿಮ್ಮ ವಾಸ ಸ್ಥಳದ ಬಗ್ಗೆ ದೃಢೀಕರಣದ ಸರ್ಟಿಫಿಕೇಟ್ ಅಂದರೆ ಇದಕ್ಕೆ ಪಾಸ್ಪೋರ್ಟ್ ವೋಟರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಕರೆಂಟ್ ಬಿಲ್ ಅಥವಾ ನೀರಿನ ಬಿಲ್ ಇದರಲ್ಲಿ ಯಾವುದಾದರೂ ಒಂದು ಅಲ್ಲದಿದ್ದರೆ ಬ್ಯಾಂಕ್ ಆಫ್ ಬರೋಡ ಪಾಸ್ ಬುಕ್ ಇಲ್ಲದಿದ್ದರೆ ಬ್ಯಾಂಕಿನ ಅಥವಾ ರೆಂಟ್ ಎಗರಿಮೆಂಟ್ ಯಾವುದಾದರೊಂದು ದಾಖಲೆ
 4. ಇನ್ನು ಗುರುತು ಬಗ್ಗೆ ದೃಢೀಕರಣಕ್ಕಾಗಿ ವೋಟರ್ ಕಾರ್ಡ್ ಪಾನ್ ಕಾರ್ಡ್ ಪಾಸ್ ಪೋರ್ಟ್ ಡ್ರೈವಿಂಗ್ ಲೈಸನ್ಸ್ ಸರಕಾರಿ ನೌಕರ ಎಂಬ ದಾಖಲೆ ಇದರಲ್ಲಿ ಯಾವುದಾದರೂ ಒಂದು.
 5. ನಿಮ್ಮ ಭಾವಚಿತ್ರದ ಜೊತೆಗೆ ಇರುವಂತಹ ಯಾವುದಾದರೂ ಬೇರೆ ದಾಖಲೆಗಳು ಅಂದರೆ ಐಸಿಎಐ ಅಥವಾ ಐಸಿಡಬ್ಲ್ಯೂಎ ಅಥವಾ ಐಸಿಎಫ್ ಎ ಐ ವರಿಂದ ಕೊಡ ಮಾಡಿದ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುತ್ತದೆ.
 6. ಸ್ಯಾಲರಿ ಪ್ರೂಫ್ ಆಗಿ ಅಂದರೆ ನೀವು ಉದ್ಯೋಗಿಗಳು ಹೌದು ಎಂಬ ದಾಖಲೆ ಕಳೆದ ಮೂರು ತಿಂಗಳ ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಫಾರ್ಮ ನಂಬರ್ 16 ಅಂದರೆ ನೀವು ಉದ್ಯೋಗಕ್ಕೆ ಸೇರುವಾಗ ಕಂಪನಿಯ ಉದ್ಯೋಗಿ ಎಂಬ ಬಗ್ಗೆ ಕೊಡುವ ದೃಢೀಕರಣ ಪತ್ರ.
 7. ಇಲ್ಲದಿದ್ದರೆ ನೀವು ಟ್ಯಾಕ್ಸ್ ಪಾವತಿಸಿದ ಬಗ್ಗೆ ಮಾಹಿತಿ ಅಂದರೆ ಟ್ಯಾಕ್ಸ್ ರಿಟರ್ನ್ ಡಾಕ್ಯುಮೆಂಟ್.
 8. ಸೆಲ್ಫ್ ಎಂಪ್ಲಾಯ್ಡ್ ಆಗಿರುವವರು ಕಳೆದ ಎರಡು ವರ್ಷದ ಬ್ಯಾಲೆನ್ಸ್ ಶೀಟ್ ನ ದಾಖಲೆಯನ್ನು ಹಾಜರಿ ಪಡಿಸಬೇಕಾಗುತ್ತದೆ.
 9. ಕಳೆದ ಎರಡು ವರ್ಷದ ಇನ್ಕಮ್ ಟ್ಯಾಕ್ಸ್ ಕಟ್ಟಿದ ಟ್ಯಾಕ್ಸ್ ರಿಟರ್ನ್ ಫೈಲ್.
 10. ವ್ಯಾಪಾರವನ್ನು ಮಾಡುತ್ತಿದ್ದರೆ ವ್ಯಾಪಾರ ಮಾಡಲು ಪಡೆದ ಅನುಮತಿ ಸರ್ಟಿಫಿಕೇಟ್ ಸರ್ವಿಸ್ ಟ್ಯಾಕ್ಸ್ ರಿಜಿಸ್ಟ್ರೇಷನ್ ಅಥವಾ ವ್ಯಾಪಾರಕ್ಕಾಗಿ ಪಡೆದ ಲೈಸನ್ಸ್
 11. ಕ್ಲಿಯರಿಂಗ್ ಸರ್ಟಿಫಿಕೇಟ್ ಇನ್ಕಮ್ ಟ್ಯಾಕ್ಸ್ ಚಾಲನ್ ಟಿಡಿಎಸ್ ಸರ್ಟಿಫಿಕೇಟ್ ಅಥವಾ ಫಾರಂ ನಂಬರ್ 26 ಎ ಎಸ್.

ಬ್ಯಾಂಕ್ ಆಫ್ ಬರೋಡ ಸಾಲದ ಬಡ್ಡಿ ದರಗಳು Personal Loan in Bank of Baroda – Rate of interest

ಬ್ಯಾಂಕ್ ಆಫ್ ಬರೋಡಾದ ಸಾಲದ ದರಗಳು ಬೇರೆ ಬೇರೆಯಾಗಿ ಇವೆ. ಅದರಲ್ಲಿ ನೀವು ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಾಗಿ ಕಳೆದ ಆರು ತಿಂಗಳಿನಿಂದ ಇರುವುದಾದರೆ ಅಂತಹವರಿಗೆ 10.5% ಬಡ್ಡಿ ವಿಧಿಸಲಾಗುತ್ತದೆ. ಇನ್ನು ಉಳಿದವರಿಗೆ 12.5% ಬಡ್ಡಿ ವಿಧಿಸಲಾಗುತ್ತದೆ. ಬ್ಯಾಂಕ್ ಆಫ್ ಬರೋಡಾದ ಸಾಲದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಈ Bank of Baroda ಲಿಂಕ್ ಗೆ ಕ್ಲಿಕ್ ಕೊಡಿ.

Comments are closed.