Term insurance HDFC: ದಿನಕ್ಕೆ 23ರೂ. ಪಾವತಿಸಿ ಸಾಕು, 60 ವರ್ಷಕ್ಕೆ ಸಿಗುತ್ತೆ ಒಂದು ಕೋಟಿ ರೂ. ಭದ್ರತೆ!

Term insurance HDFC: ಭಾರತೀಯರ ವಿಚಿತ್ರ ಸ್ವಭಾವ ಏನು ಗೊತ್ತಾ? ನಾವು ಎಷ್ತೇ ಕಡಿಮೆ ದುಡಿದರೂ ಅದರಲ್ಲಿ ಒಂದು ಅಂಶವನ್ನು ಉಳಿತಾಯ ಮಾಡು ಅಂದ್ರೆ ಮಾಡುತ್ತೇವೆ. ಆದ್ರೆ ಇಡೀ ಜೀವನಕ್ಕೆ ಭದ್ರತೆ, ಭರವಸೆಯನ್ನು ನೀಡುವ ಇನ್ಸುರೆನ್ಸ್ (Term insurance HDFC) ಅಂದ್ರೆ ಮಾತ್ರ ದೂರ ಓಡಿತ್ತೇವೆ.  ಇದರಿಂದ ಎಂಥ ದೊಡ್ಡ ಅಪಾಯ ಆಗಬಹುದು ಗೊತ್ತಾ?

ನಾವು ಹೇಗೆ ಹಣವನ್ನು ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಾ ಹೋಗುತ್ತೆವೆಯೋ, ಹಾಗೆ ಮುಂದೆ ಏನಾದರೂ ಅಪಘಾತವಾದರೆ, ಅಕಾಲಿಕ ಮರಣ ಸಂಭವಿಸಿದರೆ, ನಮ್ಮ ಹಾಗೂ ನಮ್ಮನ್ನೇ ನಂಭಿಕೊಂಡಿರುವ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ಇನ್ಸುರೆನ್ಸ್ ಮಾಡಿಸುವುದು ಬಹಳ ಮುಖ್ಯ,

There are different kind of Term insurance HDFC plans are available. which is best here are the details.

ಯಾವ ಇನ್ಸುರೆನ್ಸ್ ಆಯ್ದುಕೊಳ್ಳುತ್ತೀರಿ ಎನ್ನುವುದು ಮುಖ್ಯ (Select best insurance)

ವಿಮೆ ಅಥವಾ ಇನ್ಸುರೆನ್ಸ್ ನಲ್ಲಿ ಲೈಫ್ ಇನ್ಸುರೆನ್ಸ್, ಟರ್ಮ್ ಇನ್ಸುರೆನ್ಸ್ ಹೀಗೆ ಬೇರೆ ಬೇರೆ ವಿಧಗಳು ಇರುತ್ತವೆ. ಅವುಗಳಲ್ಲಿ ನಿಮಗೆ ಅನುಕೂಲವಾಗಿದ್ದನ್ನು ನೀವು ಆಯ್ದುಕೊಳ್ಳಬಹುದು. ಲೈಫ್ ಇನ್ಸೂರೆನ್ಸ್ ಗೆ ನೀವು ಪ್ರೀಮಿಯಂ ಕಟ್ಟುತ್ತಿದ್ದು ಎಷ್ಟು ವರ್ಷಗಳ ಅವಧಿಗೆ ಅಂತ ಆಯ್ಕೆ ಮಾಡಿದ್ದೀರಾ? ಅಷ್ಟು ವರ್ಷ ಆದ ಕೂಡಲೇ ನಿಮಗೆ ಮೆಚುರಿಟಿ ಅಮೌಂಟ್ ಹಿಂದೆ ಸಿಗುತ್ತದೆ.  ಜೊತೆಗೆ ಬೋನಸ್ ಸೇರಿ ನೀವು ಕಟ್ಟಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನೇ ಹಿಂಪಡೆಯಬಹುದು. ಅಂತೆಯೇ ಈ ಅವಧಿ ಒಳಗೆ ಏನಾದರೂ ಅನಾಹುತ ಸಂಭವಿಸಿದರೆ ನಿಮ್ಮ ಲೈಫ್ ಇನ್ಸೂರೆನ್ಸ್ ಪಾಲಿಸಿ ಎಷ್ಟು ಮೊತ್ತದ್ದು ಖರೀದಿಸಿದ್ದೀರಾ ಅಷ್ಟು ಮೊತ್ತ ನಿಮ್ಮ ನಾಮಿನಿಗೆ ಸಿಗುತ್ತದೆ.

ಟರ್ಮ್ ಇನ್ಸುರೆನ್ಸ್ Term insurance HDFC

ಟರ್ಮ್ ಇನ್ಸೂರೆನ್ಸ್ ಅಲ್ಲಿ ಪ್ರೀಮಿಯಂ ಮೊತ್ತ ತುಂಬಾ ಕಡಿಮೆ ಇರುತ್ತದೆ ಇಲ್ಲಿ ನೀವು ಎಷ್ಟು ವರ್ಷದ ಪಾಲಿಸಿ ಆಯ್ಕೆ ಮಾಡಿಕೊಂಡಿರುತ್ತೀರೋ ಅಲ್ಲಿಯವರೆಗೆ ಜೀವನದಲ್ಲಿ ಏನ್ ಅವಗಢ ಸಂಭವಿಸಿದರೂ, ಎಷ್ಟು ರೂಪಾಯಿಯ ಪಾಲಿಸಿ ಖರೀದಿಸಿದ್ದೀರೋ ಅಷ್ಟು ಮೊತ್ತ ನಿಮ್ಮ ನಾಮಿನಿಗೆ ಸಿಗುತ್ತದೆ.

ಪ್ರತಿ ತಿಂಗಳು ಪ್ರೀಮಿಯಂ ಕಟ್ಟಿ ಮೆಚುರಿಟಿ ಹಣ ಅಂತ ಪಾಲಿಸಿ ಅವಧಿ ಮುಗಿದೊಡನೆ ಹಿಂದೆ ಸಿಗುವುದಿಲ್ಲ ಅಂತಾದರೆ ಈ ಟರ್ಮ್ ಇನ್ಸೂರೆನ್ಸ್ ಯಾಕಾದರೂ ಮಾಡಬೇಕು ಎಂಬ ಒಂದು ಪ್ರಶ್ನೆ ನಿಮ್ಮ ಮನಸ್ಸನ್ನು ಕಾಡುತ್ತಿರಬಹುದು. ಇವತ್ತಿನ ಜಗತ್ತಿನಲ್ಲಿ ಬಹಳಷ್ಟು ಜನ ದುಡಿಮೆ ಆಧರಿಸಿ ಬದುಕುತ್ತಾರೆ ಮತ್ತು ಈ ದುಡಿಮೆ ತಮಗೆ ಕಾಯಂ ಇರುತ್ತದೆ ಎಂದು ನಂಬಬೇಕಾಗುತ್ತದೆ. ದುಡಿಮೆಯಿಂದಲೇ ಬದುಕು ಸಾಗಿಸಬೇಕು. ಜೀವನ ಪಥದಲ್ಲಿ ಎಲ್ಲವೂ ಸರಾಗವಾಗಿ ಸುಸೂತ್ರವಾಗಿ ನಾವು ಬಯಸಿದಂತೆ ಮುಂದೆ ಸಾಗುತ್ತಿದ್ದರೆ ಯಾವುದೇ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಮನುಷ್ಯ ಯೋಜನೆಯನ್ನು ಮಾಡುವಾಗ ಹೀಗೆ ಅಥವಾ ಹೀಗಾಗದಿದ್ದರೆ ಅನ್ನುವ ಎರಡು ವಿಚಾರಗಳನ್ನು ಮಾಡಿ ಮುಂದುವರಿದಾಗ ಈ ಟರ್ಮ್ ಇನ್ಸೂರೆನ್ಸ್ (Term insurance HDFC) ಇದರ ಮಹತ್ವ ಅರಿವಾಗುತ್ತದೆ.

ಟರ್ಮ್ ಇನ್ಸುರೆನ್ಸ್ ನಿಂದ ಲಾಭ Benefits of Term insurance HDFC

ನಾವು ದುಡಿಯುವ ಹೊತ್ತಿನಲ್ಲಿ ಮನೆ, ಕಾರು ಇತ್ಯಾದಿ ಪ್ರತಿಯೊಬ್ಬರಿಗೂ ತಮ್ಮ ಜೀವನದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಲ ಇರುತ್ತದೆ. ಪ್ರತಿ ತಿಂಗಳು EMI ಕಟ್ಟುವ ಜವಾಬ್ದಾರಿ ಹಾಗೂ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ದುಡಿಯುವ ಪುರುಷ ಅಥವಾ ಮಹಿಳೆಯ ಮೇಲೆ ಇರುತ್ತದೆ. ಏನಾದರೂ ಅಹಿತಕರ ಘಟನೆ ಜೀವನದಲ್ಲಿ ನಡೆದು ಹೋದರೆ ಆಗ ದುಡಿಯುವ ಕೈಗಳು ಇಲ್ಲವಾಗುತ್ತವೆ. ಅವರನ್ನು ಅವಲಂಬಿಸಿದವರ ಬದುಕು ದಾರ ತುಂಡಾದ ಗಾಳಿಪಟದಂತೆ ಆಗಿ ಹೋಗುತ್ತದೆ. ಅದಕ್ಕಾಗಿ ಹೆಚ್  ಡಿ ಎಫ್ ಸಿ ಟರ್ಮ್ ಇನ್ಸೂರೆನ್ಸ್ (Term insurance HDFC) ಇವರ ಒಂದು ಯೋಜನೆಯ ಕಡೆ ಕಣ್ಣು ಹಾಯಿಸಿ ನೋಡಿ. ಬದುಕಿಗೆ ಒಂದು ಸುರಕ್ಷತೆ ಹೇಗೆ ಕೊಡಲು ಸಾಧ್ಯ ಎಂಬುದನ್ನು ಯೋಚಿಸಿ.

ಟರ್ಮ್ ಇನ್ಸುರೆನ್ಸ್ ಲೆಕ್ಕಾಚಾರ Calculation  of Term insurance HDFC

ಉದಾಹರಣೆಗೆ 20 ವರ್ಷದ ಯಾವುದೇ ದುರಭ್ಯಾಸ ಇಲ್ಲದ, ಗುಟ್ಕಾ ತಿನ್ನೋದು, ಸಿಗರೇಟ್ ಸೇದುವುದು ಇತ್ಯಾದಿ ದುಶ್ಚಟಗಳಿಂದ ದೂರ ಇರುವ ಒಬ್ಬ ಯುವಕ ಒಂದು ಕೋಟಿ ರೂಪಾಯಿ ಇನ್ಶೂರೆನ್ಸ್ 40 ವರ್ಷಕ್ಕೆ ಮಾಡಿದರೆ ತಿಂಗಳಿಗೆ 692 ರೂಪಾಯಿ ಅಂದರೆ ದಿನಕ್ಕೆ ಕೇವಲ 23 ರೂಪಾಯಿ ಟರ್ಮ್ ಇನ್ಸೂರೆನ್ಸ್ (Term insurance HDFC ) ಗಾಗಿ ಮೀಸಲಿಟ್ಟರೆ ಅವನ ಬದುಕು 60 ವರ್ಷದವರೆಗೆ ಒಂದು ಕೋಟಿ ರೂಪಾಯಿಗಳ ಭದ್ರತೆಯ ಆಸರೆ ಪಡೆಯುತ್ತದೆ. ಹೇಗೆ ಎಂದರೆ ಈ ಅವಧಿಯಲ್ಲಿ ಏನಾದರೂ ಆತನಿಗೆ ಅನಾಹುತ ಆಗಿ ಆತ ಮರಣ ಹೊಂದಿದರೆ ಅವರ ಮನೆಯವರಿಗೆ ಅಂದರೆ ಅವರನ್ನು ಅವಲಂಬಿಸಿರುವವರಿಗೆ ಒಂದು ಕೋಟಿ ರೂಪಾಯಿ ಸಿಗುತ್ತದೆ.

ಟರ್ಮ್ ಇನ್ಸುರೆನ್ಸ್ ಪಾಲಿಸಿದಾರನ ಕುಟುಂಬಕ್ಕೆ ಸಹಾಯವಾಗುವುದು ಹೇಗೆ? How does term insurance HDFC help the policyholder’s family?

ಒಂದು ಕೋಟಿ ರೂಪಾಯಿ ಇವತ್ತಿನ ಬ್ಯಾಂಕ್ ಡೆಪಾಸಿಟ್ (Bank Deposit) ಬಡ್ಡಿ ದರ (Interest Rate) ವನ್ನು ಅವಲೋಕಿಸಿ ನೋಡಿದರು 7 ಲಕ್ಷಕ್ಕಿಂತ ಹೆಚ್ಚು ವರ್ಷದ ಬಡ್ಡಿಯೇ ಸಿಗುತ್ತದೆ ಸರಿಸುಮಾರು ತಿಂಗಳಿಗೆ 58,000 ಬಡ್ಡಿ ಸಿಗುತ್ತದೆ. ಈ ಬಡ್ಡಿಯು ಅವಲಂಬತ ಸದಸ್ಯರಿಗೆ ಆಶ್ರಯವನ್ನು ಕಲ್ಪಿಸಿ ಕೊಡುತ್ತದೆ. ಈಗ ನಾವು ಮೆಡಿಕಲ್ ಇನ್ಸೂರೆನ್ಸ್ (Medical Insurance) ಅಂತ ಕಟ್ಟುತ್ತೇವೆ. ಆ ಪ್ರೀಮಿಯಂ (Premium)  ಯಾವಾಗಲೂ ಮೆಚ್ಯೂರ್ ಆಗಿ ಸಿಗುವುದು ಅಂತ ಇಲ್ಲ ಏನಾದರೂ ಆರೋಗ್ಯದ ಸಮಸ್ಯೆ ಉಂಟಾಗಿ ಖರ್ಚು ಬಂದರೆ ಎಂಬ ಕಾರಣಕ್ಕೆ ಅಂದರೆ ಇವತ್ತಿನ ದಿನದಲ್ಲಿ ಮೆಡಿಕಲ್ ಖರ್ಚುಗಳು ಆಸ್ಪತ್ರೆಗೆ ಹೋಗುವಂತ ಪರಿಸ್ಥಿತಿ ಬಂದರೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ.

ನೀವು Personal Loan ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಾದ್ರೆ ಈ ಬ್ಯಾಂಕ್ನಲ್ಲಿ ಅಪ್ಲೈ ಮಾಡಿ; ಯಾವುದೇ ಭದ್ರತೆ ಕೇಳದೆ ಸಾಲ ಕೊಡ್ತಾರೆ, ಎಕ್ಸ್ಟಾ ಶುಲ್ಕವೂ ಇಲ್ಲ!

 ಹೀಗೆ ಏನಾದರೂ ಆದಾಗ ಮೆಡಿಕಲ್ ಇನ್ಸೂರೆನ್ಸ್ ಗಳು ಹೇಗೆ ಸಹಾಯಕ್ಕೆ ಬರುತ್ತವೋ ಹಾಗೆ ಟರ್ಮ್ ಇನ್ಸೂರೆನ್ಸ್ (Term insurance HDFC) ಗಳು ವ್ಯಕ್ತಿಯ ಅವಸಾನದ ನಂತರ ತಮ್ಮ ಸಂಗಾತಿಗೆ ಕುಟುಂಬದ ಜವಾಬ್ದಾರಿಯನ್ನು ನೋಡುವ ಹೊಣೆಯನ್ನು ಹೊರಲು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಈ ಯೋಜನೆ ಅತ್ಯಂತ ಸೂಕ್ತವಾದದ್ದು. ತಿಂಗಳಿಗೆ 692 ರೂಪಾಯಿ ಅಂದರೆ ತಿಂಗಳಲ್ಲಿ ಮನೆಯವರು ಎಲ್ಲಾ ಸೇರಿ ಒಂದು ದಿನ ಹೋಟೆಲ್ಗೆ ಹೋದ ಖರ್ಚಿಗೆ ಸಮ.

ಬೇರೆ ಬೇರೆ ವಯಸ್ಸಿನವರಿಗೆ Term insurance HDFCಇವರ ಬೇರೆ ಬೇರೆ ಪ್ಲಾನ್ ಗಳು ಇವೆ ಜಾಸ್ತಿ ವಯಸ್ಸಾದಂತೆ ಪ್ರೀಮಿಯಂ ಸ್ವಲ್ಪ ಜಾಸ್ತಿ ಇರುತ್ತದೆ. ಇನ್ನು ಯಾವಾಗಲೂ ಒಂದು ರಿಸ್ಕ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಬೇರೆ ಬೇರೆ ತರಹ ಯೋಜನೆಗಳು ಇದೆ. ಏನಾದರೂ ಆಕಸ್ಮಿಕ ಆದರೆ ಅಂತ ಈ ಯೋಜನೆ ಗಳನ್ನು ವಹಿಸಿ ತಮಗೆ ಸರಿಹೊಂದುವಂತಹ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನ.

Comments are closed.