Flipkart Pay later Loan: ನಿಮ್ಮ ಬಳಿ ಹಣ ಇಲ್ಲದಿದ್ದರೂ ಫ್ಲಿಕ್ ಕಾರ್ಟ್ ನಲ್ಲಿ ವಸ್ತು ಖರೀದಿಸಿ, ನಿಧಾನಕ್ಕೆ ಹಣ ಪಾವತಿಸಿ; ಯಾವ ಹೆಚ್ಚುವರಿ ಚಾರ್ಜ್ ಕೂಡ ಇಲ್ಲ, ಇಂದೇ ಸೌಲಭ್ಯ ಪಡೆದುಕೊಳ್ಳಿ!

Flipkart Pay later Loan: ಫ್ಲಿಪ್ಕಾರ್ಟ್ ನವರು 2020ರಲ್ಲಿ ಈ ಒಂದು ಸೌಲಭ್ಯವನ್ನು ತಂದು ಇದುವರೆಗೆ ಬಹಳಷ್ಟು ಜನರಿಗೆ ಇದರ ಬಗ್ಗೆ ಗೊತ್ತಿರುವದಿಲ್ಲ. ಫ್ಲಿಪ್ ಕಾರ್ಟ್ ನ ಈಗ ಖರೀದಿಸಿ ಆಮೇಲೆ ಹಣ ಕೊಡಿ ಆಪ್ಶನ್ (Flipkart Pay later Loan) ಬಗ್ಗೆ ನಿಮಗೆ ಗೊತ್ತಾ? ಅದಕ್ಕಾಗಿ ನಮ್ಮ ಈ ಲೇಖನವನ್ನು ಓದಿ.

ಇಂದಿನ ದಿನಗಳಲ್ಲಿ ನಗರವಾಸಿಗಳು ಆನ್ಲೈನ್ (Online) ಖರೀದಿಗೆ ಹೆಚ್ಚು ಆಸಕ್ತರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಆನ್ಲೈನ್ ವ್ಯವಹಾರ ಇಷ್ಟೊಂದು ಪಾಪ್ಯುಲರ್ (Popular)  ಆಗಲು ಕಾರಣ ಮನೆಯಿಂದಲೇ ಕೂತು ನಮಗೆ ಬೇಕಾದ ಐಟಂ ಆರ್ಡರ್ ಮಾಡಬಹುದು ಹಾಗೂ ಅದರ ದರಗಳನ್ನು ನೋಡಿ ಯಾವುದು ಬೇಕು ಅದನ್ನು ಖರೀದಿಸಬಹುದು. ಮನೆಯಲ್ಲೇ ಕೂತು ಒಂದು ದೊಡ್ಡ ಅಂಗಡಿಗೆ ಅಥವಾ ಮಾಲ್ ಗೆ ಹೋದಂತೆ.

You can Purchase now and use Flipkart Pay later Loan to pay after one month. Active this option now.

ಎಲೆಕ್ಟ್ರಾನಿಕ್ ಉಪಕರಣ (Electronic goods) ಗಳಿಂದ ಹಿಡಿದು ಮನೆಗೆ ಬೇಕಾಗುವ ಎಲ್ಲಾ ಸಾಮಾನುಗಳು ಆನ್ಲೈನ್ ನ ಮೂಲಕ ಸಿಗುತ್ತವೆ. ಅಂದರೆ ಉದಾಹರಣೆಗೆ ನೀವು ಫ್ಲಿಪ್ಕಾರ್ಟ್ ಮೂಲಕ ಆರ್ಡರ್ (Flipkart Pay later Loan)  ಮಾಡ್ತಾ ಇದ್ದರೆ ಫ್ಲಿಪ್ಕಾರ್ಟ್ ಅನ್ನುವ ದೊಡ್ಡ ಅಂಗಡಿಯ ಗ್ರಾಹಕರು ನೀವು. ಯಾವಾಗಲೂ ಅದೇ ಅಂಗಡಿಯಿಂದ ತಮಗೆ ಬೇಕಾದ ಸಾಮಾನನ್ನು ಖರೀದಿಸಿ ಆ ಅಂಗಡಿಯವರ ಪರಿಚಯವಾದರೆ ಒಂದೊಮ್ಮೆ ಖರೀದಿಯ ಹೊತ್ತಲ್ಲಿ ನಮ್ಮಲ್ಲಿ ಕಾಸು ಇಲ್ಲದೆ ಇದ್ದರೂ ಉದ್ರಿ ಆಗಿ ಸಮಾನನು ಮನೆಗೆ ತರಬಹುದು ಅಷ್ಟರಮಟ್ಟಿನ ವಿಶ್ವಾಸ ಅಂಗಡಿಯವನಿಗೆ ಮತ್ತು ಗ್ರಾಹಕನಿಗೆ ಇರುತ್ತದೆ.

ಇದು ಇವತ್ತು ಅಂತ ಅಲ್ಲ ಅದೆಷ್ಟೋ ವರ್ಷಗಳಿಂದ ವೇತನ ಪಡೆಯುವವರು ತಿಂಗಳ ಮೊದಲ ವಾರದಲ್ಲಿ ವೇತನವಾಗುತ್ತದೆ ನಂತರ ದಿನಗಳಲ್ಲಿ ಏನಾದರೂ ಅವಶ್ಯಕತೆ ಇದ್ದಾಗ ಕೈಯಲ್ಲಿ ಕಾಸು ಇರುವುದಿಲ್ಲ. ಆಗ ಅಂಗಡಿಯವರಿಂದ ಮತ್ತೊಂದು ತಿಂಗಳ ಪ್ರಾರಂಭಕ್ಕೆ ವೇತನ ಆದ ಕೂಡಲೇ ಉದುರಿ ಬಾಕಿ ಕೊಟ್ಟು ಲೆಕ್ಕ  ಸೆಟ್ಲು ಮಾಡುವ ಪ್ರಕ್ರಿಯೆ ಮೊದಲಿನಿಂದಲೂ ನಡೆದುಕೊಂಡು ಬಂದಿರುವುದು.

ಈಗ ಇದು ಹೊಸ ರೂಪ ಪಡೆದು ಪೇ ಲೇಟರ್ (Flipkart Pay later Loan)  ಎಂಬ ಹೆಸರಿನೊಂದಿಗೆ ಜನಪ್ರಿಯವಾಗುತ್ತಿದೆ. ಒಟ್ಟು ವಿಷಯ ಏನೆಂದರೆ, ತಿಂಗಳು ಪೂರ್ತಿ ತಮಗೆ ಬೇಕಾದ ಸಾಮಾನನ್ನು ಖರೀದಿಸುವುದು ಮತ್ತು ಮುಂದಿನ ತಿಂಗಳು ಐದನೇ ತಾರೀಖಿನೊಳಗೆ ಬಾಕಿಯನ್ನು ಪಾವತಿಸುವುದು.

ನೀವು ಫ್ಲಿಪ್ ಕಾರ್ಟ್ ನ ಖಾಯಂ ಗಿರಾಕಿಯಾಗಿದ್ದು ನಿಮ್ಮ ವ್ಯವಹಾರಗಳನ್ನು ಇದರೊಂದಿಗೆ ನಡೆಸುತ್ತಿದ್ದರೆ ನಿಮಗೆ ಪೇ ಲೆಟರ್ (Flipkart Pay later Loan) ಸೌಲಭ್ಯ ಲಭ್ಯವಾಗುತ್ತದೆ. ಹಾಗಾದರೆ ಇದನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದಾಗಿ ನೋಡೋಣ.

ಫ್ಲಿಪ್ ಕಾರ್ಟ್ ನ ಪೇ ಲೇಟರ್ ಬಗ್ಗೆ ಮಾಹಿತಿ (Information about Flipkart Pay later Loan)

ಫ್ಲಿಪ್ ಕಾರ್ಟ್ ನಲ್ಲಿ ನೀವು 1000 ರೂಪಾಯಿ ಮೌಲ್ಯದ ವಸ್ತುವನ್ನು ಖರೀದಿಸಿ ಪೆ ಲೇಟರ್ ಸೌಲಭ್ಯವನ್ನು ಬಳಸಿಕೊಂಡರೆ ಕಡಿಮೆ ಎಂದರೆ ಹತ್ತು ರೂಪಾಯಿ ಎಕ್ಸ್ಟ್ರಾ ಚಾರ್ಜ್ (Extra Charge) ನೀಡಬೇಕಾಗುತ್ತದೆ. ಇದಲ್ಲದೆ ನಿಗದಿತ ಸಮಯದೊಳಗೆ ಹಣಕೊಡದಿದ್ದರೆ ಇನ್ನೂ ಹೆಚ್ಚಿನ ಚಾರ್ಜ್ಗಳನ್ನು ಕೊಡಬೇಕಾಗುತ್ತದೆ.

ಕೆಲವು ಸಲ ನಿಗದಿತ ಅವಧಿಯೊಳಗೆ ಯಾಕೆ ಹಣ ಕೊಡಲಾಗುವುದಿಲ್ಲ ಅಂದರೆ ಹೇಗು ಇವತ್ತು ಖರೀದಿಸಿ ಮತ್ತೆ ಹಣ ಕೊಡುವುದಲ್ಲ ಹಾಗಾಗಿ ಅಗತ್ಯವಿಲ್ಲದ ಕೆಲವು ಖರೀದಿಗಳು ಪ್ರಾರಂಭವಾಗುತ್ತದೆ. ಅಂದರೆ ಈಗ ಈ ದಿನ ನಮಗೆ ಅಷ್ಟೊಂದು ಅವಶ್ಯಕವಲ್ಲ ಮುಂದಿನ ತಿಂಗಳು ಸಾಕು ಎನ್ನುವ ಐಟಂಗಳು ಈಗಲೇ ಖರೀದಿಸುವ ಮನಸು ಮಾಡುತ್ತೇವೆ. ಹೀಗೆ ಮಾಡಿ ಮಾಡಿ ನಮ್ಮ ತಿಂಗಳ ಆರ್ಥಿಕ ಬ್ಯಾಲೆನ್ಸ್ ತಪ್ಪು ಸಾಧ್ಯತೆ ಇದೆ ಆಗ ಹೆಚ್ಚುವರಿ ಶುಲ್ಕವನ್ನು ನಾವು ತೆರಬೇಕಾಗುತ್ತದೆ. ಹಣ ಕೊಡದೆ ಒಂದು ಸಲ ಮಾಲು ಸಿಗುತ್ತದೆ ಅಂತ ಒಟ್ಟಾರೆ ಖರೀದಿಗೆ ಹೋಗದಿದ್ದರೆ ಈ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬಹುದು.

ಏನ್ ಗೊತ್ತ? ತಲೆಬಿಸಿ ಮಾಡ್ಕೊಳ್ಳೋದೇ ಬೇಡ, ಇಷ್ಟು ಮಾಡಿದ್ರೆ ಸಾಕು, ಕುಳಿತಲ್ಲೇ Personal Loan ಅಪ್ರೋವಲ್ ಸಿಕ್ಕಿಬಿಡುತ್ತೆ, ಕ್ಷಣದಲ್ಲಿ ಖಾತೆಗೆ ಹಣ ಜಮಾ ಆಗುತ್ತೆ!

ಫ್ಲಿಪ್ಕಾರ್ಟ್ ನ ಪೇ ಲೇಟರ್ (Flipkart Pay later Loan)  ಸೌಲಭ್ಯವನ್ನು ಸರಿಯಾಗಿ ಅಗತ್ಯ ಇರುವಾಗ ಮಾತ್ರ ಬಳಸಿದರೆ ಇದರ ಲಾಭವು ಇದೆ ಆದರೆ ಸ್ವೇಚ್ಛೆಯಿಂದ ಖುಷಿ ಬಂದಂತೆ ಬಳಸಿಕೊಂಡರೆ ಹಾನಿಯೇ ಜಾಸ್ತಿ!

ಫ್ಲಿಪ್ ಕಾರ್ಟ್ ನ ಪೇ ಲೇಟರ್ ಬೆನಿಫಿಟ್ಸ್ (Benefits of Flipkart Pay later Loan)

ಈ ಫ್ಲಿಪ್ಕಾರ್ಟ್ ನ ಪೆಲೇಟರ್ ಜಾಯಿನ್ ಮಾಡಲು ಯಾವುದೇ ಖರ್ಚು ಇಲ್ಲ ಪ್ರತಿಶತ 100 ಫ್ರೀ ಆಗಿಯೇ ಇದೆ. ಯಾವುದೇ ತಿಂಗಳ ಚಾರ್ಜು ಅಥವಾ ವಾರ್ಷಿಕ ಮೇಂಟೆನೆನ್ಸ್ ಚಾರ್ಜು ಯಾವುದು ಇರುವುದಿಲ್ಲ.

ಫ್ಲಿಪ್ಕಾರ್ಟ್ ಪೇ ಲೆಟರ್ Flipkart Pay later Loan Active  ಮಾಡುವುದು ಹೇಗೆ?

  • ಇನ್ನೊಂದು ವಿಚಾರ ಈ ಸೌಲಭ್ಯ ಸಿಗಬೇಕಾದರೆ ಒಳ್ಳೆಯ ಕ್ರೆಡಿಟ್ ಸ್ಕೋರ್ (Credit Score) ಅಂದರೆ ಸಿಬಿಲ್ ಸ್ಕೋರ್ ಇರಬೇಕು.
  • ಫ್ಲಿಪ್ಕಾರ್ಟ್ ಅಕೌಂಟ್ ಓಪನ್ ಮಾಡಿ ವರ್ಷದಲ್ಲಿ ಒಂದೆರಡು ಸಲ ಮಾತ್ರ ಏನಾದರೂ ಖರೀದಿ ಮಾಡುತ್ತಿದ್ದವರಿಗೆ ಈ ಸೌಲಭ್ಯ ದೊರಕುವುದಿಲ್ಲ
  • ಮೊದಲು ನಿಮ್ಮ ಈಗಾಗಲೇ ಡೌನ್ಲೋಡ್ ಆದ ಫ್ಲಿಪ್ಕಾರ್ಟ್ ಆಪ್ ಅನ್ನು ಅಪ್ಡೇಟ್ ಮಾಡಿ
  • ಫ್ಲಿಪ್ಕಾರ್ಟ್‌ನ ಆಪ್ ಓಪನ್ ಆದ ಕೂಡಲೇ ಅಲ್ಲಿ ಕೆಳಗೆ ಕ್ರೆಡಿಟ್ ಆಪ್ಶನ್ ನೋಡಲು ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಿ ಇಲ್ಲದಿದ್ದರೆ ಮೇಲೆ ಬಲಬದಿಗೆ 3 ಗೆರೆಗಳು ಇರುತ್ತವೆ. ಅದರ ಮೇಲೆ ಕ್ಲಿಕ್ ಮಾಡಿದರು ಫ್ಲಿಪ್ಕಾರ್ಟ್ ಪೇಲೇಟರ್ ಆಪ್ಷನ್ ಕಾಣಿಸಿಕೊಳ್ಳುತ್ತದೆ
  • ಅಲ್ಲಿ ನೀವು ಕ್ಲಿಕ್ ಕೊಟ್ಟಾಗ ನಿಮ್ಮ ಕೆ ವೈ ಸಿ ಅಪ್ಲೋಡ್ ಮಾಡುವ ಆಪ್ಷನ್ ಸಿಗುತ್ತದೆ ಅಂದರೆ ನಿಮ್ಮ ಪಾನ್ ನಂಬರ್ ನಿಮ್ಮ ಮೊಬೈಲ್ ನಂಬರ್ ನಿಮ್ಮ ಆಧಾರ್ ನಂಬರ್ ಇತ್ಯಾದಿ
  • ಅಲ್ಲಿ ಭರ್ತಿ ಮಾಡಿ ಅದು ಕೂಡಲೇ ಆಧಾರ್ ವೆರಿಫಿಕೇಶನ್ಗಾಗಿ ನಿಮ್ಮ ಮೊಬೈಲ್ ನಂಬರಿಗೆ ಬಂದು ಓಟಿಪಿ ಬರುತ್ತದೆ ನಿಮ್ಮ ಆಧಾರ್ ಕಾರ್ಡ್ ಮತ್ತೆ ಮೊಬೈಲ್ ನಂಬರ್ ಲಿಂಕ್ ಆಗದೆ ಇದ್ದರೆ ಈ ಸೌಲಭ್ಯ ಲಭ್ಯವಾಗುವುದಿಲ್ಲ. ಆದರೆ ಲಿಂಕ್ ಆಗಿದ್ದರೆ ಈ ಓಟಿಪಿಯನ್ನು ನೀವು ಅಲ್ಲಿ ಆ ಕಾಲಮಲ್ಲಿ ಭರ್ತಿ ಮಾಡಿದಾಗ ಕಂಟಿನ್ಯೂ ಎನ್ನುವ ಆಪ್ಷನ್ ಬರುತ್ತದೆ ಅಲ್ಲಿ ಕ್ಲಿಕ್ ಮಾಡಿ
  • ಈಗ ನಾಲ್ಕು ಡಿಜಿಟ್ ಗಳ ಒಂದು ಪಿನ್ ಜನರೇಟ್ ಮಾಡಲು ಆಪ್ಷನ್ ಬರುತ್ತದೆ ಅದರಲ್ಲಿ ನಾಲ್ಕು ಅಂಕೆಗಳ ವಿನ್ನನ್ನು ಜನರೇಟ್ ಮಾಡಿ
  • ನೆಕ್ಸ್ಟ್ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಹಾಕಲು ಕೇಳುತ್ತದೆ ಅದನ್ನು ಹಾಕಿ
  • ಅದರ ನಂತರ ಟರ್ಮ್ಸ್ ಅಂಡ್ ಕಂಡೀಶನ್ಸ್ (Terms and conditions) ಓದಲು ಸಿಗುತ್ತದೆ ಅದನ್ನು ಓದಿ ಕ್ಲಿಕ್ ಮಾಡಿ
  • ಚೆಕಿಂಗ್ ಯುವರ್ ಎಲಿಜಿಬಿಲಿಟಿ (Eligibility) ಅಂತ ಹೊಸ ಪೇಜ್ ನಿಮಗೆ ಕಾಣುತ್ತದೆ ಅದು ಸ್ವಲ್ಪ ಹೊತ್ತು ಹಾಗೆ ಇರುತ್ತದೆ ಯಾಕೆಂದರೆ ನೀವು ನೀಡಿದ ದಾಖಲೆಗಳನ್ನೆಲ್ಲ ಅದು ವಿಮರ್ಷಿಸುತ್ತದೆ
  • ಕೊನೆಗೆ ನೀವು ಅರ್ಹರಾಗಿದ್ದೀರಾ ಕಂಗ್ರಾಜುಲೇಷನ್ಸ್ ಅನ್ನುವ ಮೆಸೇಜ್ ಬರುತ್ತದೆ
  • ಈ ರೀತಿ ನೀವು ಪೇ ಲೇಟರ್ (Flipkart Pay later Loan)  option ಅನ್ನು ಆಕ್ಟಿವೇಟ್ ಮಾಡಿಕೊಂಡ ನಂತರ ನಿಮಗೆ ಒಂದು ಲಿಮಿಟ್ ತೋರಿಸುತ್ತಾರೆ ಅಂದರೆ ಐದು ಸಾವಿರ ಎಂದು ತೋರಿಸಿದರೆ ಐದು ಸಾವಿರದ ಒಳಗೆ ನೀವು ಖರೀದಿ ಮಾಡಿ ಮತ್ತೆ ಹಣವನ್ನು ತುಂಬಬಹುದು
  • ಇದರ ನಂತರ ನೀವು ಏನನ್ನೇ ಖರೀದಿಸಿದರು ಖರೀದಿಸಿ ಪೆ ಮಾಡುವಾಗ ಪೇ (Pay) ಆಪ್ಷನ್ ಕಾಣಲು ಶುರುವಾಗುತ್ತದೆ ಅಲ್ಲಿ ನೀವು ಅದಕ್ಕೆ ಕ್ಲಿಕ್ ಕೊಟ್ಟಾಗ ನಿಮಗೆ ಆ ವಸ್ತು ಕೂಡಲೇ ಹಣ ಕೊಡದೆ ಅಂದ್ರೆ ಉದ್ರಿಯಾಗಿ ನಿಮಗೆ ಸಿಗುತ್ತೆ.

ಇಷ್ಟೆಲ್ಲಾ ವಿವರವಾಗಿ ವಿವರಿಸಿದ್ದರಿಂದ (Flipkart Pay later Loan) ಬಗ್ಗೆ   ನಿಮಗೆಲ್ಲ ಅರ್ಥವಾಗಿದೆ ಎಂದ್ ಭಾವಿಸುತ್ತೇವೆ.  ನಿಮಗೆ ನಿಮ್ಮ ವ್ಯವಹಾರಕ್ಕೆ ಈ ಲೇಖನ ಪ್ರಯೋಜನ ಆಗಿರಬಹುದು ಎಂದು ನಂಬಿದ್ದೇವೆ.

Comments are closed.