How to get Personal Loan: ಯಾವ ಸಂದರ್ಭದಲ್ಲಿ ವಯಕ್ತಿಕ ಸಾಲವನ್ನು ಬ್ಯಾಂಕ್ ನೀಡುತ್ತೆ ಗೊತ್ತಾ? ಅತಿ ಕಡಿಮೆ ಬಡ್ದಿದರಕ್ಕೆ ವಯಕ್ತಿಕ ಸಾಲ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ವಿವರ!

How to get Personal Loan: ಒಂದುದೃಷ್ಟಿಯಲ್ಲಿ ನೋಡಿದರೆ ಇವತ್ತಿನ ಕಾಲ ಪರ್ಸನಲ್ ಲೋನ್ಗಳ ಕಾಲ. ಏನಾದರೂ ದುಡ್ಡಿನ ಅವಶ್ಯಕತೆ ಬಂದರೆ ಸಂಬಂಧಿಕರಲ್ಲಾಗಲಿ ಸ್ನೇಹಿತರಲ್ಲಾಗಲಿ ಕೇಳುವ ಪ್ರಸಂಗಗಳು ತುಂಬಾ ಕಡಿಮೆ. ಹಣದ ಅಗತ್ಯ ಬಿದ್ದಾಗ ನಮ್ಮ ನೆರವಿಗೆ ಬರುವುದೇ Personal Loan ಗಳು!

Do you know How to get Personal Loan in banks, here are the details.

ಸ್ನೇಹಿತರಲ್ಲಿ ಅಥವಾ ಸಂಬಂಧಿಕರಲ್ಲಿ 2020ರ ಕೋವಿಡ್ ನಂತರ ಕೇಳುವುದು ಸಹ ಕಷ್ಟ. ಯಾಕೆಂದರೆ ಅವರ ಪರಿಸ್ಥಿತಿ ಕೂಡ ಹಾಗೆ ಇದೆ. ಕೆಲವರು ಕೆಲಸ ಕಳೆದುಕೊಂಡಿದ್ದಾರೆ ಕೆಲವರಿಗೆ ಪ್ಲೇಸ್ಮೆಂಟ್ ಆಗಿದೆ ಎಂದಾದರೂ ಮತ್ತೊಬ್ಬರಿಗೆ ಸಹಾಯ ಮಾಡುವಷ್ಟು ಸಂಬಳದ ಗಳಿಕೆ ಇಲ್ಲ.

ಇನ್ನು ಯಾರಾದರೂ ಸಂಬಂಧಿಕರು ಸಣ್ಣ ಉದ್ಯೋಗ ಮಾಡಿಕೊಂಡಿದ್ದರೆ ಅದು ಸಹ ಮನಿ ಡಿಮೋನಿಟೈಸ್ (Money demonetarization) ಆದ ನಂತರ ಚೆನ್ನಾಗಿ ನಡೆಯುತ್ತಿಲ್ಲ. ಹಾಗಾಗಿ ಯಾರಲ್ಲಿ ಹೇಗೆ ಕೇಳುವುದು ಎಂಬ ಪ್ರಶ್ನೆ ಒಂದು ಕಡೆಯಾದರೆ ನಿಜವಾಗಿ ಸಹಾಯ ಮಾಡಬೇಕು ಅಂತ ಅವರ ಮನಸ್ಸಲ್ಲಿದರು ಸಹಾಯ ಮಾಡಲಿಕ್ಕಾಗದ ಸ್ಥಿತಿಯಲ್ಲಿ ಅವರು ಇದ್ದಾರೆ. ಹಾಗಾಗಿ ಬ್ಯಾಂಕುಗಳು ಹಾಗೂ ವಿವಿಧ ಆರ್ಥಿಕ ಸಂಸ್ಥೆಗಳ ಪರ್ಸನಲ್ ಲೋನ್ (How to get Personal Loan) ಗೆ ಮೊರೆ ಹೋಗದೆ ಬೇರೆ ಉಪಾಯವಿಲ್ಲ.

ತಲೆಬಿಸಿ ಮಾಡ್ಕೊಳ್ಳೋದೇ ಬೇಡ, ಇಷ್ಟು ಮಾಡಿದ್ರೆ ಸಾಕು, ಕುಳಿತಲ್ಲೇ ವಯಕ್ತಿಕ ಸಾಲಕ್ಕೆ ಅಪ್ರೋವಲ್ ಸಿಕ್ಕಿಬಿಡುತ್ತೆ, ಕ್ಷಣದಲ್ಲಿ ಖಾತೆಗೆ ಹಣ ಜಮಾ ಆಗುತ್ತೆ!

ಪರ್ಸನಲ್ ಲೋನ್ (How to get Personal Loan) ಗಳನ್ನು ತೆಗೆದುಕೊಳ್ಳುವಾಗ ತುಂಬಾ ಯೋಚಿಸಬೇಕು ತೀರ ಅವಶ್ಯಕತೆ ಎನ್ನುವ ಸಂದರ್ಭಗಳಲ್ಲಿ ಮಾತ್ರ ಪರ್ಸನಲ್ ಲೋನ್ ತೆಗೆದುಕೊಳ್ಳಬೇಕು. ಹೇಗೂ ಫ್ರಿ ಅಪ್ಪ್ರೋವ್ಡ್ ಲೋನ್ (Pre Approved Loan) ಇದೆಯಲ್ಲ ಅಂತ ತೆಗೆದುಕೊಳ್ಳಲು ಹೋಗಬಾರದು.

ಹಾಗಾದರೆ ಯಾವ ಸಂದರ್ಭದಲ್ಲಿ ಪರ್ಸನಲ್ ತೆಗೆದುಕೊಳ್ಳಬಹುದು ನೋಡೋಣ ಬನ್ನಿ

  1. ನಮ್ಮ ಮನೆಯಲ್ಲಿ ನಮ್ಮ ಅಣ್ಣ ತಮ್ಮಂದಿರು ಯಾರಾದರೂ ಡಿಗ್ರಿ ಮುಗಿಸಿ ಯಾವ ಕೆಲಸನು ಸಿಗದೇ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದವರಿಗೆ ಸಹಾಯ ಮಾಡಲು ಪರ್ಸನಲ್ ಲೋನ್ ತೆಗೆಯಬಹುದು. ಅಂದರೆ ತಮ್ಮ ಡಿಗ್ರಿ ಮುಗಿಸಿ ಯಾವುದಾದರೂ ಒಂದು ಕೆಲಸವನ್ನು ಅದು ಮೆಕ್ಯಾನಿಕ್ ಕೆಲಸ ಇರಬಹುದು ಅಥವಾ ಸಣ್ಣಪುಟ್ಟ ರಿಪೇರಿಗಳ ಕೆಲಸ ಇರಬಹುದು ಇಲ್ಲ ಚಿನ್ನದ ಕೆಲಸ ಕಲಿತಿರುವುದು, ಹೀಗೆ ಏನಾದರೂ ಕಲಿತು ಸ್ವಂತ ಉದ್ಯೋಗ ಮಾಡಬೇಕು ಅಂತ ಯೋಚಿಸಿ ಇದಕ್ಕೆ ಅಣ್ಣ ಹೇಗೂ ಉದ್ಯೋಗದಲ್ಲಿ ಇದ್ದಾನೆ ಅವನು ಸಹಾಯ ಮಾಡಬಹುದು ಅಂತ ಅಪೇಕ್ಷೆ ಇಟ್ಟುಕೊಂಡಿರುತ್ತಾರೆ.

ಅಂತಹ ಸಂದರ್ಭದಲ್ಲಿ ಅಣ್ಣನ ದುಡಿಮೆ ತಮ್ಮನಿಗೆ ಸಹಾಯ ಮಾಡುವಷ್ಟು ಇರುವುದಿಲ್ಲ ಎಂದು ನೇರವಾಗಿ ತಮ್ಮನ ಬಳಿ ಹೇಳಲಾಗುವುದಿಲ್ಲ. ಎಂದರೆ ಅಣ್ಣ ಕೊಡುತ್ತಾನೆ ಎಂಬ ಭರವಸೆಯಲ್ಲಿ ತಮ್ಮ ಕೇಳಿರುತ್ತಾನೆ. ಈಗ ತಮ್ಮನಿಗೆ ಸಹಾಯ ಮಾಡುವುದು ಅಣ್ಣನ ಕರ್ತವ್ಯವಾಗಿರುತ್ತದೆ ಹಾಗಾಗಿ ಇಂತಹ ಸಮಯದಲ್ಲಿ ತಮ್ಮನಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಎರಡು ಮೂರು ಲಕ್ಷ ಪರ್ಸನಲ್ ಲೋನ್ ತೆಗೆದು ಅವನಿಗೆ ಸಹಾಯ ಮಾಡಿ ತಮ್ಮನ ಜೀವನಕ್ಕೆ ದಾರಿ ತೋರಿಸಿ ಕೊಡಬಹುದು.

  • ಇನ್ನೊಂದು ಸಂದರ್ಭಗಳಲ್ಲಿ ನಮ್ಮ ಸಂಬಂಧಿಕರು ಅಥವಾ ಆತ್ಮೀಯ ಸ್ನೇಹಿತರು ಯಾರಾದರೂ ಒಂದು ಬಿಸಿನೆಸ್ ಹಾಕಬೇಕು ಅಂತ ಯೋಚಿಸಿರುತ್ತಾರೆ. ಯೋಜನೆ ತುಂಬಾ ಒಳ್ಳೆಯದಾಗಿರುತ್ತದೆ ಹಾಗೂ ಲಾಭದಾಯಕವಾಗಿರುವ ಎಲ್ಲಾ ಲಕ್ಷಣಗಳು ಇರುತ್ತವೆ. ಆದರೆ ಅವರಲ್ಲಿ ಬೇಕಾದ ಹಣದ ಪೂರ್ಣ ಪ್ರಮಾಣ ಇರುವುದಿಲ್ಲ ಹಾಗಾಗಿ ಅವರು ಇನ್ನೊಬ್ಬರನ್ನು ಪಾರ್ಟ್ನರ್ ಅಂತ ತೆಗೆದುಕೊಂಡು ಇನ್ವೆಸ್ಟ್ಮೆಂಟ್ ಅಪೇಕ್ಷಿಸುತ್ತಾರೆ ಅಂತಹ ಸಂದರ್ಭದಲ್ಲಿ ನಾವು ಗಳಿಸುತ್ತಿರುವ ಆದಾಯಕ್ಕೆ ಹೆಚ್ಚುವರಿಯಾಗಿ ಇಂಥದೊಂದು ಆದಾಯ ಸಿಕ್ಕಿದರೆ ಒಳ್ಳೆಯದು ಎಂಬ ಕಾರಣಕ್ಕೆ ಪರ್ಸನಲ್ ಲೋನ್ (How to get Personal Loan)  ತೆಗೆದು ಹಾಕೋದು.

 ಹೊಸದಾಗಿ ಪ್ರಾರಂಭವಾದ ವ್ಯಾಪಾರದಿಂದ ಬರುವ ಲಾಭವನ್ನು ಶುರುವಿನ ಕೆಲವು ವರ್ಷಗಳಲ್ಲಿ ಪರ್ಸನಲ್ ಕಂತುಗಳನ್ನು ತುಂಬಲು ವಿನಯೋಗಿಸಬಹುದು. ಕಂತುಗಳು ಪೂರ್ತಿ ಮರುಪಾವತಿಯಾದಾಗ ಅಲ್ಲಿಂದ ಬರುವ ಲಾಭದ ಗಳಿಗೆ ನಮ್ಮಗಳಿಕೆ ಆಗುತ್ತದೆ.

  • ಕೆಲವು ಸಲ ಚಿನ್ನದ ರೇಟು ತುಂಬಾ ಖುಷಿಯುತ್ತದೆ ಯಾವುದೇ ಅಂತರಾಷ್ಟ್ರೀಯ ಕಾರಣಗಳಿಂದ ಹೀಗಾಗುತ್ತದೆ. ಆಗ ಕಡಿಮೆ ಬೆಲೆಯ ಚಿನ್ನ ಖರೀದಿಸಿದರೆ ಮುಂದೊಂದು ದಿನ ಇದರ ಬೆಲೆ ತುಂಬಾ ಮೇಲಿರುತ್ತದೆ ಎಂದು ಭರವಸೆ ಇದ್ದಾಗ 24 ಕ್ಯಾರೆಟ್ ಚಿನ್ನವನ್ನು ಖರೀದಿಸಲು ಪರ್ಸನಲ್ ಲೋನ್ ಮಾಡಬಹುದು.
  • ಇನ್ನು ಪಟ್ಟಣಗಳಲ್ಲಿ ಉದ್ಯೋಗ ಬದಲಾವಣೆ ಮಾಡಿದಾಗ ಉದ್ಯೋಗ ಬದಲಾಯಿಸಿದವರು ತಮ್ಮ ಮನೆಗೆ ಬೇಕಾದ ಫರ್ನಿಚರ್ ಅಥವಾ ಟಿವಿ ಅಲ್ ಮೇರಾಸ್ ವಾಷಿಂಗ್ ಮಷೀನ್ ಇಂತಹ ಹಲವು ವಸ್ತುಗಳನ್ನು ಕಡಿಮೆ ದರಕ್ಕೆ ಮಾರಿ ಹೋಗುವವರು ಇರುತ್ತಾರೆ. ಅಂತಹ ಸಂದರ್ಭದಲ್ಲಿ ಆ ವಸ್ತುಗಳನ್ನೆಲ್ಲ ಖರೀದಿಸಲು ಪರ್ಸನಲ್ ಸಾಲ (How to get Personal Loan) ವನ್ನು ತೆಗೆಯಬಹುದು.
  • ಶೇರು ಮಾರುಕಟ್ಟೆಯಲ್ಲಿ ಒಳ್ಳೆ ಅನುಭವ ಉಳ್ಳವರು ಅಂತಾದರೆ ಕೆಲವು ಸಲ ಮಾರ್ಕೆಟ್ ಬಿದ್ದು ಹೋದಾಗ ಒಳ್ಳೊಳ್ಳೆ ಶೇರುಗಳು ಕಡಿಮೆ ಬೆಲೆಗೆ ಸಿಗುತ್ತದೆ ಅಂತ ಸಂದರ್ಭದಲ್ಲಿ ಶೇರುಗಳ ಮೇಲೆ ಹೂಡಿಕೆಗಾಗಿ ಪರ್ಸನಲ್ ಲೋನ್ ಬಳಸಬಹುದು.
  • ಇನ್ನು ಕೆಲವು ಸಲ ಯಾರಾದರೂ ಅವರ ಆರ್ಥಿಕ ಸಂಕಷ್ಟಕ್ಕೆ ತಮ್ಮಲ್ಲಿದ್ದ ಚಿನ್ನದ ಒಡವೆಗಳನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬರುತ್ತಾರೆ ಅಂತ ಸಂದರ್ಭಗಳಲ್ಲಿ ಆ ಒಡವೆಗಳನ್ನು ಖರೀದಿಸಲು ಪರ್ಸನಲ್ ಸಾಲವನ್ನು ಬಳಸಿಕೊಳ್ಳಬಹುದು.
  • ವಿದೇಶದಲ್ಲಿ ಉದ್ಯೋಗ ಸಿಕ್ಕಿದವರು ಇಲ್ಲಿ ನಮ್ಮ ದೇಶದಲ್ಲಿ ಇರುವ ಸೈಟನ್ನು ಸ್ವಲ್ಪ ಕಡಿಮೆ ಬೆಲೆಗಾದರೂ ನಮ್ಮ ಪರಿಚಯದವರಿಗೆ ಕೊಡಬೇಕು ಎಂಬ ಧೋರಣೆಯಲ್ಲಿ ಇರುತ್ತಾರೆ ಅಂತಹ ಯಾವುದಾದರೂ ಸೈಟ್ ಖರೀದಿಸುವುದಿದ್ದರೆ ಮಾರ್ಕೆಟ್ ಪ್ರೈಸ್ಗಿಂತ ಸ್ವಲ್ಪ ಕಡಿಮೆಗೆ ಸಿಗುತ್ತದೆ ಅಂತ ಸಂದರ್ಭ ದಲ್ಲಿ ಒಂದು ಇನ್ವೆಸ್ಟ್ಮೆಂಟ್ ಅಂತ ಆ ಜಾಗ ಖರೀದಿಸಲು ಪರ್ಸನಲ್ ಲೋನ್ ತೆಗೆದುಕೊಳ್ಳಬಹುದು.

ವಯಕ್ತಿಕ ಸಾಲ ಪಡೆಯುವುದು ಹೇಗೆ? (How to get Personal Loan)  

ಯಾವ ಯಾವ ಸಂದರ್ಭದಲ್ಲಿ ವಯಕ್ತಿಕ ಸಾಲ ಬೇಕಾಗುತ್ತದೆ ಎನ್ನುವುದನ್ನು ನೋಡಿದಿರಿ. ಈಗ ವಯಕ್ತಿಕ ಸಾಲ ಹೆಗೆ ಪಡೆಯಬಹುದು ನೋಡೋಣ.

ವಯಕ್ತಿಕ ಸಾಲವನ್ನು ಬೇರೆ ಬೇರೆ ಬ್ಯಾಂಕ್ ಗಳು ಹಣಕಾಸು ಸಂಸ್ಥೆಗಳು ಒದಗಿಸುತ್ತವೆ. ನೀವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಬ್ಯಾಂಕ್ ಗಳಲ್ಲಿ ಸಾಲ ಪಡೆಯಬಹುದು. ಅಷ್ಟೇ ಅಲ್ಲ, ವಯಕ್ತಿಕ ಸಾಲ ತೆಗೆದುಕೊಳ್ಳುವಾಗ ಮುಖ್ಯವಾಗಿ ವ್ಯಕ್ತಿ ಉದ್ಯೋಗದಲ್ಲಿದ್ದಾನೆಯೇ, ಸ್ವಂತ ಉದ್ಯಮ ಮಾಡುತ್ತಿದ್ದಾನೆಯೇ ಎಂದು ನೋಡುತ್ತಾರೆ. ಬಳಿಕ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಸುಲಭವಾಗಿ ಸಾಲ ಮಂಜೂರು ಮಾಡಲಾಗುತ್ತದೆ.

ವಯಕ್ತಿಕ ಸಾಲ ಪಡೆಯಲು ಬೇಕಾಗಿರುವ ದಾಖಲೆಗಳು (Documents to get Personal Loan)  

ಇತ್ತೀಚಿಗೆ ಬ್ಯಾಂಕ್ ಗಳಲ್ಲಿ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ರೆ ಯಾವುದೇ ಅಡಮಾನ, ಜಾಮೀನು ಪಡೇದುಕೊಳ್ಳದೇ ಸಾಲ ನೀಡಲಾಗುತ್ತದೆ. ಬಡ್ಡಿದರವೂ 8% – 38% ವರೆಗೂ ಇರುತ್ತದೆ. ನೀವು ಉದ್ಯೋಗಿ ಆಗಿದ್ದರೆ ನಿಮ್ಮ ಬ್ಬ್ಯಾಂಕ್ ಸ್ಟೇಟ್ ಮೆಂಟ್, ಸ್ಯಾಲರಿ ಸ್ಲಿಪ್, ಆಧಾರ್ ಕಾರ್ಡ್ ಮೊದಲಾದ ಬೇಸಿಕ್ ಮಾಹಿತಿ ನೀಡಿ ಸಾಲ ಪಡೆಯಬಹುದು. ಈಗಂತೂ ವಯಕ್ತಿಕ ಸಾಲವನ್ನು ಕ್ಷಣಮಾತ್ರದಲ್ಲಿ ಮೊಬೈಲ್ ಮೂಲಕ ಬ್ಯಾಂಕಿಂಗ್ ಆಪ್ ಗಳನ್ನು ಬಳಸಿಕೊಂಡು ಪಡೆಯಬಹುದು. ಕೆನರಾ ಬ್ಯಾಂಕ್, ICICI Bank, HDFC bank, BOB bank ಹೀಗೆ ಮೊದಲಾದ ಬ್ಯಾಂಕ್ ಗಳ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ಪಡೆಯಬಹುದು.

Comments are closed.