Quick Loan: ಸುಲಭವಾಗಿ ಸಾಲ ಬೇಕಾ? ಹಾಗಾದ್ರೆ ಯಾವುದೇ ಚಿಂತೆ ಇಲ್ಲದೇ, ನಿಮ್ಮ ಖಾತೆಗೆ ವರ್ಗಾವಣೆ ಆಗತ್ತೆ ನೋಡಿ ಹಣ; ಇಷ್ಟು ಮಾಡಿ ಸಾಕು!

Quick Loan: ಉತ್ತಮವಾದ, ಉನ್ನತ ವಿದ್ಯಾಭ್ಯಾಸವನ್ನು ಮಾಡಲು ನೀವು ಬಯಸಿದರೆ, ಆರ್ಥಿಕವಾಗಿ ನಮ್ಮ ಬಳಿ ಹಣ ಹೊಂದಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಇನ್ನು ಹಿಂದೇಟು ಹಾಕುವ ಅಗತ್ಯವಿಲ್ಲ. ಯಾಖಂದ್ರೆ ನೀವು ಬ್ಯಾಂಕ್ ನಿಂದ ಸುಲಭವಾಗಿ Quick Loan ಪಡೆಯಬಹುದು. ಯಾವ ಬ್ಯಾಂಕ್ ನಲ್ಲಿ, ಎಷ್ಟು ಹಣ ಪಡೆಯಬಹುದು ಗೊತ್ತಾ?  ಐಸಿಐಸಿಐ ಬ್ಯಾಂಕಿನ ಐ ಸ್ಮಾರ್ಟ್ ಶಿಕ್ಷಣ ಸಾಲ (E-Smart education Quick Loan) ದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

How to get I smart Quick Loan by ICICI bank, Here are the Details.

ಐಸಿಐಸಿಐ ಬ್ಯಾಂಕ್ (ICICI bank) ಭಾರತದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಲ್ಪಡುತ್ತದೆ. ಈ ಬ್ಯಾಂಕಿನ ವಿಸ್ತಾರ ಎಷ್ಟಿದೆ ಅಂದರೆ 5275 ಇದಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿದೆ 15,589 ಎಟಿಎಂ (ATM) ಗಳನ್ನು ಹೊಂದಿದೆ ಅಷ್ಟು ಮಾತ್ರ ಅಲ್ಲ 17 ದೇಶಗಳಲ್ಲಿ ವ್ಯಾಪಿಸಿರುವಂತ ಐಸಿಐಸಿಐ ಬ್ಯಾಂಕ್ ಜಗತ್ತಿನ ಎಲ್ಲೇ ಇದ್ದರು ತಮ್ಮ ಗ್ರಾಹಕರಿಗಾಗಿ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತದೆ.

ಇದು ಗೊತ್ತಾ? ನಿಮಗೆ ತುರ್ತು ಹಣದ ಅಗತ್ಯ ಇದೆಯಾ? ಹಾಗಾದ್ರೆ ಐಡಿಎಫ್ಸಿ -ಫಸ್ಟ್ ನಿಂದ ತ್ವರಿತವಾಗಿ ಸಾಲ ಪಡೆದುಕೊಳ್ಳಿ! ಇಲ್ಲಿದೆ ಸಂಪೂರ್ಣ ವಿವರ

ಐಸಿಐಸಿಐ ಬ್ಯಾಂಕ್ ನೊಂದಿಗೆ ಒಳ್ಳೆ ಪ್ರೊಫೆಷನಲ್ ಟೀಮ್ (Professional team) ಇದೆ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಹೇಗೆ ಸಹಾಯ ಮಾಡಬಹುದು ಹೇಗೆ ಒಳ್ಳೆ ಸರ್ವಿಸ್ ಕೊಡಬಹುದು ಎಂಬ ಬಗ್ಗೆ ಯಾವಾಗಲೂ ಚಿಂತಿಸುತ್ತಿರುವ ಅಪರೂಪದ ಬ್ಯಾಂಕುಗಳಲ್ಲಿ ಐಸಿಐಸಿಐ ಬ್ಯಾಂಕ್ ಕೂಡ ಒಂದು.

ಶೀರ್ಘ ಶಿಕ್ಷಣ ಸಾಲ (Quick Loan for education)

ಉನ್ನತ ಶಿಕ್ಷಣದ ಅನಿವಾರ್ಯತೆ ಮತ್ತು ಅಗತ್ಯವನ್ನು ಗಮನಿಸಿ ಜಗತ್ತಿನಾದ್ಯಂತ ನೀಡಲಾಗುವ ಬೇರೆ ಬೇರೆ ಕೋರ್ಸ್ ಗಳನ್ನು ಮಾಡಲು ಸಹಾಯಕ್ಕಾಗಿ ಈ ಬ್ಯಾಂಕ್ (Bank) ಮುಂದೆ ಬಂದಿದೆ ಸಹಾಯ ಅಂದರೆ ಸಾಲದ ಮುಖಾಂತರ ಸಹಾಯ ಮಾಡಿ ವಿದ್ಯಾರ್ಥಿಗಳ (Students) ಆಶ್ವತರಗಳನ್ನು ಈಡೇರಿಸಿ ತಮ್ಮ ತಮ್ಮ ವೃತ್ತಿಯನ್ನು ಒಳ್ಳೆ ರೀತಿಯಲ್ಲಿ ಪ್ರಾರಂಭಿಸಲು ಸಹಾಯವಾಗುವ ನಿಟ್ಟಿನಲ್ಲಿ ವಿದ್ಯಾಭ್ಯಾಸದ ಯೋಜನೆಯನ್ನು ಐಸ್ಮಾರ್ಟ (I smart Quick Loan) ಎಂಬ ಹೆಸರಿನಿಂದ ಪರಿಚಯಿಸಿದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ, ಶೀರ್ಘ ಸಾಲ (Quick Loan)

ಜಗತ್ತಿನ ದೊಡ್ಡ ದೊಡ್ಡ ವಿದ್ಯಾ ಸಂಸ್ಥೆಗಳಲ್ಲಿ ಅಧ್ಯಯನ ಮಾಡಬೇಕೆಂದು ಇಚ್ಛಿಸುವ ಪ್ರತಿಭಾವಂತರಿಗೆ ಐಸಿಐಸಿಐ ಬ್ಯಾಂಕ್ ಯೋಜನೆ ಮೂಲಕ 2 ಕೋಟಿ ರೂಪಾಯಿ ವರೆಗೆ ಶಿಕ್ಷಣ ಸಾಲವನ್ನು ನೀಡುತ್ತದೆ ಕೆನಡಾ ಅಥವಾ ಯುನೈಟೆಡ್ ಕಿಂಗ್ಡಮ್ (UK) ಅಂತ ದೇಶಗಳಲ್ಲಿ ಅಂತರರಾಷ್ಟ್ರೀಯ ಉಳಿತಾಯ ಖಾತೆಯ ಪ್ರಯೋಜನವನ್ನು ನೀಡುತ್ತದೆ ಹಾಗೂ ಕೆಲವು ಸಂದರ್ಭಗಳಲ್ಲಿ 80 ಈ ಸೆಕ್ಷನ್ ನಲ್ಲಿ ಟ್ಯಾಕ್ಸ್ ಬೆನಿಫಿಟ್ಸ್ (tax Benefits) ನೀಡುತ್ತದೆ.

 • ನಿಮಗೆ ವಿದೇಶದಲ್ಲಿ ಕಲಿಯುವ ಕನಸಿದ್ದರೆ ಐಸಿಐಸಿಐ ಬ್ಯಾಂಕಿನ ಐಸ್ಮಾರ್ಟ್ ಯೋಜನೆಯಡಿ ಕನಸನ್ನು ಸಾಕ್ಷಾತ್ಕರಿಸಿಕೊಳ್ಳಿ
 • ಸಾಲದ ಮರುಪಾವತಿ ಅವಧಿ 15 ವರ್ಷಗಳು
 • ನೀವು ವಿದ್ಯಾರ್ಥಿಯಾಗಿ ಎಷ್ಟು ಶೈಕ್ಷಣಿಕ ವರ್ಷಗಳಲ್ಲಿ ಇದ್ದೀರಿ ಎಂಬುದು ಇಲ್ಲಿ ಪರಿಗಣಿತವಾಗುವುದಿಲ್ಲ
 • ಐಸಿಐಸಿಐ ಬ್ಯಾಂಕ್ ಆರು ತಿಂಗಳು ಹೆಚ್ಚುವರಿ ಅವಧಿಯನ್ನು ಸಾಲ ಮರುಪಾವತಿಗಾಗಿ ನಿಮ್ಮ ಕೋರ್ಸ್ ಮುಗಿದ ನಂತರವೂ ಕೊಡಬರೋದು

ವಿದೇಶಿ ಶಿಕ್ಷಣ ಖರ್ಚು ವೆಚ್ಚಗಳಿಗಾಗಿ ಸಾಲ (Quick Loan for education expenses)

ಅಂತರರಾಷ್ಟ್ರೀಯ ವಿದ್ಯಾಭ್ಯಾಸ ಪಡೆಯುವವರು ಯಾವೆಲ್ಲ ಖರ್ಚುಗಳನ್ನು ಸಾಲರೂಪವಾಗಿ ಪಡೆಯಬಹುದು ಅಂದರೆ ಪೋಸ್ಟ್ ಗ್ರಾಜುಯೇಷನ್ ಡಿಗ್ರಿ (Post Graduation)  ಡಿಪ್ಲೋಮಾ (Diploma) ಇನ್ಯಾವುದೇ ಪ್ರೊಫೆಷನಲ್ ಕೊರ್ಸಸ್ ಹೆಸರುವಾಸಿಯಾದ ವಿದ್ಯಾಸಂಸ್ಥೆಗಳಲ್ಲಿ ಪಡೆಯುವುದಾದರೆ ಅಂದರೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಜರ್ಮನಿ ಮತ್ತು ಇತರ ದೇಶಗಳಲ್ಲಿ ವಿದ್ಯಾಭ್ಯಾಸ ಪಡೆಯುವುದಾದರೆ ನೀವು ವಿದ್ಯಾಭ್ಯಾಸಕ್ಕಾಗಿ ಕೊಡುವ ಶುಲ್ಕ ಅಂದರೆ ಟ್ಯೂಷನ್ ಫೀಸ್ ಇತ್ಯಾದಿ ಮತ್ತು ಹಾಸ್ಟೆಲ್ ಖರ್ಚು ಪರೀಕ್ಷೆಗಳಿಗಾಗಿ ಕಟ್ಟಬೇಕಾದ ಫಿಸು ಲೈಬ್ರರಿ ಮತ್ತು ಲೈಬ್ರೆಟರಿ ಫೀಸ್ ಗಳಿಗಾಗಿ ಸಾಲ ಪಡೆಯಬಹುದು

 • ಅಂತೆಯೇ ಪ್ರಯಾಣದ ಖರ್ಚು ಇದನ್ನು ಕೂಡ ವಿದೇಶದಲ್ಲಿ ಕಲಿಯುವ ವಿದ್ಯಾರ್ಥಿಗಳು ಪಡೆಯಬಹುದು
 • ಇನ್ಸೂರೆನ್ಸ್ ಪ್ರೀಮಿಯಂ ಇದು ಕೂಡ ಸಾಲದಲ್ಲಿ ಸೇರಿರುತ್ತದೆ.
 • ಯಾವುದಾದರೂ ಬಿಲ್ಡಿಂಗ್ ಫನ್ಡ್ ಅಥವಾ ವಿದ್ಯಾರ್ಥಿ ಕಲಿತು ಆಗುವವರೆಗೆ ಭದ್ರತಾ ಫಂಡ್ ಅಂತ ಇಟ್ಟುಕೊಳ್ಳುದಿದ್ದರೆ ಅಂದರೆ ಈ ಫಂಡು ವಿದ್ಯಾಭ್ಯಾಸ ಮುಗಿಸಿ ಹಿಂದೆ ಬರುವಾಗ ವಾಪಸ್ ಸಿಗುವಂತ ಫಂಡ್ಗೆ ಸಾಲ ಸಿಗುತ್ತದೆ
 • ಪುಸ್ತಕವನ್ನು ಖರೀದಿಸಲು ಉಪಕರಣ ಖರೀದಿಸಲು ಯೂನಿಫಾರ್ಮ್ಗಾಗಿ ಹೀಗೆ ಏನಾದರೂ ಖರ್ಚು ಇದ್ದರೂ ಬ್ಯಾಂಕು ಸಾಲ ನೀಡುತ್ತದೆ
 • ಲ್ಯಾಪ್ಟಾಪ್ ಖರೀದಿಸಲು ಸಹ ಸಾಲವನ್ನು ನೀಡುತ್ತದೆ

ಐಸಿಐಸಿಐ ಬ್ಯಾಂಕಿನಲ್ಲಿ ಎಷ್ಟರಮಟ್ಟಿಗೆ ತನ್ನ ಗ್ರಾಹಕರ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ ಎಂದರೆ ತನ್ನ ಉತ್ತಮವಾದ ಗ್ರಾಹಕರಿಗೆ ಎಜುಕೇಶನ್ಗಾಗಿ ಪ್ರೀ ಆಪ್ರೌಡ್ ಸಾಲವನ್ನು ನೀಡುತ್ತಾರೆ ಹೀಗೆ ದೊಡ್ಡ ದೊಡ್ಡ ಒಳ್ಳೆಯ ಬ್ಯಾಂಕಿನೊಂದಿಗೆ ಸರಿಯಾದ ವ್ಯವಹಾರ ಮಾಡುತ್ತಿರುವ ಕಸ್ಟಮರ್ಗಳಿಗೆ ಇಂಥ ಒಂದು ಆಕರ್ಷಕ ಸಾಲ ಯೋಜನೆಯನ್ನು ಐಸಿಐಸಿಐ ಬ್ಯಾಂಕು ಕೊಟ್ಟಿದೆ.

ಇಂತಹ ಸಾಲ ಸೌಲಭ್ಯ ಸಿಕ್ಕಿದವರು ಕೇವಲ ತನ್ನ ಐಸಿಐಸಿಐ ಬ್ಯಾಂಕ್ ಗೆ ಕೆಲವು ಕ್ಲಿಕ್ ಕೊಟ್ಟ ಕೂಡಲೇ ಸಾಲ ಮಂಜೂರಾಗುತ್ತದೆ ಅದಕ್ಕಾಗಿ ಅವರು ಬ್ಯಾಂಕಿನ ಬ್ರಾಂಚ್ ಗೆ ಹೋಗುವುದಾಗಲಿ ಯಾವುದೇ ಹೊಸ ದಾಖಲೆಗಳನ್ನು ನೀಡುವುದಾಗಲಿ ಯಾವುದೇ ಅವಶ್ಯಕತೆ ಇರುವುದಿಲ್ಲ. ಮಾಹಿತಿಗಾಗಿ ಐಸಿಐಸಿಐ ಬ್ಯಾಂಕಿನ ವೆಬ್ಸೈಟ್ (ICICI Bank I smart Quick Loan)  ಗೆ ಹೋಗಿ ಇನ್ನೂ ಹೆಚ್ಚಿನ ವಿವರಣೆಗಳು ಬೇಕಿದ್ದರೆ ಪಡೆದುಕೊಳ್ಳಿ. ಉತ್ತಮ ವಿದ್ಯಾಭ್ಯಾಸ ನಿಮ್ಮದಾಗಿಸಿಕೊಳ್ಳಿ.

ಶೀರ್ಘ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ? (How to apply for Quick Loan)

 • ಇಂತಹ ಬ್ಯಾಂಕ್ ಗ್ರಾಹಕರಿಗೆ ಫ್ರೀ ಅಪ್ಪ್ರೋಡ್ ಲೋನ್ (Pre approved) ಗೆ ಕ್ಲಿಕ್ ಕೊಟ್ಟ ಕೂಡಲೇ ಆನ್ಲೈನ್ ನಲ್ಲಿ ಒಂದು ಎಜುಕೇಶನ್ ಲೋನ್ ಫಾರ್ಮ್ ಕಾಣುತ್ತದೆ ಅದನ್ನು ತುಂಬಿಸಿದರೆ ಆಯ್ತು
 • ಯಾವುದೇ ಹೊಸ ಭದ್ರತೆ ಇಲ್ಲದೆ 50 ಲಕ್ಷದವರೆಗೆ ಸಾಲ ಸಿಗುತ್ತದೆ
 • ಕಡಿಮೆ ಎಂದರೆ ಒಂದು ಲಕ್ಷದಿಂದ ಹೆಚ್ಚೆಂದರೆ ಎರಡು ಕೋಟಿ ವರೆಗೆ ಸಾಲ ಸಿಗುತ್ತದೆ ಆದರೆ ಈ ಎರಡು ಕೋಟಿ ದೇಶದ ಹೊರಗಡೆ ಅಂದರೆ ವಿದೇಶದಲ್ಲಿ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಪ್ರತಿಷ್ಠಿತ ಕೋರ್ಸ್ ಗಳನ್ನು ಮಾಡುವವರಿಗಾಗಿ ಇರುತ್ತದೆ.
 • ಐಸಿಐಸಿಐ ಬ್ಯಾಂಕಿನ ಒಳ್ಳೆಯ ಗ್ರಾಹಕರು ಸಹ ಇಂಟರ್ನೆಟ್ ಬ್ಯಾಂಕಿಂಗ್ (Internet Banking) ನ ಮೂಲಕ ಎಜುಕೇಶನ್ ಪಡೆದುಕೊಳ್ಳಬಹುದು

ಮಾಹಿತಿಗಾಗಿ ಐಸಿಐಸಿಐ ಬ್ಯಾಂಕಿನ ವೆಬ್ಸೈಟ್ (ICICI Bank I smart Quick Loan)  ಗೆ ಹೋಗಿ ಇನ್ನೂ ಹೆಚ್ಚಿನ ವಿವರಣೆಗಳು ಬೇಕಿದ್ದರೆ ಪಡೆದುಕೊಳ್ಳಿ. ಉತ್ತಮ ವಿದ್ಯಾಭ್ಯಾಸ (Education) ನಿಮ್ಮದಾಗಿಸಿಕೊಳ್ಳಿ. ಬ್ಯಾಂಕ್ (Bank) ನಲ್ಲಿ ಸಾಲ ತೆಗೆದುಕೊಳ್ಳುವಾಗ ಟರ್ಮ್ಸ್ ಹಾಗೂ ಕಂಡೀಶನ್ಸ್ ತಿಳಿದುಕೊಳ್ಳಿ.

Comments are closed.