Gold Loan per gram: 10 ಗ್ರಾಂ ಚಿನ್ನದ ಮೇಲೆ ಎಷ್ಟು ಲೋನ್ ಸಿಗುತ್ತೆ ಗೊತ್ತಾ? ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಹಣ!

Gold Loan per gram: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರಬಹುದು. ನಮ್ಮ ಭಾರತ ದೇಶ ಚಿನ್ನವನ್ನು ಆಮದು (Gold Import) ಮಾಡಿಕೊಳ್ಳುವಂತಹ ದೇಶಗಳಲ್ಲಿ ಟಾಪ್ ದೇಶಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಬಹುತೇಕ ಎಲ್ಲರೂ ಕೂಡ ಚಿನ್ನವನ್ನು ನಮ್ಮ ದೇಶದಲ್ಲಿ ಅಲಂಕಾರದ ವಸ್ತುವಾಗಿ ಪ್ರತಿಷ್ಠೆಯ ವಸ್ತುವಾಗಿ ಖರೀದಿಸುತ್ತಾರೆ ಎಂಬುದಾಗಿ ಭಾವಿಸುತ್ತಾರೆ. ಇದು ಸುಳ್ಳಲ್ಲ. ಖಂಡಿತವಾಗಿ ಹಣ ಇರುವಂತಹ ಶ್ರೀಮಂತ ವ್ಯಕ್ತಿಗಳು ಚಿನ್ನವನ್ನು ಅಲಂಕಾರಿಕ ವಸ್ತುವಿನ ರೂಪದಲ್ಲಿ ಖರೀದಿಸುತ್ತಾರೆ. ನಿಜ.

ಆದರೆ ಮಧ್ಯಮ ವರ್ಗದ ಬುದ್ದಿವಂತ ಜನರು ಇವತ್ತು ಚಿನ್ನವನ್ನು ಖರೀದಿಸಿ ಮುಂದಿನ ದಿನಗಳಲ್ಲಿ ಒಂದು ವೇಳೆ ಯಾವುದೇ ರೀತಿ ಅಂತಹ ಆರ್ಥಿಕ ಆಪತ್ತು ಒದಗಿ ಬಂದರೆ ಆ ಸಂದರ್ಭದಲ್ಲಿ ಇದೇ ಚಿನ್ನವನ್ನು ಮಾರಾಟ ಮಾಡಿ ಆ ಸಮಸ್ಯೆಯಿಂದ ಹೊರಬರುವಂತಹ ಕೆಲಸವನ್ನು ಮಾಡುತ್ತಾರೆ. ಸುಲಭವಾಗಿ ಚಿನ್ನದ ಸಾಲ (Gold Loan per gram) ಪಡೆದು ಹೀಗಾಗಿ ಚಿನ್ನ ಎರಡು ರೀತಿಯಲ್ಲಿ ಕೂಡ ಕೆಲಸ ಮಾಡುತ್ತದೆ.

How much Gold Loan per gram you can get by bank, you should know about gold loan.

ಗೋಲ್ಡ್ ಲೋನ್ (Gold Loan per gram) ಅತ್ಯಂತ ಸುರಕ್ಷಿತ ಲೋನ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇದು ಸಂಸ್ಥೆಗಳಿಗೆ ಮಾತ್ರವಲ್ಲದೆ ಗ್ರಾಹಕರಿಗೂ ಕೂಡ ಸುಲಭ ರೂಪದಲ್ಲಿ ಬ್ಯಾಂಕುಗಳ ಮೂಲಕ ಲೋನ್ ಪಡೆದುಕೊಳ್ಳುವುದಕ್ಕೆ ಒಂದು ಮೂಲ ಮಾಧ್ಯಮವಾಗಿದೆ. ಚಿನ್ನವನ್ನು ಗಿರವಿ ಇಡುವ ಮೂಲಕ ಬೇಕಾಗಿರುವಂತಹ ಮೊತ್ತವನ್ನು ಸಾಲ ರೂಪದಲ್ಲಿ ಗ್ರಾಹಕರು ಬ್ಯಾಂಕ್ ಅಥವಾ ಯಾವುದೇ ರೀತಿಯ ಸಂಸ್ಥೆಗಳ ಮೂಲಕ ಪಡೆದುಕೊಳ್ಳುತ್ತಾರೆ.

 ಗೋಲ್ಡ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು (Documents to get Gold Loan per gram)

ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಲವೊಮ್ಮೆ ಚಿನ್ನವನ್ನು ಮಾರಾಟ (Gold sale) ಮಾಡಲು ಅಥವಾ ಚಿನ್ನವನ್ನು ಒಟ್ಟಾರೆಯಾಗಿ ಮಾರಾಟ ಮಾಡಲು ಕೆಲವೊಂದು ದಾಖಲೆ (Documents) ಪತ್ರಗಳು ಕೊಡಬೇಕಾಗಿರುತ್ತದೆ. ಪ್ರಮುಖವಾಗಿ ಪಾನ್ ಕಾರ್ಡ್ (PAN card) ಹಾಗೂ ಆಧಾರ್ ಕಾರ್ಡ್ (Adhaar card) ಗಳನ್ನು ನೀಡಬೇಕಾಗಿರುತ್ತದೆ ಹಾಗೂ ಅದಾದ ನಂತರ ಬೇರೆ ರೀತಿಯ ದಾಖಲೆಗಳ ರೂಪದಲ್ಲಿ ಡ್ರೈವಿಂಗ್ ಲೈಸೆನ್ಸ್ ಅಥವಾ ಯಾವುದೇ ರೀತಿಯ ಸಂಬಂಧ ಪಟ್ಟಂತಹ ದಾಖಲೆ ಪತ್ರಗಳನ್ನು ನೀಡಬೇಕಾಗಿರುತ್ತದೆ.

ಹಣದ ಅಗತ್ಯ ಇರುವಾಗ ಜಾಗ ಮಾರಬೇಡಿ, ಬದಲಿಗೆ ಅದೇ ಜಾಗಕ್ಕೆ ಕೋಟ್ಯಾಂತರ ರೂ. ಸಾಲ ಪಡೆಯಿರಿ, ಕೆಲವೇ ಕ್ಷಣಗಳಲ್ಲಿ ಹಣ ನಿಮ್ಮ ಖಾತೆಗೆ! ಮಾಹಿತಿ ಇಲ್ಲಿದೆ!

ಗೋಲ್ಡ್ ಲೋನ್ ಅನ್ನು ಅಪ್ಲೈ ಮಾಡುವುದು ಹೇಗೆ? (How to Apply Gold Loan per gram)

ಗೋಲ್ಡ್ ಲೋನ್ ಅನ್ನು ಅಪ್ಲೈ ಮಾಡುವುದು ಹೇಗೆ? ಎಂಬುದನ್ನು ನೋಡುವುದಾದರೆ ಆಫ್ಲೈನ್ ಮೂಲಕ ನೀವು ನೇರವಾಗಿ ಬ್ಯಾಂಕಿಗೆ ಹೋಗಿ ಅಲ್ಲಿರುವಂತಹ ಅಧಿಕಾರಿಗಳ ಜೊತೆಗೆ ಈ ಕುರಿತಂತೆ ಚರ್ಚಿಸಿ ಹಾಗೂ ಬೇಕಾಗಿರುವಂತ ದಾಖಲೆಗಳನ್ನು ಸಬ್ಮಿಟ್ (Submit) ಮಾಡುವ ಮೂಲಕ ಚಿನ್ನವನ್ನು ನೀಡಿ ಅದಕ್ಕೆ ಸಮನಾಗಿರುವಂತಹ ಹಣವನ್ನು ಪಡೆದುಕೊಳ್ಳಬಹುದು. ಕೆಲವೊಂದು ಬ್ಯಾಂಕುಗಳಲ್ಲಿ ಆನ್ಲೈನ್ (Online) ಮೂಲಕ ಕೂಡ ಈ ರೀತಿಯ ಪ್ರಕ್ರಿಯೆಗಳನ್ನು ನೀವು ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ.

 ಗೋಲ್ಡ್ ಲೋನ್ ಮೇಲೆ ಎಷ್ಟು ಬಡ್ಡಿ ದರ ಇರುತ್ತೆ? (Rate of Interest for Gold Loan per gram)

ದೇಶದ ಅಥವಾ ರಾಜ್ಯದ ಬೇರೆ ಬೇರೆ ಬ್ಯಾಂಕುಗಳಲ್ಲಿ ಗೋಲ್ಡ್ ಲೋನ್ ಮೇಲೆ ಬಡ್ಡಿದರ ಅವುಗಳದ್ದೇ ಆದ ನಿಯಮಗಳ ರೂಪರೇಶೆ ಅಡಿಯಲ್ಲಿ ಬದಲಾವಣೆ ಆಗಿರುತ್ತದೆ. 2023ರ ಕೊನೆಯಲ್ಲಿ ತಿಳಿದು ಬಂದಿರುವ ಹಾಗೆ ಭಾರತದ ಪ್ರಮುಖ ಬ್ಯಾಂಕ್ ಆಗಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ದ ಪ್ರಕಾರ 8.30 ರಿಂದ 8.60 ಪ್ರತಿಶತ ಬಡಿದರವನ್ನು ವಿಧಿಸಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ಚಿನ್ನದ ಲೋನ್ (Gold Loan per gram) ನೀವು ನೀಡುವಂತಹ ಚಿನ್ನದ ಮೇಲಿನ 75 ಪ್ರತಿಶತ ಹಣವನ್ನು ಮಾತ್ರ ನೀವು ಸಾಲರೂಪದಲ್ಲಿ ಗೋಲ್ಡ್ ಲೋನ್ (Gold Loan) ಮೂಲಕ ಪಡೆದುಕೊಳ್ಳಬಹುದು. ಉದಾಹರಣೆಗೆ ಒಂದು ವೇಳೆ ಹತ್ತು ಗ್ರಾಂ ಚಿನ್ನದ ಬೆಲೆ 40,000 ಆಗಿದ್ರೆ ನಿಮಗೆ ನಿಯಮಗಳ ಅನುಸಾರವಾಗಿ ಆ ಚಿನ್ನದ ಮೇಲೆ ರೂ.30,000ಗಳವರೆಗೆ ಮಾತ್ರ ಲೋನ್ ಸಿಗುತ್ತದೆ. ಹಾಗಿದ್ರೆ ಬನ್ನಿ 10 ಗ್ರಾಂ ಚಿನ್ನಕ್ಕೆ ಎಷ್ಟು ಹಣ ಸಿಗುತ್ತೆ ಅನ್ನೋದನ್ನ ತಿಳಿಯೋಣ.

 10 ಗ್ರಾಂ ಚಿನ್ನದ ಮೇಲಿನ ಗೋಲ್ಡ್ ಲೋನ್ (Gold Loan per gram)

1. 18 ಕ್ಯಾರೆಟ್ ಪರಿಶುದ್ಧತೆಯ ಚಿನ್ನದ ಮೌಲ್ಯ 40,230 ಆಗಿದೆ. ನಿಮಗೆ ಸಿಗುವಂತಹ ಸಾಲ ರೂ. 30, 172.5.

2. 20 ಕ್ಯಾರೆಟ್ ಚಿನ್ನದ ಪರಿಶುದ್ಧತೆಯ ಮೌಲ್ಯ 47,000 ಆಗಿದ್ದು ಗೋಲ್ಡ್ ಲೋನ್ ಮೂಲಕ ನೀವು ಪಡೆದುಕೊಳ್ಳಬಹುದಾದ ಹಣ 35, 250 ಆಗಿದೆ.

3. 22 ಕ್ಯಾರೆಟ್ ಪರಿಶುದ್ಧತೆಯ ಚಿನ್ನದ ಮೌಲ್ಯ 51,750 ಆಗಿದೆ. ಸಾಲ ರೂಪದಲ್ಲಿ ಸಿಗುವಂತಹ ಹಣ 38812.

4. 24 ಕ್ಯಾರೆಟ್ ಪರಿಶುದ್ಧತೆಯ 10 ಗ್ರಾಂ ತೂಕದ ಚಿನ್ನದ ಮೌಲ್ಯ 57,440 ಆಗಿದ್ದು ನಿಮಗೆ ಲೋನ್ ರೂಪದಲ್ಲಿ ಸಿಗುವಂತಹ ಹಣ 43,080 ರೂಪಾಯಿ ಆಗಿರುತ್ತದೆ.

ಬೇರೆ ಬೆರೆ ಬ್ಯಾಂಕ್ ಗಳಲ್ಲಿ ಗೋಲ್ಡ್ ಲೋನ್ (Gold Loan per gram) ಬಡ್ಡಿದರ ಬೇರೆ ಬೇರೆ ರಿತಿಯದ್ದಾಗಿರುತ್ತದೆ. ಹಾಗಾಗಿ ನೀವು ಆನ್ ಲೈನ್ ಮೂಲಕ ಅಥವಾ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿಯನ್ನು ತಿಳಿದುಕೊಂಡು ಲೋನ್ ಪಡೆಯಬಹುದು.

Comments are closed.