Muthoot Finance Personal Loan: ಆಸ್ತಿ ಇದ್ರೆ ಮಾರಾಟ ಮಾಡೋದೇ ಬೇಡ, ಮುತ್ತೂಟ್ ಫೈನಾನ್ಸ್ ನಲ್ಲಿ ಲೋನ್ ಪಡೆದುಕೊಳ್ಳಲು ಬಳಸಿಕೊಳ್ಳಿ; ಹೀಗೆ ಮಾಡಿ!

Muthoot Finance Personal Loan: ನಮಸ್ಕಾರ ಸ್ನೇಹಿತರೆ ಮುತ್ತೂಟ್ ಫೈನಾನ್ಸ್ ಸಂಸ್ಥೆ (Muthoot Finance Personal Loan)  ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಒಂದು NBFC ಅಂದರೆ ನಾನ್ ಬ್ಯಾಂಕಿಂಗ್ ಫೈನಾನ್ಸಿಯಲ್ ಕಂಪನಿ (Non Banking Financial Company) ಯಾಗಿದೆ. ಇನ್ನು ಇಲ್ಲಿ ನೀವು ಸಾಲ ಬೇಕಾದಲ್ಲಿ ನಿಮ್ಮ ಆಸ್ತಿಯನ್ನು ಗಿರವಿ ಇಡುವ ಮೂಲಕ ಕೂಡ ಸಾಲವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ. ಇದನ್ನು ಅತ್ಯಂತ ಸುರಕ್ಷಿತ ಎಂಬುದಾಗಿ ಕೂಡ ಫೈನಾನ್ಸಿಯಲ್ ಭಾಷೆಯಲ್ಲಿ ಕರೆಯಲಾಗುತ್ತದೆ. ಈ ಲೋನ್ (Loan) ಬಗ್ಗೆ ನೀವು ಕೆಲವೊಂದು ಪ್ರಮುಖ ಮಾಹಿತಿಗಳನ್ನು ಕೂಡ ತಿಳಿದುಕೊಳ್ಳಬೇಕಾಗಿರುವುದು ಅಗತ್ಯವಾಗಿದ್ದು ಬನ್ನಿ ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

Muthoot Finance Personal Loan for Property, use this Loan instead of Property sale.  

1. ಪ್ರಮುಖವಾಗಿ ಹಣದ ಬಗ್ಗೆ ಮಾತನಾಡುವುದಾದರೆ ಒಂದು ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 10 ಕೋಟಿ ರೂಪಾಯಿಗಳವರೆಗು ಕೂಡ ನಿಮ್ಮ ಆಸ್ತಿ (Property) ಯ ಮೌಲ್ಯದ ಮೇಲೆ ನಿಮಗೆ ಸಿಗುವಂತಹ ಸಾಲದ ಹಣ ನಿರ್ಧಾರವಾಗಿರುತ್ತದೆ. ಈ ಹಣವನ್ನು ನೀವು ಯಾವುದೇ ರೀತಿಯ ವೈಯಕ್ತಿಕ ಬಳಕೆಗಾಗಿ ಬಳಸಿಕೊಳ್ಳಬಹುದಾಗಿದೆ.

2. 15 ವರ್ಷಗಳವರೆಗೂ ಕೂಡ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಮುತ್ತೂಟ್ ಫೈನಾನ್ಸ್ (Muthoot Finance Personal Loan) ನಲ್ಲಿ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಅವಧಿ ಹೆಚ್ಚಾಗುತ್ತಾ ಹೋದಂತೆ ಸಾಲವನ್ನು ಕಟ್ಟುವಂತಹ ಹಣದ ಬಡ್ಡಿ ಕೂಡ ಹೆಚ್ಚಾಗುತ್ತದೆ.

ಹಣದ ಅಗತ್ಯ ಇರುವಾಗ ಜಾಗ ಮಾರಬೇಡಿ, ಬದಲಿಗೆ ಅದೇ ಜಾಗಕ್ಕೆ ಕೋಟ್ಯಾಂತರ ರೂ. ಸಾಲ ಪಡೆಯಿರಿ, ಕೆಲವೇ ಕ್ಷಣಗಳಲ್ಲಿ ಹಣ ನಿಮ್ಮ ಖಾತೆಗೆ! ಮಾಹಿತಿ ಇಲ್ಲಿದೆ!

3. ಸಾಲವನ್ನು ಮರುಪಾವತಿ ಮಾಡುವುದಕ್ಕೆ ಮುತ್ತೂಟ್ ಫೈನಾನ್ಸ್ (Muthoot Finance Personal Loan) ನಲ್ಲಿ ಸ್ಪರ್ಧಾತ್ಮಕ ಕಾಲಮಿತಿಯನ್ನು ಕೂಡ ನೀಡಲಾಗುತ್ತದೆ. ಸರಿಸುಮಾರು ಲೆಕ್ಕಾಚಾರ ಹಾಕುವುದಾದರೆ ವಾರ್ಷಿಕವಾಗಿ 11 ರಿಂದ 16 ಪ್ರತಿಶತ ಬಡ್ಡಿ ದರವನ್ನು ವಿಧಿಸಲಾಗುತ್ತದೆ.

4. ಸಾಲ ಪಡೆದುಕೊಳ್ಳುವುದಕ್ಕೆ ಪ್ರಮುಖವಾಗಿ ನೀವು ಉದ್ಯೋಗಸ್ಥರಾಗಿರಬೇಕು ಅಥವಾ ಸ್ವಂತ ಉದ್ಯಮವನ್ನು ಹೊಂದಿರುವವರಾಗಿರಬೇಕು. ಜೊತೆಗೆ ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಹೊಂದಿರಬೇಕು ಮಾತ್ರವಲ್ಲದೆ ವಯೋಮಾನ್ಯತೆಯನ್ನು ಗಮನಿಸುವುದಾದರೆ 21 ರಿಂದ 65 ವರ್ಷಗಳ ನಡುವೆ ಇರಬೇಕು.

5. ಮುತ್ತೂಟ್ ಫೈನಾನ್ಸ್ ನಲ್ಲಿ ನಿಮ್ಮ ಆಸ್ತಿಯ ಪ್ರತಿಫಲವಾಗಿ ಸಾಲವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಕೆಲವೊಂದು ಡಾಕ್ಯೂಮೆಂಟ್ (Documents)  ಗಳನ್ನು ಕೂಡ ನೀಡಬೇಕಾಗಿರುತ್ತದೆ. ಅವುಗಳಲ್ಲಿ ಪ್ರಮುಖವಾಗಿ,

1. ಐಡೆಂಟಿಟಿ ಹಾಗೂ ಅಡ್ರೆಸ್ ಪ್ರೂಫ್ (Adress Prof) ಗ್ರೂಪಲ್ಲಿ ಆಧಾರ್ ಕಾರ್ಡ್ (Adhaar Card) ಪಾನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಹಾಗೂ ವೋಟರ್ ಐಡಿಗಳಂತಹ ದಾಖಲೆಗಳನ್ನು ನೀಡಬಹುದಾಗಿದೆ.

2. ಇನ್ಕಮ್ ಪ್ರೂಫ್ ರೂಪದಲ್ಲಿ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್, ಸ್ಯಾಲರಿ ಸ್ಲಿಪ್ ಹಾಗೂ ಇನ್ಕಮ್ ಟ್ಯಾಕ್ಸ್ ದಾಖಲೆಗಳಂತಹ ರೆಕಾರ್ಡುಗಳನ್ನು ನೀಡಬೇಕಾಗಿರುತ್ತದೆ.

3. ಇನ್ನು ನೀವು ಆಸ್ತಿಯನ್ನು ಅಡವಿಟ್ಟು ಸಾಲವನ್ನು ಪಡೆದುಕೊಳ್ಳುತ್ತಿರುವ ಕಾರಣದಿಂದಾಗಿ ಆಸ್ತಿಗೆ ಸಂಬಂಧಪಟ್ಟಂತಹ ದಾಖಲೆಗಳು ಹಾಗೂ ಟ್ಯಾಕ್ಸ್ ಕಟ್ಟಿರುವಂತಹ ರಸೀದಿ ಸೇರಿದಂತೆ ಇನ್ನೂ ಹಲವಾರು ಪ್ರಮುಖ ದಾಖಲೆಗಳು ಬೇಕಾಗಿರುತ್ತದೆ.

6‌. ಇನ್ನು ಮುತ್ತೂಟ್ ಫೈನಾನ್ಸ್ (Muthoot Finance Personal Loan) ನಲ್ಲಿ ಹಣವನ್ನು ಸಾಲ ರೂಪದಲ್ಲಿ ಪಡೆದುಕೊಳ್ಳುವ ಸಂದರ್ಭದಲ್ಲಿ ಹಣದ ಮೊತ್ತದ ಒಂದರಿಂದ ಎರಡು ಪ್ರತಿಶತ ಹಣವನ್ನು ಪ್ರೋಸೆಸಿಂಗ್ ಶುಲ್ಕದಲ್ಲಿ ಕಡಿತಗೊಳಿಸಲಾಗಿ ಉಳಿದ ಹಣವನ್ನು ಸಾಲ ರೂಪದಲ್ಲಿ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

7. ಒಂದು ವೇಳೆ ನೀವು ನಿಗದಿ ಪಡಿಸಿದ ಅವಧಿಗಿಂತ ಮುಂಚೆ ಲೋನ್ ಹಣವನ್ನು ಸಂಪೂರ್ಣವಾಗಿ ಕಟ್ಟಲು ಹೊರಟರೆ ಆ ಸಂದರ್ಭದಲ್ಲಿ ಕೂಡ ನಿಮ್ಮ ಸಾಲದ ಹಣಕ್ಕೆ ಅನುಗುಣವಾಗಿ ಪ್ರಿ ಪೇಮೆಂಟ್ ಶುಲ್ಕವನ್ನು ಕಟ್ಟಬೇಕಾಗಿರುತ್ತದೆ.

Comments are closed.