PM Mudra Loan: ಈ ಯೋಜನೆಯಡಿ ಸಿಗುತ್ತೆ 1೦ ಲಕ್ಷ ರೂ. ವರೆಗೆ ಸಾಲ; ಸಾಲ ಪಡೆಯಲು ಯಾವ ಯಾವ ದಾಖಲೆ ಸಲ್ಲಿಸಬೇಕು ಗೊತ್ತೆ?

PM Mudra Loan: ಪ್ರತಿಯೊಬ್ಬರು ಸ್ವಂತ ಉದ್ಯೋಗ (Own Business) ಆರಂಭಿಸುವ ಆಸೆಯಲ್ಲಿರುತ್ತಾರೆ. ಕೆಲವೊಬ್ಬರಿಗೆ ಆರ್ಥಿಕವಾಗಿ ಸಬಲರಾಗಿದ್ದವರು ಅದನ್ನು ಕೂಡಲೇ ಕಾರ್ಯಗತ ಮಾಡುತ್ತಾರೆ. ಆದರೆ ಆರ್ಥಿಕವಾಗಿ ಸಮಸ್ಯೆಯಲ್ಲಿದ್ದವರು ಮಾತ್ರ ಚಿಂತಿತರಾಗುತ್ತಾರೆ. ಆದರೆ ಅವರು ಚಿಂತೆ ಮಾಡುವ ಅಗತ್ಯವಿಲ್ಲ. ನೀವು ಯಾವುದಾದರೂ ಸ್ವಂತ ಉದ್ಯೋಗ ಇಲ್ಲವೆ ಯಾವುದಾದರೂ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PM Mudra Loan)  ಅಡಿಯಲ್ಲಿ 1೦ ಲಕ್ಷ ರೂ.ಗಳ ವರೆಗೆ ಸಾಲನೀಡುತ್ತದೆ.

PM Mudra Loan upto 10 lakh, how to get it, here are the details

ಅದು ಅತ್ಯಂತ ಕಡಿಮೆ ಬಡ್ಡಿದರದಲ್ಲಿ. ಹಾಗಾದರೆ ನೀವು ಸಹ ಈ ಯೋಜನೆ (PM Mudra Loan) ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಯಾವ ಯಾವ ದಾಖಲಾತಿಗಳನ್ನು ಒದಗಿಸಬೇಕು? ಎಷ್ಟು ಹಂತಗಳಿವೆ ಈ ಎಲ್ಲ ವಿಚಾರಗಳ ಮಾಹಿತಿ ಇಲ್ಲಿದೆ.

ಕೇವಲ ಎರಡೇ ಗಂಟೆಗಳಲ್ಲಿ ಸಿಗುತ್ತೆ 5 ಲಕ್ಷಗಳವರೆಗೆ ಪರ್ಸನಲ್ loan. ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ.

ಸ್ವಂತ ಉದ್ಯೋಗ ಆರಂಭಿಸುವವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಸಲುವಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆ (PM Mudra Loan)   ಜಾರಿಗೆ ತರಲಾಗಿದೆ. ಈ ಯೋಜನೆ  2015 ರಲ್ಲಿ ಜಾರಿಗೆ ಬಂದಿದೆ. ಈ ಯೋಜನೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೂ ಸಹ ಸಾಲ ನೀಡಲಾಗುತ್ತದೆ.

ಮೊದಲನೆಯದಾಗಿ ಶಿಶು ಮುದ್ರಾ ಸಾಲ ಯೋಜನೆ: (PM Mudra Loan – Shishu Mudra Scheme)  

ಶಿಶು ಮುದ್ರಾ ಸಾಲ ಯೋಜನೆ ಅಡಿಯಲ್ಲಿ 5೦ ಸಾವಿರ ರೂ. ಗಳ ವರೆಗೆ ನಿಮಗೆ ಸಾಲ (PM Mudra Loan) ನೀಡಲಾಗುತ್ತದೆ. ಯಾವುದಾದರೂ ಸಣ್ಣ ಪುಟ್ಟ ವ್ಯಾಪಾರ ಆರಂಭಿಸುವವರಿಗೆ ಇದು ಬಹಳ ಅನುಕೂಲಕರವಾಗಿದೆ.

ಕಿಶೋರ ಮುದ್ರಾ ಸಾಲ ಯೋಜನೆ: (PM Mudra Loan – Kishor Mudra Scheme)  

ಕಿಶೋರ ಮುದ್ರಾ ಸಾಲ ಯೋಜನೆ (PM Mudra Loan) ಅಡಿಯಲ್ಲಿ  5 ಲಕ್ಷ ರೂ.ಗಳ ವರೆಗೆ ಸಾಲ (PM Mudra Loan) ನೀವೇನಾದರೂ ಗ್ರಾಮೀಣ ಹಾಗು ಸಣ್ಣ ಸಣ್ಣ ಪಟ್ಟಣದಲ್ಲಿ ಕಿರಾಣಿ ಅಂಗಡಿ, ಐಸ್ ಕ್ರೀಂ ಪಾರ್ಲರ್, ಮೇಕಪ್ ಪಾರ್ಲರ್ ಸೇರಿದಂತೆ ಮಧ್ಯಮ ಪ್ರಮಾಣದ ವ್ಯಾಪಾರ ವ್ಯವಹಾರ ಆರಂಭಿಸಲು ಇದು ಸಹಕಾರಿಯಾಗಿದೆ.

ಮೂರನೇಯದಾಗಿ ತರುಣ್ ಮುದ್ರಾ ಸಾಲ ಯೋಜನೆ: (PM Mudra Loan – Tarun mudra Scheme)  

ತರುಣ್ ಮುದ್ರಾ ಸಾಲ ಯೋಜನೆ ಅಡಿಯಲ್ಲಿ 1೦ ಲಕ್ಷ ರೂ.ಗಳ ವರೆಗೆ ನಿಮಗೆ ಸಾಲ ನೀಡಲಾಗುತ್ತದೆ.

ಮುದ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: (Needed Documents to get PM Mudra Loan)  

  • ಮುದ್ರಾ ಯೋಜನೆ (PM Mudra Loan) ಅಡಿಯಲ್ಲಿ ಸಾಲ ಪಡೆಯಲು ಬಯಸುವ ವ್ಯಕ್ತಿಯು 24 ರಿಂದ 7೦ ವರ್ಷದ ಒಳಗಿನವರಾಗಿರಬೇಕು.
  • ಭಾರತೀಯ ಪ್ರಜೆ ಆಗಿರಬೇಕು.
  • ಅರ್ಜಿಯ ಜೊತೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವಿಳಾಸ ದೃಢೀಕರಣ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ.

ಸಾಲ ಪಡೆದುಕೊಳ್ಳುವ ವಿಧಾನ: (How to get PM Mudra Loan)  

ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆ (PM Mudra Loan) ಅಡಿಯಲ್ಲಿ ಸಾಲ ಪಡೆಯಲು ಬಯಸಿದರೆ ಮೊದಲು ನೀವು ಹತ್ತಿರದ ಬ್ಯಾಂಕ್ಗೆ ಭೇಟಿ ನೀಡಬೇಕು.

ಬ್ಯಾಂಕ್ ಮ್ಯಾನೇಜರ್ಗೆ ನೀವು ಯಾವ ಉದ್ಯೋಗ ಮಾಡುತ್ತೀರಿ ಎನ್ನುವ ವಿವರ ನೀಡಬೇಕು. ಜೊತೆಗೆ ಅದರ ಮಾದರಿಯನ್ನು ನೀಡಬೇಕಾಗುತ್ತದೆ.

ನೀವು ಯಾವ ವ್ಯವಹಾರ ಅಥವಾ ಉದ್ಯೋಗ ಮಾಡಲು ಬಯಸುತ್ತೀರಿ ಎನ್ನುವ ಮೂಲ ಆಧಾರದ ಮೇಲೆ 1೦ ಲಕ್ಷ ರೂ.ಗಳ ವರೆಗೆ ಸಾಲ ನೀಡಲಾಗುತ್ತದೆ.

ನೀವು ಆರಂಭಿಸುವ ಉದ್ಯೋಗ ಇಲ್ಲವೇ ವ್ಯವಹಾರಕ್ಕೆ ಶೇ.25 ರಷ್ಟನ್ನು ಕರ್ಚು ಮಾಡಿದರೆ ಇನ್ನುಳಿದ ಶೇ.75 ರಷ್ಟನ್ನು ಬ್ಯಾಂಕ್ ಸಾಲದ (PM Mudra Loan) ರೂಪದಲ್ಲಿ ನೀಡುತ್ತದೆ.

ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವವರಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PM Mudra Loan) ಬಹಳ ಸಹಕಾರಿಯಾಗಿದೆ.

ಈ ರೀತಿ (PM Mudra Loan) ಸುಲಭವಾಗಿ ಮುದ್ರಾ ಲೋನ್ ಪಡೆದು ಸ್ವ ಉದ್ಯೋಗ ಆರಂಭಿಸಬಹುದು.

Comments are closed.