Second Hand Bikes: ದುಡ್ಡು ಉಳಿಸುವುದಕ್ಕೆ ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡೋದಕ್ಕೂ ಮೊದಲು ಈ ವಿಚಾರ ಗಮನಿಸಲೇಬೇಕು; ಪೊಲೀಸರೇ ಹೇಳಿದ್ದು ಇದು!

Second Hand Bikes: ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಬೈಕು ಮಾರಾಟ (Bike Selling) ಹಾಗೂ ಖರೀದಿ ಪ್ರಕ್ರಿಯೆ ಸುಲಭವಾಗಿ ಬಿಟ್ಟಿದೆ. ಅದರಲ್ಲೂ ವಿಶೇಷವಾಗಿ ನಾವು ಮಾತನಾಡುತ್ತಿರುವುದು ಸೆಕೆಂಡ್ ಹ್ಯಾಂಡ್ ಬೈಕುಗಳ ಮಾರಾಟದ ಬಗ್ಗೆ. ಇದಕ್ಕಾಗಿ ಸಾಕಷ್ಟು ವೆಬ್ಸೈಟ್ಗಳು ಹಾಗೂ ಅಪ್ಲಿಕೇಶನ್ಗಳು ಕೂಡ ಈಗಾಗಲೇ ಓಪನ್ ಆಗಿವೆ. ಆದರೆ ಇಂತಹ ಸೆಕೆಂಡ್ ಹ್ಯಾಂಡ್ ಬೈಕು (Second Hand Bikes) ಗಳನ್ನು ಖರೀದಿ ಮಾಡುವಂತಹ ವೆಬ್ ಸೈಟ್ ನಲ್ಲಿ ಬೈಕುಗಳನ್ನು ಖರೀದಿ ಮಾಡುವುದಕ್ಕಿಂತ ಮುಂಚೆ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂಬುದಾಗಿ ಕೂಡ ಪೊಲೀಸರು ಸಲಹೆ ನೀಡಿದ್ದು ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನಿಯ ಮೂಲಕ ಪಡೆದುಕೊಳ್ಳೋಣ.

Police Suggestions about Second Hand Bikes Purchase here are the points.

 ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನು ಖರೀದಿಸುವ ಬಗ್ಗೆ ಪೊಲೀಸರ ಸಲಹೆ (Police Suggestions about Second Hand Bikes Purchase)

1. ಒಂದು ವೇಳೆ ನೀವು ಸೆಕೆಂಡ್ ಹ್ಯಾಂಡ್ (Second Hand Bikes) ದ್ವಿಚಕ್ರ ವಾಹನವನ್ನು ಖರೀದಿಸಿದ್ದೀರಿ ಅಥವಾ ಖರೀದಿಸಲು ಹೊರಟಿದ್ದೀರಿ ಎಂದರೆ ಮೊದಲಿಗೆ ಅದರ ಮೇಲೆ ಇರುವಂತಹ ತುಕ್ಕು ಹಿಡಿದಿರುವ ಕಲೆ ಅಥವಾ ಎಲ್ಲಾದರೂ ಅಪ-ಘಾತ ಆಗಿರುವಂತಹ ಕಲೆ ಇದ್ರೆ ಅದನ್ನು ಮೊದಲಿಗೆ ಪರೀಕ್ಷಿಸಬೇಕು.

2. ಸೆಕೆಂಡ್ ಹ್ಯಾಂಡ್ ಬೈಕಿನ ಇತಿಹಾಸವನ್ನು ಮೊದಲಿಗೆ ತಿಳಿದುಕೊಳ್ಳಿ ಹಾಗೂ ಅದರ ಸರ್ವಿಸ್ ಬಗ್ಗೆ ಕೂಡ ಸರಿಯಾದ ಮಾಹಿತಿಯನ್ನು ಅದರ ಮಾಲೀಕರಿಂದ ಪಡೆದುಕೊಳ್ಳಿ.

ಬೇರೆ ಯಾವ ದಾಖಲೆಯೂ ಬೇಡ ಕೇವಲ ಒಂದು ಪ್ಯಾನ್ ಕಾರ್ಡ್ ತೋರಿಸಿ, 50,000 ಲೋನ್ ಪಡೆಯಿರಿ; ಎರಡು ನಿಮಿಷದ ಕೆಲಸ ಅಷ್ಟೇ!

3. ವಾಹನದ ಓನರ್ಶಿಪ್, ಚೇಸಿಸ್ ನಂಬರ್ (Chasis Number) ಸೇರಿದಂತೆ ನ್ಯಾಯ ಸಮ್ಮತವಾಗಿರುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸಮರ್ಪಕವಾಗಿ ಪಡೆದುಕೊಳ್ಳಿ. ಎಲ್ಲಕ್ಕಿಂತ ಪ್ರಮುಖವಾಗಿ ಖರೀದಿ ಮಾಡುವುದಕ್ಕಿಂತ ಮುಂಚೆ ಮೆಕಾನಿಕ್ (Mechanic)  ಅನ್ನು ಕರೆದುಕೊಂಡು ಹೋಗಿ ಬೈಕಿನ ಗುಣಮಟ್ಟಕೆಯನ್ನು ಪರೀಕ್ಷಿಸಿಕೊಳ್ಳಿ.

4. ಬೈಕ್ ಅನ್ನು ಮಾರಾಟ ಮಾಡುತ್ತಿರುವವರ ಹೆಸರು ಹಾಗೂ ಅವರ ವಿಳಾಸದ ಪ್ರತಿಯೊಂದು ಅಧಿಕೃತ ಮಾಹಿತಿಗಳನ್ನು ಅವರಿಂದಲೇ ಪಡೆದುಕೊಳ್ಳುವುದು ಉತ್ತಮವಾಗಿರುತ್ತದೆ. ನಾಳೆ ಏನಾದರೂ ಸಮಸ್ಯೆ ಆದರೆ ಅವರ ಮಾಲೀಕತ್ವದ ಸರಿಯಾದ ಆಧಾರ ಇರಬೇಕಾಗಿರುವುದು ಕೂಡ ಪ್ರಮುಖವಾಗಿರುತ್ತದೆ.

5. ಸೆಕೆಂಡ್ ಹ್ಯಾಂಡ್ ಬೈಕ್ (Second Hand Bikes) ಖರೀದಿಸುವಾಗ ನಿಮ್ಮ ವಹಿವಾಟಿನ ಸಂಪೂರ್ಣ ಸರಿಯಾದ ಮಾಹಿತಿಯನ್ನು ಹೊಂದಿರುವಂತಹ ಬಿಲ್ ಅನ್ನು ಅವರಿಂದ ಪಡೆದುಕೊಳ್ಳಿ.

6. ಒಂದು ವೇಳೆ ಆ ಸೆಕೆಂಡ್ ಹ್ಯಾಂಡ್ ಬೈಕಿನ (Second Hand Bikes)  ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ಕೂಡ ನೀವು ನಿಮ್ಮ ಅನುಮಾನವನ್ನು ಸ್ಪಷ್ಟಪಡಿಸಿಕೊಳ್ಳಬಹುದಾಗಿದೆ. ಯಾಕೆಂದರೆ ಕದ್ದಮಾಲನ್ನು ಖರೀದಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ.

7. VIN ಚಾಸಿಸ್ ನಂಬರ್ ಮೂಲಕ ನೀವು ಖರೀದಿ ಮಾಡಲು ಇಷ್ಟಪಡುವ ಸೆಕೆಂಡ್ ಹ್ಯಾಂಡ್ ಬೈಕ್ (Second Hand Bikes) ನ ಸಂಪೂರ್ಣ ಇತಿಹಾಸವನ್ನು ತಿಳಿದುಕೊಳ್ಳಬಹುದಾಗಿದ್ದು ಈ ಮೂಲಕ ಕೂಡ ನೀವು ಖರೀದಿಸುವಂತಹ ಬೈಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

Comments are closed.