Film News: ಮದುವೆಯಾದ ಕೆಲವೇ ತಿಂಗಳಿಗೆ ವಿಚ್ಚೇದನ ಕೊಡುತ್ತಿರುವ ನಿಹಾರಿಕಾ- ವರದಕ್ಷಿಣೆ ಎಷ್ಟು ಕೊಟ್ಟಿದ್ದರು ಗೊತ್ತೇ? ನಾಗಬಾಬು ಮಗಳಿಗಾಗಿ ಕೊಟ್ಟಿದೆಷ್ಟು ಗೊತ್ತೇ?

Film News: ಚಿತ್ರರಂಗದ ಈಗಿನ ಪರಿಸ್ಥಿತಿ ಅಷ್ಟೇನು ಚೆನ್ನಾಗಿಲ್ಲ ಎಂದೇ ಹೇಳಬಹುದು. ಏಕೆಂದರೆ, ಒಂದಾದ ನಂತದ ಒಂದು ವಿಚ್ಛೇದನದ ಪ್ರಕರಣಗಳು ಹೊರಬರುತ್ತಿದೆ. ಮೊದಲಿಗೆ ತೆಲುಗಿನ ಖ್ಯಾತ ನಟ ನಾಗಚೈತನ್ಯ (agachaitanya) ಹಾಗು ನಟಿ ಸಮಂತಾ (Samantha) ಅವರ ವೈವಾಹಿಕ ಜೀವನ ಮುರಿದು ಬಿತ್ತು, ಐದಾರು ವರ್ಷ ಪ್ರೀತಿಸಿ, ಮನೆಯವರನ್ನೆಲ್ಲಾ ಒಪ್ಪಿಸಿ, ಬಹಳ ಅನ್ಯೋನ್ಯವಾಗಿದ್ದ ಈ ಜೋಡಿ ವಿಚ್ಚೇದನ ಪಡೆದಿದ್ದು ಎಲ್ಲಾ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿತ್ತು.. ಇದನ್ನೂ ಓದಿ: Check property ownership: ಇಡೀ ದೇಶದಲ್ಲಿ ಯಾವ ಭೂಮಿ ಯಾರ ಹೆಸರಿನಲ್ಲಿಯೇ, ನಿಮ್ಮ ಜಾಮೀನು ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತಿಳಿಯಲು, ಈ ಚಿಕ್ಕ ಕೆಲಸ ಮಾಡಿ ಸಾಕು.

ಅದಾದ ಕೆಲವೇ ದಿನಗಳಲ್ಲಿ ತಮಿಳಿನ ಸ್ಟಾರ್ ನಟ ಧನುಷ್ (Dhanush) ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರ ಮಗಳು ಐಶ್ವರ್ಯ ರಜನಿಕಾಂತ್ ವಿಚ್ಛೇದನ (Divorce) ಘೋಷಿಸಿದರು. 15 ವರ್ಷಕ್ಕಿಂತ ಹೆಚ್ಚಿನ ಸಮಯ ಜೊತೆಯಾಗಿ ಜೀವನ ನಡೆಸಿದ ಈ ಜೋಡಿ ವಿಚ್ಛೇದನ ಪಡೆದಿದ್ದು ಕೂಡ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಇದರ ಜೊತೆಗೆ ತೆಲುಗಿನ ಮತ್ತೊಂದು ಜೋಡಿ ಈಗ ವಿಚ್ಚೇದನ ಪಡೆದುಕೊಂಡಿದೆ. ಆಕೆ ಮೆಗಾಸ್ಟಾರ್ ಮನೆಯ ಹುಡುಗಿ ಆಗಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗಳು ನಿಹಾರಿಕಾ (Niharika) ಕೊನಿಡೆಲಾ. ಇವರು ಜೊನ್ನಲಗಡ್ಡ ವೆಂಕಟ ಚೈತನ್ಯ ಅವರೊಡನೆ ಮದುವೆಯಾಗಿದ್ದರು. ಕೆಲ ಸಮಯ ಈ ಜೋಡಿಯ ನಡುವೆ ಎಲ್ಲವೂ ಚೆನ್ನಾಗಿದೆ ಎನ್ನಿಸಿತಾದರು ಇತ್ತೀಚಿನ ದಿನಗಳಲ್ಲಿ ಈ ಜೋಡಿ ಬೇರೆ ಆಗಬಹುದೇನೋ ಎನ್ನುವ ಸುಳಿವು ಸಿಕ್ಕಿತ್ತು. ಏಕೆಂದರೆ ಇವರಿಬ್ಬರು ಸೋಷಿಯಲ್ ಮೀಡಿಯಾ (Social Media) ದಲ್ಲಿ ಇಬ್ಬರು ಜೊತೆಯಾಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದರು.

ಇಬ್ಬರು ವಿಚ್ಛೇದನದ ಮುನ್ಸೂಚನೆ ಕೊಡುತ್ತಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಅದು ನಿಜವೇ ಆಗಿದ್ದು ಕಳೆದ ತಿಂಗಳು ಈ ಜೋಡಿ ಕೋರ್ಟ್ ನಲ್ಲಿ ವಿಚ್ಛೇದನದ ಕೇಸ್ ಹಾಕಿದ್ದು, ಇಬ್ಬರಿಗೂ ವಿಚ್ಛೇದನ ಸಿಕ್ಕಿದೆ. ಇದನ್ನು ಅಧಿಕೃತವಾಗಿಯೇ ಹೇಳಿಕೊಂಡಿದ್ದಾರೆ ನಿಹಾರಿಕಾ ಮತ್ತು ವೆಂಕಟ್ ಚೈತನ್ಯ. ಈ ಜೋಡಿಯ ಮದುವೆ ಅದ್ಧೂರಿಯಾಗಿ ನಡೆದಿತ್ತು, ಈಗ ಇವರು ವಿಚ್ಛೇದನ ಪಡೆದಿದ್ದರೂ ಸಹ, ಮದುವೆ ವೇಳೆ ಮೆಗಾ ಫ್ಯಾಮಿಲಿ ಇಂದ ನಿಹಾರಿಕಾ ಅವರಿಗೆ ಸಿಕ್ಕ ಉಡುಗೊರೆ, ಚೈತನ್ಯ ಅವರಿಗೆ ಸಿಕ್ಕ ಉಡುಗೊರೆಗಳ ಬಗ್ಗೆ ಚರ್ಚೆ ಆಗುತ್ತಿದೆ. ಇದನ್ನೂ ಓದಿ: Gichhi gili gili Janvi: ಮೊದಲ ಬಾರಿಗೆ ವಿಚ್ಚೇದನಕ್ಕೆ ಕಾರಣ ತಿಳಿಸಿದ ಜಾಹ್ನವಿ- ರಾಜ್ಯದ ಜನರ ಮನಗೆದ್ದಿರುವ ಚೆಲುವೆ ಬಾಳಲ್ಲಿ ಏನಾಗಿತ್ತು ಗೊತ್ತೇ?

ಮಗಳ ಮದುವೆಗೆ ಮೆಗಾ ಫ್ಯಾಮಿಲಿ ದುಬಾರಿ ವರದಕ್ಷಿಣೆ ಕೊಟ್ಟಿದ್ದರು, ಆದರೆ ಅದು ಹಣದ ರೂಪದಲ್ಲಿ ಇರಲಿಲ್ಲ, ಗಿಫ್ಟ್ ರೂಪದಲ್ಲಿದ್ದು. ಚಿರಂಜೀವಿ ಅವರು 2 ಕೋಟಿ ಬೆಲೆಬಾಳುವ ವಜ್ರದ ನೆಕ್ಲೇಸ್ ಅನ್ನು ಗಿಫ್ಟ್ ಆಗಿ ನೀಡಿದ್ದರು. ನಿಹಾರಿಕಾ ಅಣ್ಣ ವರುಣ್ ತೇಜ್ 2ಕೋಟಿ ಬೆಲೆ ಬಾಳುವ ಫ್ಲ್ಯಾಟ್ ಅನ್ನು ಗಿಫ್ಟ್ ಆಗಿ ನೀಡಿದ್ದರು, ಪವನ್ ಕಲ್ಯಾಣ್ ಅವರ ದುಬಾರಿ ಕಾರ್ ಗಿಫ್ಟ್ ಮಾಡಿದ್ದರು. ತಂದೆ ನಾಗಬಾಬು ಅವರು ಸಹ ದೊಡ್ಡ ಮಟ್ಟದಲ್ಲಿ ಆಸ್ತಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದೆಲ್ಲ ಏನೇ ಕೊಟ್ಟಿದ್ದರು, ಈಗ ಈ ಜೋಡಿ ಬೇರೆಯಾಗಿದ್ದಾರೆ.

Comments are closed.