Crime news: ಪುನೀತ್ ಫೋಟೋ ತೆಗೆಸಿದ್ದೇ ಹಿಂದೂ ಕಾರ್ಯಕರ್ತನ ಸಾವಿಗೆ ಕಾರಣನ?? ಪತ್ನಿ ಹೊರಹಾಕಿದ ಷಾಕಿಂಗ್ ಸಂಗತಿ.

Crime news: ಕೆಲವೊಮ್ಮೆ ನಾವು ಊಹೆ ಕೂಡ ಮಾಡಲು ಸಾಧ್ಯವಾಗಾದ ವಿಷಯಗಳಿಗೆ ಅನಾಹುತಗಳೇ ನಡೆದು ಹೋಗುತ್ತದೆ. ನಂತರ ಆ ಘಟನೆಗಳನ್ನು ನೋಡಿದರೆ, ಅಥವಾ ನೆನಪು ಮಾಡಿಕೊಂಡರೆ, ಅಚಾತುರ್ಯ ನಡೆದು ಹೋಯಿತು ಎಂದು ಅನ್ನಿಸುತ್ತದೆ. ಇತ್ತೀಚೆಗೆ ಇಂಥದ್ದೊಂದು ಘಟನೆ ಮೈಸೂರಿನಲ್ಲಿ ನಡೆದಿದೆ. ಯುವಕನ ಪ್ರಾಣವನ್ನೇ ತೆಗೆಯಲಾಗಿದೆ. ಇದಕ್ಕೆ ಕಾರಣ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಫೋಟೋ (Photo) ತೆಗೆಸಿದ್ದು ಎನ್ನಲಾಗಿದೆ. ಅಷ್ಟಕ್ಕೂ ಏನಾಗಿದೆ ಗೊತ್ತಾ? ಇದನ್ನೂ ಓದಿ: Film News: ಮದುವೆಯಾದ ಕೆಲವೇ ತಿಂಗಳಿಗೆ ವಿಚ್ಚೇದನ ಕೊಡುತ್ತಿರುವ ನಿಹಾರಿಕಾ- ವರದಕ್ಷಿಣೆ ಎಷ್ಟು ಕೊಟ್ಟಿದ್ದರು ಗೊತ್ತೇ? ನಾಗಬಾಬು ಮಗಳಿಗಾಗಿ ಕೊಟ್ಟಿದೆಷ್ಟು ಗೊತ್ತೇ?

ಈ ಹುಡುಗನ ಹೆಸರು ವೇಣುಗೋಪಾಲ್ (Venugopal), ಈತ ಯುವಬ್ರಿಗೇಡ್ (Yuva Brigade) ನ ಕಾರ್ಯಕರ್ತ ಆಗಿದ್ದನು,. ಕಳೆದ ಶನಿವಾರ ಹನುಮಾನ್ ಜಯಂತಿ ಆಚರಣೆ ಸಂಭ್ರಮದ ವೇಳೆ, ಈ ವ್ಯಕ್ತಿ ಪುನೀತ್ ರಾಜ್ ಕುಮಾರ್ ಅವರ ಫೋಟೋ ತೆಗೆಸಿದ್ದಾನೆ. ಅದಾದ ಮರುದಿನವೇ ವೇಣುಗೋಪಾಲನನ್ನು ಮುಗಿಸಿಯೇ ಬಿಟ್ಟಿದ್ದಾರೆ ಕಿಡಿಗೇಡಿಗಳು. ಈ ಬಗ್ಗೆ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಮಾತನಾಡಿದ್ದಾರೆ.

ಮಾಧ್ಯಮದ ಎದುದು ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಅವರು ಮಾತನಾಡಿ, ಕಣ್ಣೀರು ಹಾಕಿದ್ದರೆ. ಹನುಮಾನ್ ಜಯಂತಿ ಆಚರಣೆ ನಡೆದಿರುವುದು ಕಳೆದ ಶನಿವಾರ ಟಿ. ನರಸೀಪುರದಲ್ಲಿ. ಆಚರಣೆ ವೇಳೆ ಭಾರತಮಾತೆಯ ಫೋಟೋ ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಸಹ ಇಡಲಾಗಿದೆ. ಪುನೀತ್ ಅವರ ಫೋಟೋ ಇಟ್ಟಿದ್ದಕ್ಕೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ವೇಣುಗೋಪಾಲ್ ಯಾವ ಫೋಟೋವನ್ನು ಇಡುವುದು ಬೇಡ ಎಂದು ಫೋಟೋ ಇಡುವುದನ್ನು ತಡೆದಿದ್ದಾರೆ. ಅದರಿಂದಾಗಿ ಪುನೀತ್ ರಾಜ್ ಕುಮಾರ್ ಅವರ ಫೋಟೋ ತೆಗೆದಿದ್ದಕ್ಕೆ, ಅಲ್ಲಿ ಅವರವರ ಗುಂಪಿನ ನಡುವೆಯೇ ಜಗಳ ಶುರುವಾಗಿದೆ. ಶನಿವಾರದ ನಡೆದ ಘಟನೆ ಅಲ್ಲಿಗೇ ಮುಗಿಯದೆ, ಭಾನುವಾರ ಕೂಡ ಮುಂದುವರೆದು, ಇದೇ ವಿಚಾರಕ್ಕೆ ಭಾನುವಾರ ಮಧ್ಯಾಹ್ನ ಕೂಡ ಜಗಳ ನಡೆದಿದೆ. ಇದನ್ನೂ ಓದಿ; Smart Led TV: ಮಾರುಕಟ್ಟೆಗೆ ಬಿಡುಗಡೆಯಾದ ಅತಿ ಕಡಿಮೆ ಬೆಲೆಯ ಸ್ಮಾರ್ಟ್ LED ಟಿವಿ- ಅದು ಚಿಲ್ಲರೆ 10000 ಕ್ಕಿಂತ ಕಡಿಮೆ.

ನಂತರ ಭಾನುವಾರ ಸಂಜೆ ರಾಜಿ ಮಾಡಿಕೊಳ್ಳುವುದಕ್ಕೆ ಎಂದು ವೇಣುಗೋಪಾಲನನ್ನು ಕರೆದುಕೊಂಡು ಹೋಗಿ, ಆತನನ್ನು ಮುಗಿಸಿಯೇ ಬಿಟ್ಟಿದ್ದಾರೆ. ರಾಜಿ ಎನ್ನುವುದು ಒಂದು ನೆಪ ಮಾತ್ರ ಆಗಿತ್ತು ಎಂದು ವೇಣುಗೋಪಾಲ್ ಪತ್ನಿ ಪೂರ್ಣಿಮಾ ಹೇಳಿದ್ದಾರೆ. ಇದೀಗ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

Comments are closed.