Social media Business: ಸೋಶಿಯಲ್ ಮೀಡಿಯಾದ ಈ ವೇದಿಕೆಗಳಿಂದ ಮಾತ್ರ ಗಳಿಸಬಹುದು  ಲಕ್ಷ ಹಣ; ಹೇಗೆ ಗೊತ್ತಾ?

Social media Business: ಈಗಂತೂ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ ಫೋನ್ ಇದ್ದೇ ಇರುತ್ತದೆ. ಹಾಗಾಗಿ ಸಾಮಾನ್ಯವಾಗಿ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯನ್ನು ಹೊಂದಿರುತ್ತಾರೆ. ಅದರಲ್ಲೂ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ಸದಾ ಕಾಲ ಆಕ್ಟಿವ್ ಆಗಿ ಇರುತ್ತದೆ. ಇಂದು ರಾಜಕೀಯ, ಕ್ರೀಡೆ, ಸಿನೆಮಾ ಸೇರಿದಂತೆ ಯಾವುದೆ ವಿಚಾರಕ್ಕಾದರೂ, ಯಾರ ವಿಚಾರಕ್ಕಾದರೂ ಸೋಶಿಯಲ್ ಮೀಡಿಯಾದಲ್ಲೇ ಉತ್ತರ ನೀಡುತ್ತಾರೆ, ಪ್ರತಿಭಟನೆ ನಡೆಸುತ್ತಾರೆ. ಅಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಬೆಳೆದಿದೆ ಸೋಶಿಯಲ್ ಮೀಡಿಯಾ. ಈ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅನೇಕರು ಹಣ ಗಳಿಸುತ್ತಿದ್ದಾರೆ. ಈ ಕೆಲಸವನ್ನು ನೀವು ಸಹ ಮಾಡಬಹುದು. ಇದನ್ನೂ ಓದಿ: Second hand bike market: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ಮಾಡಬೇಕೆ? ಅತ್ಯಂತ ಕಡಿಮೆ ಬೆಲೆಗೆ, ಅದೂ ಉತ್ತಮ ಕಂಡೀಶನ್ ಬೈಕ್! ಎಲ್ಲಿ ಸಿಗುತ್ತೆ ಗೊತ್ತಾ?

ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾ ಗ್ರಾಂಗಳು ಮೊದಲು ಮನರಂಜನೆಗಷ್ಟೆ ಸೀಮಿತವಾಗಿದ್ದವು. ಆದರೆ ಅವುಗಳೇ ಇಂದು ಹಣ ಗಳಿಸುವ ವೇದಿಕೆಗಳಾಗಿವೆ. ಕೊಟ್ಯಂತರ ಜನರು ಇದನ್ನೇ ಬಳಸಿಕೊಂಡು ತಮ್ಮ ಉಪಖರ್ಚುಗಳಿಗೆ ಹಣ ಮಾಡಿಕೊಳ್ಳುತ್ತಿದ್ದಾರೆ.

ವಿವಿಧ ಕಂಪನಿಗಳು, ಉತ್ಪನ್ನಗಳ ಬ್ರ್ಯಾಂಡ್ಗಳನ್ನು ಪ್ರಚಾರ ಮಾಡುವುದು, ಲೈಕ್ಸ್, ಕಮಿಂಟ್, ಫಾಲೋವರ್ಸ್ಗಳನ್ನು ಹೆಚ್ಚಿಸುಕೊಳ್ಳುವ ಮೂಲಕ ಹಣ ಗಳಿಸಲಾಗುತ್ತಿದೆ. ಅದರಲ್ಲೂ ಜನಪ್ರಿಯ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ ಹಣ ಗಳಿಕೆಯ ದೊಡ್ಡ ವೇದಿಕೆಯಾಗಿದೆ. ಇನ್ಸ್ಟಾಗ್ರಾಂನ (Instagram) ಒಂದು ಭಾಗವಾಗಿರುವ ರೀಲ್ಸ್ ಮೂಲಕವೂ ಕೋಟ್ಯಂತರ ಜನರು ಆದಾಯ ಗಳಿಸುತ್ತಿದ್ದಾರೆ. ಎಷ್ಟೋ ಜನರಿಗೆ ಇದೇ ಆದಾಯದ ಮೂಲವಾಗಿಬಿಟ್ಟಿದೆ. ರೀಲ್ಸ್ಗಳಲ್ಲಿ (Reels) ವಿವಿಧ ಉತ್ಪನ್ನಗಳ, ಅಂಗಡಿಗಳ, ಕಂಪನಿಗಳ, ಸಣ್ಣ ಸಣ್ಣ ವಸ್ತುಗಳಿಂದ ಹಿಡಿದು ದೊಡ್ಡ ಕಂಪನಿಗಳ ಉತ್ಪನ್ನಗಳನ್ನು ಪ್ರಚಾರ ಮಾಡಲಾಗುತ್ತಿದೆ. ಇನ್ನು ಕಂಟೆಂಟ್ ಕ್ರಿಯೇಟ್ (Content Create) ಮಾಡುವ ಮೂಲಕ ಅದಕ್ಕೆ ಹೆಚ್ಚಿನ ಲೈಕ್ಸ್ (Likes) ಗಳಿಸುವುದರಿಂದ ಆದಾಯ ಗಳಿಸುತ್ತಿದ್ದಾರೆ. ಮಾರ್ಕೆಟಿಂಗ್, ಪ್ರಾಯೋಜಿತ ಪೋಸ್ಟ್ಗಳಿಗೂ ಇಲ್ಲಿ ಹಣವನ್ನು ನೀಡಲಾಗುತ್ತದೆ. ಆದರೆ ವ್ಯಕ್ತಿಗೆ ಎಷ್ಟು ಫಾಲೋವರ್ಸ್ ಇದ್ದಾರೆ? ಸಾಮಾಜಿಕ ಜಾಲತಾಣದಲ್ಲಿ ಆತನಿಗೆ ಎಷ್ಟು ಜನಪ್ರಿಯತೆ ಇದೆ ಎನ್ನುವುದರ ಆಧಾರದ ಮೇಲೆ ಕಂಪನಿಗಳು ಆತನಿಗೆ ಜಾಹಿರಾತನ್ನು ನೀಡುತ್ತದೆ. ಇದನ್ನೂ ಓದಿ: Business Idea: ಕಡಿಮೆ ಬಜೆಟ್ನಲ್ಲಿ ಹೆಚ್ಚಿನ ಲಾಭ; ಈ ವ್ಯಾಪಾರ ಮಾಡಿದ್ರೆ ಕೈತುಂಬಾ ಆದಾಯ ಫಿಕ್ಸ್! ಈ ಬ್ಯುಸನೆಸ್ ಸ್ಟಾರ್ಟ್ ಮಾಡಿ!

ಇನ್ನು ಫೇಸ್ಬುಕ್ನಲ್ಲಿ ಹೊಸ ಹೊಸ ಗ್ರೂಪ್ಗಳನ್ನು ಮಾಡಿಕೊಂಡು ಅದಕ್ಕೆ ಹೆಚ್ಚಿನ ಜನರನ್ನು ಫಾಲೋವರ್ಸ್ (Followers) ಮಾಡಿಕೊಂಡರೂ ನೀವು ಹಣ ಗಳಿಸಬಹುದು. ನಿಮಗೆ ಎಷ್ಟು ಜನರು ಫಾಲೋವರ್ಸ್ ಇದ್ದಾರೆ ಎನ್ನುವದರ ಮೇಲೆ ನಿಮಗೆ ಸಂಭಾವನೆ ನೀಡಲಾಗುತ್ತದೆ. ಫೇಸ್ಬುಕ್ (Facebook) ಮೂಲಕ ಹಣ ಗಳಿಸಲು ಅನೇಕ ದಾರಿಗಳಿವೆ. ರೀಲ್ಸ್ ಜಾಹಿರಾತುಗಳು, ಚಂದಾದಾರಿಕೆ, ಕಂಟೆಂಟ್ ಕ್ರೀಯೇಟ್ ಮಾಡಿಕೊಡುವುದು ಹೀಗೆ ಹಲವು ವಿಧಾನಗಳಲ್ಲಿ ಹಣ ಗಳಿಸಬಹುದಾಗಿದೆ.

ಯೂಟ್ಯೂಬ್ (Youtube) ಸಹ ಸಾಮಾಜಿಕ ಜಾಲತಾಣದಲ್ಲಿ ಒಂದಾಗಿದೆ. ಇಲ್ಲಿ ನೀವು ಚಾನೆಲ್ (Channel) ಆರಂಭಿಸಿ ನಿಮಗೆ ಹೆಚ್ಚಿನ ಜನರು ಸಬ್ಸ್ಕ್ರೈಬ್ (Subscribe) ಆದಲ್ಲಿ ನಿಮಗೆ ಜಾಹಿರಾತು ಬರಲಿದೆ. ನೀವು ಯಾವ ರೀತಿಯ ವೀಡಿಯೋ ಮಾಡುತ್ತೀರಿ, ಅದಕ್ಕೆ ಎಷ್ಟು ಲೈಕ್ಸ್ ಬಂದಿದೆ, ಎಷ್ಟು ಜನರು ಶೇರ್ ಮಾಡಿದ್ದಾರೆ ಎನ್ನುವದರ ಆಧಾರದ ಮೇಲೆ ನಿಮಗೆ ಹಣ ನೀಡಲಾಗುತ್ತದೆ.

Comments are closed.