Used Car Loan:  ನೀವು ತೆಗೆದುಕೊಂಡ ಕಾರಿನ ಬಡ್ದಿ ಜಾಸ್ತಿ ಆಗಿದ್ಯಾ? ಹೀಗೆ ಮಾಡಿ, ಈಗ ಕಡ್ಡುವ ಬಡ್ಡಿಗಿಂತ 50% ಕಡಿಮೆ ಬಡ್ದಿದರದಲ್ಲಿ ಲೋನ್ ಮರುಪಾವತಿ ಮಾಡಬಹುದು!

Used Car Loan Decreases rate of Interest:  ಈಗಾಗಲೇ ಖರೀದಿಸಿದ ಕಾರಿಗೆ ಜಾಸ್ತಿ ಬಡ್ಡಿಯ ಸಾಲ ಪಡೆದಿದ್ದೇನೆ ಆದರೆ ಕಡಿಮೆ ಬಡ್ಡಿ ಮತ್ತು ಹೆಚ್ಚು ತಿಂಗಳು ಮರುಪಾವತಿ  ಅವಕಾಶ ಲಭ್ಯವಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಭಾವಿಸುತ್ತಿದ್ದಿರಾ? ಚಿಂತೆ ಮಾಡಬೇಡಿ. ನೀವು ಈಗ ಸಾಲ ಕೊಟ್ಟಿರುವ ಸಂಸ್ಥೆಯನ್ನು ಬದಲಿಸಿಕೊಳ್ಳಬಹುದು. ನೀವು ಬಳಕೆ ಮಾಡಿದ ಕಾರಿನ ಲೋನ್ Used Car Loan ಬದಲಿಸಬಹುದು.

Used Car Loan Decreases rate of Interest by taking Refinance, how to change your loan? Here are the details.

ಖರೀದಿ ಮಾಡಿದ ಕಾರಿನ ಸಾಲ ಬದಲಿಸಿಕೊಳ್ಳಿ Get Used Car Loan

ಕಾರು ಕೊಂಡುಕೊಳ್ಳಬೇಕು ಎಂದು ಮನಸ್ಸಿನಲ್ಲಿ ಆಸೆ ಮೂಡಿದ ಕೂಡಲೇ ಸಾಮಾನ್ಯವಾಗಿ ಯಾರು ಕಡಿಮೆ ಬಡ್ಡಿಗೆ ಸಾಲ ಕೊಡುತ್ತಾರೆ ಮತ್ತು ದೀರ್ಘಾವಧಿ ಕಂಡುಕೊಳ್ಳುತ್ತಾರೆ ಎಂದು ನೋಡುವ ವ್ಯವಧಾನವಾಗಲಿ ವಿವೇಚನೆಯಾಗಲಿ ಕೆಲವರಲ್ಲಿ ಇರುವುದಿಲ್ಲ. ಒಟ್ಟು ಮನಸ್ಸಿಗೆ ಬಂದ ಕೂಡಲೇ ಕಾರ್ ಕಂಪನಿಗಳಿಗೆ ಏಜೆನ್ಸಿಗಳಿಗೆ ಭೇಟಿಕೊಟ್ಟು ಕೊಟೇಶನ್ ಪಡೆದು ಎನ್ ಬಿ ಎಫ್ ಸಿ ಗಳಿಂದ  (ಎನ್  ಬಿ ಎಫ್ ಸಿ ಎಂದರೆ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿ) (Non-Banking finance Company)  ಸಾಲವನ್ನು ಪಡೆದಿದ್ದರೆ ಅಥವಾ ಡೌನ್ ಪೇಮೆಂಟ್ (Down payment) ಕಡಿಮೆ ಇದ್ದು ಸಾಲ ಲಭ್ಯತೆ ಇದ್ದಲ್ಲಿ ಅಂತಹ ಆಕರ್ಷಣೆಗೆ ಒಳಗಾಗಿ ತಿಂಗಳ ಕಂತು ಕಟ್ಟಲು  ಹೆಣಗಾಡುವ ಸ್ಥಿತಿ ಎದುರಾದರೆ ಅಥವಾ ನೀವು ಈಗಾಗಲೇ ಹೊಡೆದ ಸಾಲದ ಬಡ್ಡಿದರಕ್ಕಿಂತ  ಕಡಿಮೆ ಬಡ್ಡಿಯಲ್ಲಿ (Used Car Loan) ಸಾಲ ದೊರಕುವ ಸಾಧ್ಯತೆ ಇದ್ದರೆ ಅಂತಹ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಮತ್ತು ಸಾಲ ಸಿಗುವುದು ರಿ ಫೈನಾನ್ಸಿಂಗ್ (Refinancing)  ಎಂದು ಕರೆಯಲ್ಪಡುತ್ತದೆ.

ಬಳಕೆ ಮಾಡಿದ ಕಾರಿನ ಪಾವತಿ ಅವಧಿ ವಿಸ್ತರಿಸಿಕೊಳ್ಳಿ (Get Used Car Loan to get long period of time)

ಕಾರು ತೆಗೆದುಕೊಳ್ಳುವ ಮೊದಲು ಬಹಳಷ್ಟು ಜನ ಲೆಕ್ಕ ಹಾಕುತ್ತಾರೆ. ಹೇಗೆಂದರೆ ಈಗ ನನಗೆ ಇಷ್ಟು ಸಂಬಳ ಇದೆ ಇದರಲ್ಲಿ ಖರ್ಚು ಹೋಗಿ ಇಂತಿಷ್ಟು ಉಳಿಯುತ್ತದೆ. ಉದಾಹರಣೆಗೆ 50,000 ಸಂಬಳ ಇದ್ದರೆ ಮನೆ ಬಾಡಿಗೆ ಅಥವಾ ಮನೆಯ ಸಾಲದ ಕಂತು ಮತ್ತು ದೈನಂದಿನ ಖರ್ಚುಗಳು ಹೋಗಿ 15,000 ತಿಂಗಳಿಗೆ ಉಳಿಯುತ್ತದೆ ಅಂತಾದರೆ ಅದನ್ನು ಇಷ್ಟನ್ನು ಕಾರು ಸಾಲಕ್ಕೆ ಕಟ್ಟಿಬಿಟ್ಟರೆ ಬೇಗ ಸಾಲ ಮರುಪಾವತಿ ಸಾಧ್ಯವಾಗುತ್ತದೆ ಅಂತ ಕಡಿಮೆ ಮರುಪಾವತಿ ಅವಧಿಯ ಸಾಲ ತೆಗೆದುಕೊಳ್ಳುತ್ತಾರೆ. ಸಾಲ ಪಡೆದುಕೊಂಡ ನಂತರ ಒಂದೊಂದೇ ಹೊಸ ಖರ್ಚುಗಳು ಪ್ರಾರಂಭವಾಗುತ್ತವೆ. ಆ ಕಾರಿಗೆ ಇಂಧನ ಹಾಕಬೇಕು ಕಾರು ಇಟ್ಟುಕೊಂಡ ನಂತರ ಅದಕ್ಕೆ ತಕ್ಕಂತೆ ನಮ್ಮ ಸ್ಟೇಟಸ್ ಹೊಂದಿಸಿಕೊಳ್ಳಬೇಕು.

ಹೆಚ್ಚಾಗುತ್ತೆ ಇನ್ಸುರೆನ್ಸ್ ಮೊತ್ತ (Insurance amount increased)

ವರ್ಷಕ್ಕೆ ಏನಿಲ್ಲ ಅಂದರು 15,000 ರೂಪಾಯಿ ಇನ್ಶೂರೆನ್ಸ್ ಕಟ್ಟಬೇಕಾಗುತ್ತದೆ. ಒಂದೇ ಒಂದು ದಿನ ಗಾಡಿ ಓಡಿಸದಿದ್ದರು ಇನ್ಶೂರೆನ್ಸ್ ಕಟ್ಟಲೇಬೇಕು. ಮತ್ತೆ ಏನಾದರೂ ಸಣ್ಣಪುಟ್ಟ ಖರ್ಚುಗಳು ಅಲ್ಲದೆ ಟಯರ್ ಬದಲಾವಣೆ ಸಂದರ್ಭದಲ್ಲಿ ದೊಡ್ಡ ಖರ್ಚು ಎದುರಾಗುತ್ತದೆ ಇದೆಲ್ಲಾ ಮೊದಲು ಗೊತ್ತಿರುವುದಿಲ್ಲ. ಪಡೆದುಕೊಂಡ ಸಾಲವನ್ನು ಸರಿಯಾದ ಸಮಯದೊಳಗೆ ಮರುಪಾವತಿಸದಿದ್ದರೆ ನಮ್ಮ ಸಿಬಿಲ್ ಸ್ಕೋರ್ (CIBIL Score) ಬಿದ್ಹೋಗುತ್ತದೆ. ಆಗ ನಾವು ನಮ್ಮ ಮುಂದಿನ ಯಾವುದಾದರೂ ಯೋಜನೆಗಳಿಗೆ ಕಲ್ಲು ಹಾಕಿದಂತೆ. ಕಾರಣ ಯಾವುದೇ ಸಾಲ ಪಡೆಯಬೇಕಾದರೆ ಒಳ್ಳೆಯ ಸಿಬಿಲ್ ಸ್ಕೋರ್ ಇರುವುದು ತುಂಬಾ ಅವಶ್ಯಕ.

ಹಾಗಾಗಿ ಒಂದು ಕಂಫರ್ಟೆಬಲ್ ಝೋನ್ (Comfortable Zoon)  ಅಂದರೆ ಆರ್ಥಿಕವಾಗಿ ಒಂದು ಹಿತಕರವಾದ ಸ್ಥಿತಿಯಲ್ಲಿ ನಾವು ಇರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಅನಿಸುತ್ತದೆ ಛೆ ಎಂಟು ವರ್ಷಗಳ ಅಂದರೆ 96 ತಿಂಗಳ ಕಂತುಗಳು ಲಭ್ಯವಿರುವ ಆಗಲು ನಾನು ಕಡಿಮೆ ತಿಂಗಳ ಕಂತುಗಳ ಆಯ್ಕೆ ಮಾಡಿ ಎಡವಿ ಬಿದ್ದೆ ಎಂದು ಕಾಣುತ್ತದೆ ಇಂತಹ ಸಮಯದಲ್ಲಿ ನೀವು ರಿಫೈನಾನ್ಸ್ ಲೋನ್ ಆಲೋಚನೆ ಮಾಡಬೇಕು.

ಬಳಕೆ ಮಾಡಿದ ಕಾರಿಗೆ ರಿಫೈನಾನ್ಸ್ ಲೋನ್ ಮಾಡಿಸಿದ್ರೆ ಏನು ಲಾಭ? (Refinance loan benefits by Used Car Loan)

ಕೆಲವು ಸಲ ಸಾಲದ ಬಡ್ಡಿ ದರಗಳು ಕಡಿಮೆಯಾಗುತ್ತವೆ ಅಂದರೆ ನೀವು ಸಾಲ ಪಡೆಯುವಾಗ ಇದ್ದ ಸಾಲದ ಬಡ್ಡಿಯಿಂದ ಕಡಿಮೆ ಬಡ್ಡಿಯಲ್ಲಿ ಸಾಲ (Low Interest Loan) ಸಿಗುವ ಅವಕಾಶಗಳು ಇರುತ್ತವೆ. ಇನ್ನೊಂದು ಯಾವುದಾದರೂ ಒಂದು ಬ್ಯಾಂಕು ಅಥವಾ ಸಂಸ್ಥೆ ಇನ್ನೂ ಹೆಚ್ಚಿನ ಮರುಪಾವತಿ ಅವಧಿಯನ್ನು ಕೊಡ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ರಿಫೈನಾನ್ಸ್ ಅಪ್ಲೈ ಮಾಡಲು ಯೋಚಿಸಬಹುದು.

ಗೊತ್ತಾ ನಿಮಗೆ? ತಲೆಬಿಸಿ ಮಾಡ್ಕೊಳ್ಳೋದೇ ಬೇಡ, ಇಷ್ಟು ಮಾಡಿದ್ರೆ ಸಾಕು, ಕುಳಿತಲ್ಲೇ ವಯಕ್ತಿಕ ಸಾಲಕ್ಕೆ ಅಪ್ರೋವಲ್ ಸಿಕ್ಕಿಬಿಡುತ್ತೆ, ಕ್ಷಣದಲ್ಲಿ ಖಾತೆಗೆ ಹಣ ಜಮಾ ಆಗುತ್ತೆ!

ಮೊದಲು ಸಾಲ ಪಡೆಯುವಾಗ ನಿಮ್ಮ ಸಿಬಿಲ್ ಸ್ಕೋರ್ 750 ಇತ್ತು ಎಂದು ತಿಳಿದುಕೊಳ್ಳಿ. ಆದರೆ ನೀವು ಪಡೆದುಕೊಂಡ ಸಾಲದ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟಿ ನಿಮ್ಮ ಆರ್ಥಿಕ ಕ್ಷಮತೆಯನ್ನು ತೋರಿಸಿಕೊಟ್ಟಾಗ ನಿಮ್ಮ ಸಿವಿಲ್ ಸ್ಕೋರ್ 850 ಆಯ್ತು ಅಂತ ತಿಳಿಯಿರಿ. ಈಗ ಈ ಸಿಬಿಲ್ ಸ್ಕೋರ್ ಸುಧಾರಣೆಯಾದದರಿಂದ ನಿಮಗೆ ಕಡಿಮೆ ಬಡ್ಡಿಯ ಸಾಲ Used Car Loan ಸಿಗುವ ಸಾಧ್ಯತೆಗಳು ಇರುತ್ತವೆ ಇಂತಹ ಸಾಧ್ಯತೆಗಳು ಇದ್ದರೆ ಆಗ ರಿಫೈನಾನ್ಸ್ ಲೋನ್ ಆಯ್ಕೆ ಮಾಡಿಕೊಳ್ಳಿ.

ಸಾಲ ಮರುಪಾವತಿ ಅವಧಿ ನೀವು 5 ವರ್ಷಕ್ಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಊಹಿಸಿಕೊಳ್ಳಿ. ಸಾಲ ಪಡೆದು ಎರಡು ವರ್ಷಗಳ ನಂತರ ನಿಮ್ಮ ಜೀವನದಲ್ಲಿ ಬಾಳ ಸಂಗಾತಿ ಬರಬಹುದು ಅಥವಾ ಮಗುವಿನ ಶೈಕ್ಷಣಿಕ ಖರ್ಚು ಬರಲು ಪ್ರಾರಂಭಿಸಬಹುದು ಇಂತಹ ಸಂದರ್ಭದಲ್ಲಿ ತಿಂಗಳ ಕೊನೆಗೆ ಹಣದ ಕೊರತೆಯಿಂದಾಗಿ ಅಶಾಂತಿಯ ವಾತಾವರಣ ಇರುವ ಸಾಧ್ಯತೆ ಇದೆ. ಆಗ ಎಂಟು ವರ್ಷ ಅವಧಿಯ ಸಾಲ ನಿಮಗೆ ಸಿಕ್ಕಿದರೆ ಕೂಡಲೇ ನಿಮ್ಮ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಇಂತಹ ಸಂದರ್ಭದಲ್ಲಿ ರಿಫೈನಾನ್ಸ್ ಅವಕಾಶವನ್ನು ಆಯ್ಕೆ ಮಾಡಿಕೊಳ್ಳಬಹುದು

ರೀ ಫೈನಾನ್ಸ್ ಬಗ್ಗೆ ಯೋಚಿಸಿದ ಕೂಡಲೇ ನೀವು ಮೊದಲು ನೋಡಬೇಕಾದ್ದು ನಿಮ್ಮ ಸಿಬಿಲ್ ಸ್ಕೋರ್ ಎಷ್ಟು ಎಂಬುದನ್ನು

ಕೂಲಂಕುಶವಾಗಿ ಎಲ್ಲ ರೀತಿಯಿಂದಲೂ ಈಗ ತೆಗೆದುಕೊಂಡ ಸಾಲಕ್ಕಿಂತ ಕಡಿಮೆ ಬಡ್ಡಿ ದೀರ್ಘಾವಧಿ ಮತ್ತು ಅವರ ಟರ್ಮ್ಸ್ ಅಂಡ್ ಕಂಡಿಶನ್ ಪರಿಶೀಲಿಸಿ. ಕೆಲವು ಸಲ ಏನ್ ಬಿ ಎಫ್ ಸಿ ಇವರ ಯೋಜನೆಗಳು ಕೂಡ ಆಕರ್ಷಕವಾಗಿ ಇರುತ್ತವೆ. ಸೂಕ್ಷ್ಮವಾಗಿ ಪರಿಶೀಲಿಸಿ, ಯಾವುದೇ ಆ ತರಹವನ್ನು ತೋರಿಸಬೇಡಿ ಸರಿಯಾದ ಯೋಚನೆ ಮಾಡಿ ಬೇರೆಯವರಿಂದ ಅಂದರೆ ಸ್ನೇಹಿತರಿಂದ ಅನುಭವಸ್ಥರಿಂದ ಸಲಹೆ ಪಡೆದುಕೊಳ್ಳಿ ಮತ್ತು ಮುಂದಿನ ಹೆಜ್ಜೆ ಇಡಿ

ರಿಫೈನಾನ್ಸ್ ತೆಗೆದುಕೊಳ್ಳುವುದು ಎಂದು ನಿರ್ಣಯಿಸಿದ ನಂತರ ಯಾವ ಬ್ಯಾಂಕು ಅಥವಾ ಏನ್ ಬಿ ಎಫ್ ಸಿ ಅವರ ಅವಶ್ಯಕತೆಗಳಿಗೆ ಹೊಂದಿಕೊಂಡು ನೀವು ನಿಮ್ಮ ದಾಖಲೆಗಳನ್ನು ಕ್ರೂಢೀಕರಿಸಬೇಕು ಅಂದರೆ ನಿಮಗೆ ಈಗ ಇರುವ ಆದಾಯ ಮತ್ತು ಪ್ರಕೃತ ಇರುವ ಸಾಲ ಮತ್ತು ಕಂತುಗಳು ಇತ್ಯಾದಿ

ಮತ್ತೊಮ್ಮೆ ಹೇಳುತ್ತೇವೆ ಇಂತಹ ಒಂದು ನಿರ್ಣಯಕ್ಕೆ ಬಂದ ನಂತರ ಸೂಕ್ಷ್ಮವಾಗಿ ಪರಿಶೀಲಿಸಬೇಕಾದ ವಿಚಾರಗಳು ಸಾಲದ ಬಡ್ಡಿದರ ಸಾಲ ಮರುಪಾವತಿ ಅವಧಿ ಮತ್ತು ಏನಾದರೂ ಅಡಗಿಕೊಂಡಿರುವ ಖರ್ಚುಗಳು ಇವೆಯೇ ಎಂದು ನೋಡಿ ದೃಢಪಡಿಸಿಕೊಳ್ಳಿ.

ಅಂತೂ  ರಿಫೈನಾನ್ಸ್ ತೆಗೆದುಕೊಳ್ಳುವ ನಿಮ್ಮ ನಿರ್ಧಾರ ಒಂದು ಬುದ್ಧಿವಂತಿಗೆಯ ಸಮಂಜಸದ ಹೆಜ್ಜೆಯಾಗಿರಬೇಕು. ಈ ಕಾರಣದಿಂದ ತಿಂಗಳ ಕೊನೆಗೆ ಯಾವುದೇ ಆರ್ಥಿಕ ತೊಂದರೆ ಅನುಭವಿಸದೆ ಹಾಗೂ ಸಿಬಿಲ್ ಸ್ಕೋರನ್ನು ಒಳ್ಳೆ ಸ್ಥಿತಿಯಲ್ಲಿ ಕಾಪಾಡಲು ಅಥವಾ ಮೆಂಟೇನ್ ಮಾಡಲು ಸಹಕಾರಿಯಾಗಿರಬೇಕು. ಕಾರು ತೆಗೆದುಕೊಂಡನಂತೆ ಈಗ ತಿಂಗಳ ಕೊನೆಗೆ ಒದ್ದಾಡುವ ಪರಿಸ್ಥಿತಿ ಬಂದಿದೆ ಅನ್ನುವಂತೆ ಆಗಬಾರದು ಏನಿದ್ದರೂ ನಿಮ್ಮ ಆದಾಯ ಮತ್ತು ಖರ್ಚು ನಿಮಗೊಬ್ಬರಿಗೆ ಅಲ್ಲದೆ ಇನ್ಯಾರಿಗೂ ತಿಳಿಯುವಂತೆ ಇರಬಾರದು. ಅಂತಹ ಒಂದು ಮಟ್ಟವನ್ನು ಅಂದರೆ ಸ್ಟೇಟಸ್ ಕಾಪಾಡಲು ಸಾಧ್ಯವಾದರೆ ನೀವು ಕಾರು ಖರೀದಿಸುವ ನಿರ್ಧಾರ ಮಾಡಿರುವುದು ಸಾರ್ಥಕವಾಗುತ್ತದೆ.

Comments are closed.