Bank Loan: ಕೇವಲ 15 ನಿಮಿಷಗಳಲ್ಲಿ ವಯಕ್ತಿಕ ಸಾಲ, ಅರ್ಧ ಗಂಟೆಯಲ್ಲಿ ಗೃಹ ಸಾಲ, ಯಾರಿಗುಂಟು ಯಾರಿಗಿಲ್ಲ ಈ ಆಫರ್; ಇಂದೇ ಈ ಬ್ಯಾಂಕ್ ಲೋನ್ ಗೆ ಅಪ್ಲೈ ಮಾಡಿ!

Bank Loan: ನಮಗೆ ಸಾಕಷ್ಟು ಸಮಯದಲ್ಲಿ ಬ್ಯಾಂಕ್ ನಿಂದ ಸಾಲ (Bank Loan) ತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಅದು ಹೋಂ ಲೋನ್ (Home Loan) ಇರಬಹುದು ಅಥವಾ ಪರ್ಸನಲ್ ಲೋನ್ (Personal Loan) ಆಗಿರಬಹುದು ನಾವು ತಕ್ಷಣಕ್ಕೆ ಈ ಸಾಲ ಸೌಲಭ್ಯ (Loan Fecility)  ಪಡೆದುಕೊಳ್ಳಬೇಕು ಅಂದ್ರೆ ಬ್ಯಾಂಕ್ ಗಳಿಗೆ ಅಲೆದಾಡಬೇಕು. ಆದರೆ ಈ ಕಲ್ಪನೆಯ ಇಂದು ಬದಲಾಗಿದೆ.

If you need Bank Loan for you needs, it can be home loan or it can be personal loan, you can get it by BOB within 15 minutes.

ಹೌದು, ಈಗ ಗೃಹ ಸಾಲಕ್ಕಾಗಲಿ, ವೈಯಕ್ತಿಕ ಸಾಲಕ್ಕಾಗಲಿ ನಾವು ಬ್ಯಾಂಕ್ ನಿಂದ ಬ್ಯಾಂಕ್ ಗೆ ಅಲೆದಾಡುವ ಅಗತ್ಯವಿಲ್ಲ. ಬ್ಯಾಂಕ್ ಡಿಜಿಟಲ್ ಸಾಲ (Digital Loan) ವನ್ನು ನೀಡುತ್ತಿದ್ದು ಕ್ಷಣಮಾತ್ರದಲ್ಲಿ ನಮಗೆ ಸಾಲ ಮಂಜೂರಾಗುತ್ತದೆ. ಈ ರೀತಿ ತ್ವರಿತ ಸಾಲವನ್ನು ಪಡೆದುಕೊಳ್ಳುವುದು ಹೇಗೆ? ಯಾವ ಬ್ಯಾಂಕ್ ನಮಗೆ ತುರ್ತಾಗಿ ಸಾಲ ಸೌಲಭ್ಯವನ್ನು ನೀಡಬಲ್ಲದು? ನಿಮಿಷಗಳಲ್ಲಿ ನಾವು ಹೇಗೆ ಸಾಲ ಪಡೆಯಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಬ್ಯಾಂಕ್ ಆಫ್ ಬರೋಡಾದ  ಲೋನ್! (Bank Loan by BOB)

ಬ್ಯಾಂಕ್ ಆಫ್ ಬರೋಡ (Bank of Baroda) ತನ ಗ್ರಾಹಕರಿಗೆ ತೋರಿದ ಸಾಲವನ್ನು ನೀಡಲು ಮುಂದಾಗಿದೆ ಸಾರ್ವಜನಿಕ ವಲಯದಲ್ಲಿ ಅತ್ಯಂತ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡ ಸುಲಭವಾಗಿ ವೈಯಕ್ತಿಕ ಸಾಲ ಹಾಗೂ ಗೃಹ ಸಾಲವನ್ನು ಪಡೆದುಕೊಳ್ಳಲು ಗ್ರಾಹಕರಿಗೆ ಅವಕಾಶ ಮಾಡಿಕೊಡುತ್ತಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಬ್ಯಾಂಕ್ ಸಾಲ ತೆಗೆದುಕೊಂಡರೆ ವೈಯಕ್ತಿಕ ಸಾಲಕ್ಕೆ ತಾತ್ವಿಕ ಅನುಮೋದನೆ (Approval) ಕೇವಲ 15 ನಿಮಿಷಗಳಲ್ಲಿ ಸಿಗುತ್ತದೆ ಅಷ್ಟೇ ಅಲ್ಲದೆ ಸುಲಭವಾಗಿ ಆನ್ಲೈನ್ (Online) ಮೂಲಕವೇ ಅರ್ಜಿ ಸಲ್ಲಿಸಿ ನಿಮ್ಮ ಖಾತೆಗೆ ತಕ್ಷಣ ಹಣ ಬರುವಂತೆ ಮಾಡಿಕೊಳ್ಳಬಹುದು.

ಬ್ಯಾಂಕ್ ಆಫ್ ಬರೋಡದ ಗೃಹ ಸಾಲ! Home Loan by BOB

ವೈಯಕ್ತಿಕ ಸಾಲ ಮಾತ್ರವಲ್ಲದೆ ಗೃಹ ಸಾಲವನ್ನು ಕೂಡ ಬ್ಯಾಂಕ್ ಆಫ್ ಬರೋಡದಲ್ಲಿ ಪಡೆದುಕೊಳ್ಳಬಹುದು ಅದು ಬಹಳ ತ್ವರಿತವಾಗಿ. ಹೌದು ಕೇವಲ 30 ನಿಮಿಷಗಳಲ್ಲಿ ಗೃಹ ಸಾಲಕ್ಕೆ ತಾತ್ವಿಕ ಅನುಮೋದನೆಯನ್ನು ಬ್ಯಾಂಕ್ ಆಫ್ ಬರೋಡ ನೀಡಲಿದೆ ಇಲ್ಲಿ ನೀವು 10 ಕೋಟಿ ರೂಪಾಯಿಗಳ ವರೆಗೂ ಕೂಡ ಸಾಲ ಪಡೆಯಬಹುದು. ಗೃಹ ಸಾಲ ಪಡೆದುಕೊಳ್ಳುವುದಕ್ಕೆ ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ ಬ್ಯಾಂಕ್ ಆಫ್ ಬರೋಡ ವೆಬ್ಸೈಟ್ ಗೆ ಭೇಟಿ ನೀಡಿ ಡಿಜಿಟಲ್ ಹೋಂ ಲೋನ್ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ಅಪ್ಲೈ ಕೂಡ ಮಾಡಬಹುದು.

ಬ್ಯಾಂಕ್ ಆಫ್ ಬರೋಡಾದ ಬ್ಯಾಂಕ್ ಲೋನ್ ಪಡೆದುಕೊಳ್ಳುವುದು ಹೇಗೆ? (How to get BOB Bank Loan?)

ಬ್ಯಾಂಕ್ ಆಫ್ ಬರೋಡದ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಾಲದ ಅರ್ಹತೆ (Eligibilities) ಯನ್ನು ತಿಳಿದುಕೊಳ್ಳಬೇಕು. ಬಳಿಕ ಅಗತ್ಯ ಇರುವ ಎಲ್ಲಾ ವಿವರಗಳನ್ನು ನೀಡಬೇಕು. ನೀವು ಒಂದು ವೇಳೆ ಗೃಹ ಸಾಲ ಅಥವಾ ವೈಯಕ್ತಿಕ ಸಾಲ ಪಡೆದುಕೊಳ್ಳಲು ಅರ್ಹರಾಗಿದ್ದರೆ ತಕ್ಷಣ ನಿಮ್ಮ ಸಾಲ ಮಂಜೂರ್ ಆಗುತ್ತದೆ.

ಬ್ಯಾಂಕ್ ಆಫ್ ಬರೋಡಾದ ಸಾಲದ ಪ್ರಯೋಜನಗಳು! (Benefits of BOB Bank Loan)

ಬ್ಯಾಂಕ್ ಆಫ್ ಬರೋಡಾದಲ್ಲಿ ಗೃಹ ಸಾಲ ಪಡೆದುಕೊಂಡರೆ 8.6% ನಷ್ಟು ಮಾತ್ರ ಬಡ್ಡಿದರ (Rate of Interest) ವಿಧಿಸಲಾಗುವುದು. ಇದು ನೀವು ತೆಗೆದುಕೊಳ್ಳುವ ಮೊತ್ತ ಅವಧಿ ಮೊದಲಾದವುಗಳನ್ನು ಅವಲಂಬಿಸಿರುತ್ತದೆ. ಇನ್ನು ಈ ಸಾಲದ ಮೇಲೆ ಸಂಸ್ಕರಣಾ ಶುಲ್ಕ (Processing fee) ದ ವಿನಾಯಿತಿ ಕೂಡ ಇದೆ.

ಬ್ಯಾಂಕ್ ಆಫ್ ಬರೋಡ ವಯಕ್ತಿಕ ಸಾಲ ಪಡೆಯುವುದು ಹೇಗೆ? (How to get BOB Personal Loan?)

ಇನ್ನು, ನೀವು ಯಾವುದೇ ಉದ್ಯೋಗ (Job) ದಲ್ಲಿ ಇದ್ದರೆ ಅಥವಾ ಸ್ವಯಂ ಉದ್ಯೋಗ (Own Business)  ಮಾಡುತ್ತಿದ್ದರೆ ನಿಮ್ಮ ಸರಿಯಾದ ವಿವರ ಹಾಗೂ ದಾಖಲೆಗಳನ್ನು ನೀಡಿದರೆ ಆನ್ಲೈನ್ ನಲ್ಲಿಯೇ ಬ್ಯಾಂಕ್ ಆಫ್ ಬರೋಡಾದ ಮೂಲಕ ವೈಯಕ್ತಿಕ ಸಾಲ ಪಡೆಯಬಹುದು. ಇದಕ್ಕಾಗಿ ಮೊದಲು ಬ್ಯಾಂಕ್ ಆಫ್ ಬರೋಡದ ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ಲೋನ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಪೂರ್ವ ಅನುಮೋದಿತ ವಯಕ್ತಿಕ ಸಾಲ ಹಾಗೂ ಡಿಜಿಟಲ್ ವೈಯಕ್ತಿಕ ಸಾಲ (Digital Home Loan) ಎನ್ನುವ ಆಯ್ಕೆ ಕಾಣಿಸುತ್ತಿದೆ. ನಿಮ್ಮ ಆದ್ಯತೆಯ ಮೇರೆಗೆ ಬೇಕಾಗಿರುವ ಆಯ್ಕೆಯನ್ನು ಕ್ಲಿಕ್ ಮಾಡಿ.

ಯೆಸ್, ಇದು ನಿಮಗಾಗಿ, ಬ್ಯಾಂಕ್ ನಿಂದ ಬಂಪರ್ ಆಫರ್; ಅಡಮಾನವಿಲ್ಲದೇ ಸಿಗುತ್ತೆ ಸಾಲ, ಕಡಿಮೆ ಬಡ್ಡಿ ಹೆಚ್ಚು ಬೆನಿಫಿಟ್!

ನೀವು ಡಿಜಿಟಲ್ ಬ್ಯಾಂಕ್ ಸಾಲವನ್ನು ತೆಗೆದುಕೊಳ್ಳುವುದಿದ್ದರೆ 10 ಲಕ್ಷದವರೆಗೆ ಪಡೆಯಬಹುದು. ಹಾಗೂ ಇದಕ್ಕೆ 11.75% ನಷ್ಟು ಬಡ್ಡಿದರ ಇದೆ. 60 ತಿಂಗಳ ವರೆಗೆ ಮರುಪಾವತಿ ಮಾಡಲು ಕಾಲಾವಕಾಶ ಇರುತ್ತದೆ. ಹಾಗೂ ನಿಮ್ಮ ಯಾವುದೇ ಅಗತ್ಯದ ಸಂದರ್ಭದಲ್ಲಿ ಸಾಲ ಪಡೆಯಬಹುದು.

ಪೂರ್ವ ಅನುಮೋದಿತ ಬ್ಯಾಂಕ್ ಸಾಲ (Per Approved Bank Loan) – ಇನ್ನು ನೀವು ಪ್ರೀ ಅಪ್ರೊಡ ಲೋನ್ ಪಡೆದುಕೊಳ್ಳಲು ಬಯಸುವುದಾದರೆ ಐದು ಲಕ್ಷ ರೂಪಾಯಿಗಳವರೆಗೆ ಪಡೆಯಬಹುದು ಹಾಗೂ ಬಡ್ಡಿದರ 11.75% ನಿಂದ ಆರಂಭವಾಗುತ್ತದೆ. ಇಎಂಐ (EMI) ಮೂಲಕವೇ ಸಾಲ ಹಿಂತಿರುಗಿಸಬಹುದು ಹಾಗೂ ಸಾಲ ಹಿಂತಿರುಗಿಸುವುದಕ್ಕೆ 36 ತಿಂಗಳುಗಳ ಅವಕಾಶ ಇದೆ. ನಿಮ್ಮ ಆದಾಯದ ದಾಖಲೆಯನ್ನು ನೀಡಿದರೆ ಕ್ಷಣಮಾತ್ರದಲ್ಲಿ ಪೂರ್ವ ಅನುಮೋದಿತ ಸಾಲದ ಮೊತ್ತ ನಿಮ್ಮ ಖಾತೆಯನ್ನು ತಲುಪುತ್ತದೆ.

ಇಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನಿಮ್ಮ ಮೊಬೈಲ್ ಸಂಖ್ಯೆ (Mobile No.) ನಮೂದಿಸಬೇಕು. ಹಾಗೂ ನಿಮ್ಮ ಮೊಬೈಲ್ ಗೆ ಬಂದ ಓಟಿಪಿಯನ್ನು ನಮೂದಿಸಬೇಕು. ಈ ರೀತಿ ಮಾಡಿದರೆ ಪರ್ಸನಲ್ ಲೋನ್ ಪಡೆದುಕೊಳ್ಳಲು ತಕ್ಷಣ ಅರ್ಜಿ ಸಲ್ಲಿಸಬಹುದು. ಇನ್ನು ಯಾರ ಕ್ರೆಡಿಟ್ ಸ್ಕೋರ್ ಉತ್ತಮವಾಗಿರುತ್ತದೆಯೋ ಅಂದರೆ ಕನಿಷ್ಠ 250 ಕ್ಕಿಂತ ಹೆಚ್ಚಿರುತ್ತದೆಯೋ ಅಂತವರಿಗೆ ಯಾವುದೇ ಹೆಚ್ಚಿನ ದಾಖಲೆಯನ್ನು ಸಲ್ಲಿಕೆ ಮಾಡದೆ ಸಾಲ ಸೌಲಭ್ಯ ತೆಗೆದುಕೊಳ್ಳಲು ಅವಕಾಶವಿದೆ.

ಇವಿಷ್ಟು ಬ್ಯಾಂಕ್ ಆಫ್ ಬರೋಡದ ಬ್ಯಾಂಕ್ ಲೋನ್ (Bank of Baroda Loan) ಬಗ್ಗೆ ಇರುವ ಮಾಹಿತಿ. ಹೆಚ್ಚಿನ ಮಾಹಿತಿಗಾಗಿ (For more information Click Here https://www.bankofbaroda.in/personal-banking/loans)  ನೀವು ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಭೇಟಿ ನೀಡಿ ನಿಮಗೆ ಸಾಲದ ಬಗ್ಗೆ ಇರುವ ಡೌಟ್ ಕ್ಲಿಯರ್ ಮಾಡಿಕೊಂಡು ಸಾಲಕೆ ಅಪ್ಲೈ ಮಾಡಿ ಹಣ ಪಡೆದುಕೊಳ್ಳಬಹುದು.

Comments are closed.